ಚಂಡೀಗಢ ಖಾಸಗಿ ವಿಡಿಯೋ ವೈರಲ್ ಪ್ರಕರಣ: ಸೇನಾ ಸಿಬ್ಬಂದಿ ಬಂಧನ

ಪಂಜಾಬ್‌ನ ಚಂಡೀಗಢ ವಿಶ್ವವಿದ್ಯಾಲಯದ ಹುಡುಗಿಯರ ಪೋರ್ನ್ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇನಾ ಸಿಬ್ಬಂದಿಯನ್ನು ಬಂಧಿಸಿರುವುದಾಗಿ ಪಂಜಾಬ್ ಪೊಲೀಸರು ಶನಿವಾರ ತಿಳಿಸಿದ್ದಾರೆ.
ಸೇನಾ ಸಿಬ್ಬಂದಿ ಬಂಧನ
ಸೇನಾ ಸಿಬ್ಬಂದಿ ಬಂಧನ

ಚಂಡೀಗಢ: ಪಂಜಾಬ್‌ನ ಚಂಡೀಗಢ ವಿಶ್ವವಿದ್ಯಾಲಯದ ಹುಡುಗಿಯರ ಪೋರ್ನ್ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇನಾ ಸಿಬ್ಬಂದಿಯನ್ನು ಬಂಧಿಸಿರುವುದಾಗಿ ಪಂಜಾಬ್ ಪೊಲೀಸರು ಶನಿವಾರ ತಿಳಿಸಿದ್ದಾರೆ.

ಹಾಸ್ಟೆಲ್ ನ ಬಾತ್ ರೂಂನಲ್ಲಿ ಹಲವಾರು ಯುವತಿಯ ಆಕ್ಷೇಪಾರ್ಹ ವೀಡಿಯೊ ಚಿತ್ರೀಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಇನ್ನು ಪ್ರಕರಣ ಸಂಬಂಧ ಸೇನಾ ಸಿಬ್ಬಂದಿ ಸಂಜೀವ್ ಸಿಂಗ್ ಎಂಬುವರನ್ನು ಅರುಣಾಚಲ ಪ್ರದೇಶದಿಂದ ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಹೇಳಿದ್ದು ಅವರನ್ನು ಮೊಹಾಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದರು. 

ಚಂಡೀಗಢ ವಿಶ್ವವಿದ್ಯಾಲಯ ಪ್ರಕರಣಕ್ಕೆ ಪ್ರಮುಖ ತಿರುವು ಸಿಕ್ಕಿದೆ. ಭಾರತೀಯ ಸೇನೆ, ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ಪೊಲೀಸರ ನೆರವಿನೊಂದಿಗೆ ಅರುಣಾಚಲ ಪ್ರದೇಶದ ಸೆಲಾ ಪಾಸ್‌ನಲ್ಲಿ ಆರೋಪಿ ಸೇನಾ ಸಿಬ್ಬಂದಿ ಸಂಜೀವ್ ಸಿಂಗ್ ಎಂಬುವರನ್ನು ಬಂಧಿಸಲಾಗಿದ್ದು ಮೊಹಾಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಎಲ್ಡಿ ಸಿಜೆಎಂ ಬೊಮ್ಡಿಲ್ಲಾದಿಂದ ಟ್ರಾನ್ಸಿಟ್ ರಿಮಾಂಡ್ ಪಡೆಯಲಾಗಿದೆ ಎಂದು ಡಿಜಿಪಿ ಟ್ವೀಟ್‌ ಮಾಡಿದ್ದಾರೆ.

ಹಿಮಾಚಲ ಪ್ರದೇಶದ ವಿದ್ಯಾರ್ಥಿನಿ ಹಾಗೂ ಇಬ್ಬರು ಯುವಕರು ಸೇರಿದಂತೆ ಮೂವರನ್ನು ಪೊಲೀಸರು ಈ ಹಿಂದೆ ಬಂಧಿಸಿದ್ದರು.

ಹಾಸ್ಟೆಲ್‌ನ ಸಿಬ್ಬಂದಿಯೊಬ್ಬರು ವಾಶ್‌ರೂಮ್‌ನಲ್ಲಿ ವಿದ್ಯಾರ್ಥಿಗಳ ಹಲವಾರು ಆಕ್ಷೇಪಾರ್ಹ ವೀಡಿಯೊಗಳನ್ನು ಚಿತ್ರೀಕರಿಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ ಹಿನ್ನೆಲೆಯಲ್ಲಿ ಕಳೆದ ವಾರ ಪಂಜಾಬ್‌ನ ಮೊಹಾಲಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಪ್ರತಿಭಟನೆಗಳು ನಡೆದಿದ್ದವು.

ಇನ್ನು ಕೆಲ ವಿದ್ಯಾರ್ಥಿಗಳು ವಿಡಿಯೋ ಸೋರಿಕೆಯಾಗಿದೆ ಎಂದು ಆರೋಪಿಸಿದ್ದರು. ಈ ಆರೋಪಗಳು 'ಸುಳ್ಳು ಮತ್ತು ಆಧಾರರಹಿತ' ಎಂದು ವಿಶ್ವವಿದ್ಯಾನಿಲಯ ಅಧಿಕಾರಿಗಳು ತಳ್ಳಿಹಾಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com