ಪಂಜಾಬ್: ಐಎಸ್ಐ ಭಯೋತ್ಪಾದಕರ ಜಾಲ ಭೇದಿಸಿದ ಪೊಲೀಸರು

ಪಂಜಾಬ್ ಪೊಲೀಸರು ಸೆ.23 ರಂದು ಐಎಸ್ಐ ಬೆಂಬಲಿತ, ಕೆನಡಾ-ಪಾಕಿಸ್ತಾನ ಗ್ಯಾಂಗ್ ಸ್ಟರ್ ಗಳು ನಿರ್ವಹಿಸುತ್ತಿದ್ದ ಭಯೋತ್ಪಾದಕರ ಜಾಲವನ್ನು ಭೇದಿಸಿದ್ದಾರೆ.
ಪಂಜಾಬ್ ಪೊಲೀಸ್ (ಸಂಗ್ರಹ ಚಿತ್ರ)
ಪಂಜಾಬ್ ಪೊಲೀಸ್ (ಸಂಗ್ರಹ ಚಿತ್ರ)

ಚಂಡೀಗಢ: ಪಂಜಾಬ್ ಪೊಲೀಸರು ಸೆ.23 ರಂದು ಐಎಸ್ಐ ಬೆಂಬಲಿತ, ಕೆನಡಾ-ಪಾಕಿಸ್ತಾನ ಗ್ಯಾಂಗ್ ಸ್ಟರ್ ಗಳು ನಿರ್ವಹಿಸುತ್ತಿದ್ದ ಭಯೋತ್ಪಾದಕರ ಜಾಲವನ್ನು ಭೇದಿಸಿದ್ದಾರೆ.

ಕೆನಡಾ ಮೂಲದ ಗ್ಯಾಂಗ್ ಸ್ಟರ್ ಲಕ್ಬೀರ್ ಸಿಂಗ್ ಅಲಿಯಾಸ್ ಲಂಡಾ ಹಾಗೂ ಪಾಕಿಸ್ತಾನ ಮೂಲದ ಗ್ಯಾಂಗ್ ಸ್ಟರ್ ಹರ್ವಿಂದರ್ ಸಿಂಗ್ ರಿಂದಾ ಅವರಿಗೆ ಸಂಬಂಧಿಸಿದ ಗ್ಯಾಂಗ್ ನ ಇಬ್ಬರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. 

ಲಕ್ಬೀರ್ ಸಿಂಗ್ ಹರ್ವಿಂದರ್ ಸಿಂಗ್ ನ ಆಪ್ತ ಸಹಚರನಾಗಿದ್ದು, ಈತ ಬಬ್ಬರ್ ಖಾಲ್ಸಾ ಅಂತಾರಾಷ್ಟ್ರೀಯ (ಬಿಕೆಐ) ನೊಂದಿಗೆ ಕೈ ಜೋಡಿಸಿದ್ದ ಹಾಗೂ ಇಬ್ಬರೂ ಐಎಸ್ಐ ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು ಎಂದು ಪಂಜಾಬ್ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
 
ಲಕ್ಬೀರ್ ಸಿಂಗ್ ರಾಕೆಟ್ ಚಾಲಿತ ಗ್ರೆನೇಡ್ (ಆರ್ ಪಿಜಿ) ದಾಳಿ ನಡೆಸುವುದಕ್ಕೆ ಯೋಜನೆ ರೂಪಿಸಿದ್ದ ಎಂದು ತಿಳಿದುಬಂದಿದೆ.  ಜೋಗೆವಾಲ್ ಗ್ರಾಮದ ಬಲ್ಜಿತ್ ಸಿಂಗ್ ಮಲ್ಹಿ (25), ಬುಹ್ ಗುಜ್ರಾನ್ ಗ್ರಾಮದ ಗುರುಬಕ್ಷ್ ಸಿಂಗ್ ಅಲಿಯಾಸ್ ಗೋರಾ ಸಂಧು ಎಂಬ ಬಂಧಿತ ಕಾರ್ಯಕರ್ತರ ವಿರುದ್ಧ ಯುಎಪಿಎ  ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com