ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಹೋಗುವವರಿಗೆ ನನ್ನ ಕಾರು ಕೊಡುತ್ತೇನೆ: ಕಮಲ್ ನಾಥ್ 

ಕಾಂಗ್ರೆಸ್ ಪಕ್ಷವನ್ನು ತೊರೆಯುವ ಯಾರನ್ನೂ ತಡೆಯುವುದಿಲ್ಲ ಹಾಗೆಯೇ  ಯಾರಾದರೂ ಬಿಜೆಪಿಗೆ ಸೇರಲು ಬಯಸಿದರೆ ನನ್ನ ಕಾರನ್ನು ಬೇಕಾದರೂ ಕೊಡುತ್ತೇನೆ ಎಂದು ಕಾಂಗ್ರೆಸ್ ಮುಖಂಡ ಕಮಲ್‌ ನಾಥ್‌  ವ್ಯಂಗ್ಯವಾಡಿದ್ದಾರೆ.
ಕಮಲ್ ನಾಥ್
ಕಮಲ್ ನಾಥ್

ಭೋಪಾಲ್ : ಕಾಂಗ್ರೆಸ್ ಪಕ್ಷವನ್ನು ತೊರೆಯುವ ಯಾರನ್ನೂ ತಡೆಯುವುದಿಲ್ಲ ಹಾಗೆಯೇ ಯಾರಾದರೂ ಬಿಜೆಪಿಗೆ ಸೇರಲು ಬಯಸಿದರೆ ನನ್ನ ಕಾರನ್ನು ಬೇಕಾದರೂ ಕೊಡುತ್ತೇನೆ ಎಂದು ಕಾಂಗ್ರೆಸ್ ಮುಖಂಡ ಕಮಲ್‌ ನಾಥ್‌ ವ್ಯಂಗ್ಯವಾಡಿದ್ದಾರೆ.ಟ

ಭೂಪಾಲ್ ನಲ್ಲಿ ಮಾತನಾಡಿದ ಅವರು, ನೀವು ಏನಂದುಕೊಂಡಿದ್ದೀರಿ..? ಕಾಂಗ್ರೆಸ್‌ ನಾಶ  ಆಗುತ್ತೆಂದೇ..? ಕೆಲವರು ಬಿಜೆಪಿಗೆ ಸೇರಬೇಕೆಂದು ನೀವು ಹೇಳುತ್ತಿದ್ದೀರಿ. ಯಾರಾದರೂ ಬಿಜೆಪಿಗೆ ಸೇರುವುದಾದರೆ ಹೋಗಲಿ. ನಾವು ಯಾರನ್ನೂ ತಡೆಯುವುದಿಲ್ಲ, ಕಾಂಗ್ರೆಸ್‌ ನಾಯಕರು ಹಾಗೂ ಕಾರ್ಯಕರ್ತರು ಬಿಜೆಪಿಗೆ ಹೋಗುವುದಾದರೆ ಹಾಗೂ ತಮ್ಮ ಕನಸು ಹಾಗೂ ಯೋಚನೆಗಳನ್ನು ಕೇಸರಿ ಪಕ್ಷದೊಂದಿಗೆ ಕಾಣುವುದಾರೆ ಹೋಗಲಿ.. ಅವರು ಹೋಗಿ ಬಿಜೆಪಿಗೆ ಸೇರಲು ನಾನು ನನ್ನ ಕಾರನ್ನು ಕೊಡುತ್ತೇನೆ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಗೋವಾ ರಾಜ್ಯದ 11 ಶಾಸಕರ ಪೈಕಿ 8 ಶಾಸಕರು ಬಿಜೆಪಿಗೆ ಹೋದ ಕೆಲ ದಿನಗಳ ಬಳಿಕ ಕಮಲ್‌ ನಾಥ್‌ ಈ ಹೇಳಿಕೆ ನೀಡಿದ್ದಾರೆ. ಚುನಾವಣೆಯಲ್ಲಿ ಗೆದ್ದ ಬಳಿಕ ಕಾಂಗ್ರೆಸ್‌ ತೊರೆಯುವುದಿಲ್ಲ ಎಂದು ಪ್ರಮಾಣ ಮಾಡಿದ್ದರೂ ಸಹ ಬಿಜೆಪಿಗೆ ಸೇರಿದ್ದು, ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ, ಗೋವಾದಲ್ಲಿ ಕಾಂಗ್ರೆಸ್‌ ನಾಶವಾಗಿದೆ ಎಂದೂ ಚರ್ಚೆಯಾಗುತ್ತಿದೆ.

ಇತ್ತೀಚೆಗೆ ಮಧ್ಯ ಪ್ರದೇಶದ ಮಾಜಿ ಶಾಸಕ ಹಾಗೂ ಕಮಲ್‌ ನಾಥ್‌ ಸಹಚರ ಅರುಣೋದಯ್‌ ಚೌಬೇ ಕಾಂಗ್ರೆಸ್‌ ತೊರೆದಿದ್ದಾರೆ.  ಅಲ್ಲದೆ, ಹಿರಿಯ ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌ ಸಹ ಕಾಂಗ್ರೆಸ್‌ನೊಂದಿಗೆ ತಮ್ಮ 5 ದಶಕಗಳ ಸಂಬಂಧವನ್ನು ತೊರೆದು, ಆಗಸ್ಟ್‌ 26 ರಂದು ಕಾಂಗ್ರೆಸ್‌ ತೊರೆದಿದ್ದು ಹಾಗೂ ಕೈ ಪಕ್ಷ ಸಮಗ್ರವಾಗಿ ನಾಶವಾಗಿದೆ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com