ಆಂಧ್ರ ಪ್ರದೇಶ: ಖಾಸಗಿ ಕ್ಲಿನಿಕ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ವೈದ್ಯರು ಸೇರಿದಂತೆ ಇಬ್ಬರು ಮಕ್ಕಳು ಸಾವು

ರೇಣಿಗುಂಟದ ವಸುಂಧರಾನಗರದಲ್ಲಿರುವ ವೈದ್ಯರ ಖಾಸಗಿ ಕ್ಲಿನಿಕ್‌ನಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ಬೆಂಕಿ ಅವಘಡ ಸಂಭವಿಸಿದ್ದು, ವೈದ್ಯರು ಹಾಗೂ ಅವರ ಇಬ್ಬರು ಅಪ್ರಾಪ್ತ ಮಕ್ಕಳು ಮೃತಪಟ್ಟಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ತಿರುಪತಿ: ರೇಣಿಗುಂಟದ ವಸುಂಧರಾನಗರದಲ್ಲಿರುವ ವೈದ್ಯರ ಖಾಸಗಿ ಕ್ಲಿನಿಕ್‌ನಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ಬೆಂಕಿ ಅವಘಡ ಸಂಭವಿಸಿದ್ದು, ವೈದ್ಯರು ಹಾಗೂ ಅವರ ಇಬ್ಬರು ಅಪ್ರಾಪ್ತ ಮಕ್ಕಳು ಮೃತಪಟ್ಟಿದ್ದಾರೆ.

ಮೃತರನ್ನು ಡಾ. ರವಿಶಂಕರ್ ರೆಡ್ಡಿ ಮತ್ತು ಅವರ ಇಬ್ಬರು ಮಕ್ಕಳಾದ ಸಿದ್ದು (12) ಮತ್ತು ಕಾರ್ತಿಕಾ (6) ಎಂದು ಗುರುತಿಸಲಾಗಿದೆ.

ರವಿಶಂಕರ್ ರೆಡ್ಡಿ ಅವರು ನಡೆಸುತ್ತಿದ್ದ ಕಾರ್ತಿಕ್ ಖಾಸಗಿ ಕ್ಲಿನಿಕ್‌ನಲ್ಲಿ ಭಾನುವಾರ ಮುಂಜಾನೆ 4 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ರವಿಶಂಕರ್ ರೆಡ್ಡಿ, ಅವರ ಪತ್ನಿ ಅನಂತ ಲಕ್ಷ್ಮಿ, ತಾಯಿ ರಾಮ ಸುಬ್ಬಮ್ಮ ಮತ್ತು ಇಬ್ಬರು ಮಕ್ಕಳು ಕಟ್ಟಡದೊಳಗೆ ಇದ್ದರು.

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಶಂಕಿಸಲಾಗಿದೆ ಎಂದು ಅಗ್ನಿಶಾಮಕ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಷಯ ತಿಳಿದ ರೇಣಿಗುಂಟ ಪೊಲೀಸರು ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ ಅನಂತ ಲಕ್ಷ್ಮಿ, ರಾಮ ಸುಬ್ಬಮ್ಮ ಹಾಗೂ ಇಬ್ಬರು ಮಕ್ಕಳನ್ನು ಕಟ್ಟಡದಿಂದ ಹೊರಕ್ಕೆ ಹೊರಗೆ ತಂದಿದ್ದಾರೆ. ರುಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿದ್ದು ಮತ್ತು ಕಾರ್ತಿಕಾ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಶೇ 90ರಷ್ಟು ಸುಟ್ಟ ಗಾಯಗಳಿಂದ ರವಿಶಂಕರ್ ರೆಡ್ಡಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com