ಉತ್ತರ ಪ್ರದೇಶ ಮುಖ್ಯಮಂತ್ರಿಯನ್ನು ಸ್ಫೋಟಿಸುವುದಾಗಿ ಬೆದರಿಕೆ ಪ್ರಕರಣ: ಆರೋಪಿಗೆ ಜಾಮೀನು ನಿರಾಕರಣೆ

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಪ್ರಕರಣದ ಆರೋಪಿಗೆ ಲಖನೌ ಕೋರ್ಟ್ ಜಾಮೀನು ನಿರಾಕರಿಸಿದೆ.
ನ್ಯಾಯಾಲಯ
ನ್ಯಾಯಾಲಯ

ಲಖನೌ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಪ್ರಕರಣದ ಆರೋಪಿಗೆ ಲಖನೌ ಕೋರ್ಟ್ ಜಾಮೀನು ನಿರಾಕರಿಸಿದೆ.

ಪೊಲೀಸ್ ಹೆಲ್ಪ್ ಲೈನ್ ಗೆ ವಾಟ್ಸ್ ಆಪ್ ಮೂಲಕ ಈ ಬೆದರಿಕೆ ಮೆಸೇಜ್ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಫರಾಜ್ ಎಂಬಾತನನ್ನು ರಾಜಸ್ಥಾನ ಪೊಲೀಸರು ಆ.12 ರಂದು ಬಂಧಿಸಿದ್ದರು.

ವಿಶೇಷ ನ್ಯಾಯಾಧೀಶರಾದ ಡಾ. ಅಶ್ವಿನ್ ಕುಮಾರ್, ಈ ಬಂಧಿತನ ಜಾಮೀನು ಅರ್ಜಿಯನ್ನು ನ್ಯಾ.ಡಾ ಅವ್ನೀಶ್ ಕುಮಾರ್ ನಿರಾಕರಿಸಿದ್ದು, ಇದು ಸೈಬರ್ ಕ್ರೈಮ್ ಹಾಗೂ ರಾಷ್ಟ್ರೀಯ, ಸಾರ್ವಜನಿಕ ಭದ್ರತೆಗೆ ಸಂಬಂಧಿಸಿದ ವಿಷಯವಾಗಿದೆ ಎಂದು ಹೇಳಿದ್ದಾರೆ. 

ಈ ಹಂತದಲ್ಲಿ ಆರೋಪಿ ಜಾಮೀನಿಗೆ ಅರ್ಹನಾಗಿರುವುದಿಲ್ಲ. ಆತ ಸಾರ್ವಜನಿಕರ ಮನಸ್ಸಿನಲ್ಲಿ ಭಯ ಮೂಡಿಸುವ ಉದ್ದೇಶದಿಂದ ಈ ಮೆಸೇಜ್ ಮಾಡಿದ್ದ ಎಂದು ಕೋರ್ಟ್ ಹೇಳಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com