ದೆಹಲಿಯಲ್ಲಿ ಭಾರೀ ಮಳೆ: ಗುರುಗ್ರಾಮ್ ಖಾಸಗಿ ಕಚೇರಿಗಳಿಗೆ ವರ್ಕ್ ಫ್ರಮ್ ಹೋಮ್ ಸಲಹೆ, ಶಾಲೆಗಳಿಗೆ ರಜೆ ಘೋಷಣೆ

ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. 
ದೆಹಲಿಯಲ್ಲಿ ಭಾರೀ ಮಳೆ
ದೆಹಲಿಯಲ್ಲಿ ಭಾರೀ ಮಳೆ

ಗುರುಗ್ರಾಮ: ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. 

ಭಾರೀ ಮಳೆಯಿಂದ ದೆಹಲಿಯ ಹಲವು ಪ್ರದೇಶಗಳು ಶುಕ್ರವಾರ ಟ್ರಾಫಿಕ್ ಜಾಮ್‌ಗೆ ಸಾಕ್ಷಿಯಾಗಿದ್ದು, ಹಲವಾರು ಪ್ರಮುಖ ಪ್ರಮುಖ ಪ್ರದೇಶ ಸಹ ಜಲಾವೃತವಾಗಿವೆ.

ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜನ ತಮ್ಮ ಪ್ರಯಾಣವನ್ನು ಮುಂದೂಡುವಂತೆ ದೆಹಲಿ ಟ್ರಾಫಿಕ್ ಪೊಲೀಸರು ಕೇಳಿಕೊಂಡಿದ್ದಾರೆ.

ಮಳೆ ಹಿನ್ನೆಲೆಯಲ್ಲಿ ಎಲ್ಲಾ ಖಾಸಗಿ ಮತ್ತು ಕಾರ್ಪೊರೇಟ್ ಕಚೇರಿಗಳು ಕಚೇರಿಗಳು ತಮ್ಮ ಸಿಬ್ಬಂದಿಗೆ  ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಗರುಗ್ರಾಮ್ ಜಿಲ್ಲಾಡಳಿತ ಸಲಹೆ ನೀಡಿದೆ.

ಸಂಚಾರ ದಟ್ಟಣೆಯನ್ನು ತಪ್ಪಿಸಲು ಎಲ್ಲಾ ಕಾರ್ಪೊರೇಟ್ ಕಚೇರಿಗಳು ಮತ್ತು ಖಾಸಗಿ ಸಂಸ್ಥೆಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಬೇಕು ಎಂದು ಗುರುಗ್ರಾಮ್ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ(ಡಿಡಿಎಂಎ) ಹೇಳಿದೆ.

"ಸೆಪ್ಟೆಂಬರ್ 23 ರಂದು ಗುರುಗ್ರಾಮ್ ಜಿಲ್ಲೆಯ ಭಾರೀ ಮಳೆಯ ಮುನ್ಸೂಚನೆಯ ದೃಷ್ಟಿಯಿಂದ, ಜಲಾವೃತ ಮತ್ತು ಸಂಚಾರ ದಟ್ಟಣೆಯ ಸಾಧ್ಯತೆಗಳಿವೆ" ಎಂದು ಡಿಡಿಎಂಎ ಎಚ್ಚರಿಸಿದೆ.

ಇನ್ನು ದೆಹಲಿ ಮತ್ತು ರಾಷ್ಟ್ರರಾಜಧಾನಿ ಪ್ರದೇಶದಲ್ಲಿ ಇಂದು ಸಹ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com