ಪತಿ ಏನು ಮಾಡಿದರೂ ಅದನ್ನು ಪತ್ನಿ ಅನುಸರಿಸುವ ಅಗತ್ಯವಿಲ್ಲ: ಬಿಜೆಪಿ ಸೇರಿದ ಅಮರೀಂದರ್ ಸಿಂಗ್ ಹೀಗೆ ಹೇಳಿದ್ದೇಕೆ?
ಬಿಜೆಪಿ ಸೇರ್ಪಡೆಯಾದ ಕಾಂಗ್ರೆಸ್‌ನ ಮಾಜಿ ನಾಯಕ ಅಮರಿಂದರ್ ಸಿಂಗ್ ಬೆನ್ನಲ್ಲೇ ಅವರ ಪತ್ನಿಯೂ ಕೇಸರಿ ಪಕ್ಷ ಸೇರ್ತಾರಾ ಎಂಬ ಪ್ರಶ್ನೆಗೆ ಖುದ್ದು ಅಮರೀಂದರ್ ಸಿಂಗ್ ಅವರೇ ಉತ್ತರ ಕೊಟ್ಟಿದ್ದಾರೆ.
Published: 19th September 2022 08:59 PM | Last Updated: 20th September 2022 01:29 PM | A+A A-

ಕ್ಯಾ.ಅಮರಿಂದರ್ ಸಿಂಗ್
ನವದೆಹಲಿ: ಬಿಜೆಪಿ ಸೇರ್ಪಡೆಯಾದ ಕಾಂಗ್ರೆಸ್‌ನ ಮಾಜಿ ನಾಯಕ ಅಮರಿಂದರ್ ಸಿಂಗ್ ಬೆನ್ನಲ್ಲೇ ಅವರ ಪತ್ನಿಯೂ ಕೇಸರಿ ಪಕ್ಷ ಸೇರ್ತಾರಾ ಎಂಬ ಪ್ರಶ್ನೆಗೆ ಖುದ್ದು ಅಮರೀಂದರ್ ಸಿಂಗ್ ಅವರೇ ಉತ್ತರ ಕೊಟ್ಟಿದ್ದಾರೆ.
ಅಮರೀಂದರ್ ಸಿಂಗ್ ಅವರ ಪತ್ನಿ ಪ್ರಣೀತ್ ಕೌರ್ ಇನ್ನೂ ಕಾಂಗ್ರೆಸ್ ಸದಸ್ಯರಾಗಿದ್ದಾರೆ. ಪತ್ನಿಯೂ ಪತಿಯ ಹಾದಿ ಹಿಡಿಯುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅಮರೀಂದರ್ ಸಿಂಗ್ , ಪತಿ ಏನು ಮಾಡಿದರೂ ಪತ್ನಿ ಅನುಸರಿಸುವ ಅಗತ್ಯವಿಲ್ಲ ಎಂದು ಉತ್ತರಿಸಿದರು.
ಅಮರೀಂದರ್ ಸಿಂಗ್ ಅವರ ಪತ್ನಿ ಪ್ರಣೀತ್ ಕೌರ್ ಅವರು 2009-2014ರ ಅವಧಿಯಲ್ಲಿ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಕಿರಿಯ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಇದನ್ನೂ ಓದಿ: ಪಂಜಾಬ್ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಬಿಜೆಪಿಗೆ ಸೇರ್ಪಡೆ; ಪಿಎಲ್ ಸಿ ಪಕ್ಷ ವಿಲೀನ
ತಮ್ಮ ಹಿಂದಿನ ಬಿಜೆಪಿ ಪಕ್ಷ ಸೇರಿದ ಪಂಜಾಬ್ ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಕೂಡ ತಮ್ಮ ಪಂಜಾಬ್ ಲೋಕ ಕಾಂಗ್ರೆಸ್ ಅನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದರು. ಐದು ದಶಕಗಳ ತಮ್ಮ ಪಕ್ಷವಾದ ಕಾಂಗ್ರೆಸ್‌ನಿಂದ ಹೊರಬಂದ ಕೆಲವೇ ದಿನಗಳಲ್ಲಿ ಅವರು ಕಳೆದ ವರ್ಷ ಪಕ್ಷವನ್ನು ಸ್ಥಾಪಿಸಿದ್ದರು.
ದೆಹಲಿ ಬಿಜೆಪಿ ಪ್ರಧಾನ ಕಛೇರಿಯಲ್ಲಿ ಕೇಂದ್ರ ಸಚಿವರಾದ ಕಿರಣ್ ರಿಜಿಜು ಮತ್ತು ನರೇಂದ್ರ ಸಿಂಗ್ ತೋಮರ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ಬೆನ್ನಲ್ಲೇ, ದೇಶದ ಹಿತಾಸಕ್ತಿಗಳನ್ನು ನೋಡಿಕೊಳ್ಳುವ ಪಕ್ಷವನ್ನು ಸೇರುವ ಸಮಯ ಇದು ಎಂದು ಹೇಳಿದರು. ಅಮರಿಂದರ್ ಸಿಂಗ್ ರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಬಿಜೆಪಿಯು ಈಗ ಪಂಜಾಬ್‌ನಲ್ಲಿ ಪ್ರಮುಖ ಸಿಖ್ ಮುಖವನ್ನು ಹೊಂದಿದೆ. ಅಮರೀಂದರ್ ಸಿಂಗ್ ಅವರು ಹಲವಾರು ದಶಕಗಳಿಂದ ರಾಜ್ಯ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.