ಮಾನವನ ಕ್ರೌರ್ಯ: ಅಕ್ರಮವಾಗಿ ವಶದಲ್ಲಿರಿಸಿಕೊಂಡಿದ್ದ ಹಾವುಗಳ ಬಾಯಿ ಬಂದ್ ಮಾಡಲು ಅಂಟು ಬಳಕೆ!

ಮಾನವ ಸಮಾಜದಲ್ಲಿ ಪ್ರಾಣಿಗಳಿಗೆ ನಿಂದನೆ ಅಥವಾ ಹಾನಿ ಸಾಮಾನ್ಯವಾಗಿದೆ. ಇತ್ತೀಚಿಗೆ ಛತ್ತೀಸ್ ಗಢದ ರಾಜಧಾನಿಯಲ್ಲಿ ಮಾನವನ ಕ್ರೌರ್ಯತೆ ಬೆಳಕಿಗೆ ಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಯಪುರ: ಮಾನವ ಸಮಾಜದಲ್ಲಿ ಪ್ರಾಣಿಗಳಿಗೆ ನಿಂದನೆ ಅಥವಾ ಹಾನಿ ಸಾಮಾನ್ಯವಾಗಿದೆ. ಇತ್ತೀಚಿಗೆ ಛತ್ತೀಸ್ ಗಢದ ರಾಜಧಾನಿಯಲ್ಲಿ ಮಾನವನ ಕ್ರೌರ್ಯತೆ ಬೆಳಕಿಗೆ ಬಂದಿದೆ. ಅಕ್ರಮವಾಗಿ ವಶದಲ್ಲಿಟ್ಟುಕ್ಕೊಂಡಿದ್ದ ಹಾವುಗಳು ನಿರ್ಜಲೀಕರಗೊಳ್ಳುವ ಮಟ್ಟಿಗೆ ಬಳಲುತ್ತಿದ್ದವು. ಇನ್ನೂ ಕೆಲವು ಹಾವುಗಳ ಬಾಯಿಯನ್ನು ಹಾವಾಡಿಗರು ಅಥವಾ ಭಿಕ್ಷಾಟನೆಯ ಉದ್ದೇಶವುಳ್ಳವರು ಮುಚ್ಚಿದ್ದರಿಂದ ಹಸಿವಿನಿಂದ ನರಳುತ್ತಿದ್ದವು. 

ವಶಕ್ಕೆ ಪಡೆದ ಹಾವುಗಳ ಬಾಯಿಯನ್ನು ಬಿಗಿಯಾಗಿ ಮುಚ್ಚಲು ಸೆಲ್ಲೋ ಟೇಪ್‌ಗಳ ಜೊತೆಗೆ ಕೆಲವು ಅಂಟುಗಳನ್ನು ಬಳಸಿರುವುದನ್ನು ಕಂಡು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪ್ರಾಣಿ ಪ್ರಿಯರು ಆಘಾತಕ್ಕೊಳಗಾಗಿದ್ದಾರೆ.

ಶ್ರಾವಣದಂತಹ ಶುಭ ಮಾಸಗಳನ್ನು ಬಳಸಿಕೊಂಡು ಕೆಲವು ಅಪರಿಚಿತ ವ್ಯಕ್ತಿಗಳು, ಹಣಕ್ಕಾಗಿ ಭಕ್ತರ ಮೇಲೆ ಪ್ರಭಾವ ಬೀರುವ ಪ್ರಯತ್ನದಲ್ಲಿ ಸಾರ್ವಜನಿಕರ ನಡುವೆ ಹಾವುಗಳನ್ನು ತೋರಿಸಿದ್ದಾರೆ ಎಂಬ ಸುಳಿವು ಮೇರೆಗೆ ಇತ್ತೀಚಿನ ಕಳ್ಳ ಬೇಟೆಗಾರರ ಮೇಲೆ ದಾಳಿ ನಡೆಸಿದಾಗ ಇದು ಬೆಳಕಿಗೆ ಬಂದಿದೆ. 

ಮನರಂಜನೆ ಅಥವಾ ಧಾರ್ಮಿಕ ನಂಬಿಕೆಯ ಹೆಸರಿನಲ್ಲಿ ಶೋಷಣೆ  ಮುಂದುವರೆಸಿದ್ದರಿಂದ ಇಂತಹ ಆಚರಣೆಗಳು ಅವ್ಯಾಹತವಾಗಿ ನಡೆಯುತ್ತಿವೆ. ದೇವರ ಆಶೀರ್ವಾದದ ಭರವಸೆಯೊಂದಿಗೆ ಹಾವುಗಳನ್ನು ಪ್ರದರ್ಶನಕ್ಕಿಟ್ಟು,  ನಂತರ ಭಕ್ತರಿಂದ ಕಾಣಿಕೆ ಪಡೆಯಲಾಗುತ್ತಿದೆ. 

ಭಾರತೀಯ ಇಲಿ ಹಾವುಗಳು, ನಾಗರಹಾವು ಸೇರಿದಂತೆ  20 ವಿವಿಧ ಜಾತಿಯ ಹಾವುಗಳನ್ನು ರಕ್ಷಿಸಿ ರಾಜ್ಯ ರಾಜಧಾನಿಯಿಂದ ಸುಮಾರು 60 ಕಿಮೀ ದೂರದಲ್ಲಿರುವ ಬರ್ನವಪಾರ ವನ್ಯಜೀವಿ ಅಭಯಾರಣ್ಯದಲ್ಲಿ ಬಿಡಲಾಗಿತ್ತು. ನಂತರ ಅವುಗಳನ್ನು ಬರ್ನವಪಾರ ಅರಣ್ಯದಲ್ಲಿ ಬಿಡಲು ಅವುಗಳನ್ನು ವಶಕ್ಕೆ ಪಡೆದ ನಂತರ ಹಾವುಗಳು ಬಾಯಿ ಆಡಿಸುತ್ತಿರಲಿಲ್ಲ. ಹಾಗಾಗೀ ಪರಿಶೀಲನೆ ನಡೆಸಿದಾಗ ಟೇಪ್ ಮತ್ತಿತರ ಅಂಟುಗಳನ್ನು ಬಳಸಿರುವುದು ಕಂಡುಬಂದಿತು. ಕೂಡಲೇ ಅವುಗಳನ್ನು ತೆಗೆದು, ಸುಲಭವಾಗಿ ಬಾಯಿ ಆಡುವಂತೆ ಸ್ವಚ್ಛಗೊಳಿಸಲಾಯಿತು ಎಂದು ನೋವಾ ನೇಚರ್ ಸೊಸೈಟಿಯ ಮೊಯಿಜ್ ಖಾನ್ ಹೇಳಿದರು. 

ಧಾರ್ಮಿಕ ನಂಬಿಕೆಯ ಹೆಸರಿನಲ್ಲಿ ಇಂತಹ ಮಾನವ ಕ್ರೌರ್ಯತೆಯನ್ನು ಎಂದಿಗೂ ಅವಕಾಶ ನೀಡಬಾರದು. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿಯಲ್ಲಿ ವಿವಿಧ ರೀತಿಯ ಹಾವುಗಳನ್ನು ರಕ್ಷಿಸಲಾಗಿದೆ ಮತ್ತು ಅವುಗಳನ್ನು ಸ್ವಾಧೀನದಲ್ಲಿಟ್ಟುಕೊಳ್ಳುವುದು ಕಾನೂನುಬಾಹಿರ ಅಪರಾಧವಾಗಿದೆ. ಹಾವುಗಳ ಬಾಯಿ ಮುಚ್ಚುವ ಇಂತಹ ಕೃತ್ಯ ನಿಜಕ್ಕೂ ಅಮಾನವೀಯವಾಗಿದೆ ಎಂದು ವನ್ಯಜೀವಿ ಪ್ರೇಮಿ ನಿತಿನ್ ಸಿಂಘ್ವಿ ಹೇಳಿದ್ದಾರೆ.

ಇಂತಹ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿರುವ ಹಾವಾಡಿಗರು ಮತ್ತಿತರರುಸುರಕ್ಷತೆಯ ಕಾರಣಕ್ಕಾಗಿ ಟೇಪ್ ಮತ್ತು ಅಂಟುಗಳನ್ನು ಬಳಸಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ. "ಕೆಲವರು ಹಾವುಗಳನ್ನು ಭುಜಕ್ಕೆ ಸುತ್ತಿಕೊಂಡು ರೂ. 100-200 ರೂ. ಪಡೆಯುತ್ತಾರೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com