ಕಾನ್ಪುರ: ಚಲಿಸುತ್ತಿದ್ದ ರೈಲಿನಿಂದ ಬಿದ್ದು 25 ವರ್ಷದ ಬಾಸ್ಕೆಟ್‌ಬಾಲ್ ರೆಫರಿ ಸಾವು

ಕಾನ್ಪುರ ಬಳಿ ಚಲಿಸುತ್ತಿದ್ದ ರೈಲಿನಿಂದ ಬಿದ್ದು 25 ವರ್ಷದ ಬಾಸ್ಕೆಟ್‌ಬಾಲ್ ರೆಫರಿಯಾಗಿದ್ದ ಯಶವರ್ಧನ್ ರಾಣಾ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಇಟಾವಾ: ಕಾನ್ಪುರ ಬಳಿ ಚಲಿಸುತ್ತಿದ್ದ ರೈಲಿನಿಂದ ಬಿದ್ದು 25 ವರ್ಷದ ಬಾಸ್ಕೆಟ್‌ಬಾಲ್ ರೆಫರಿಯಾಗಿದ್ದ ಯಶವರ್ಧನ್ ರಾಣಾ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾನ್ಪುರ-ತುಂಡ್ಲಾ ವಿಭಾಗದ ಎಕ್ದಿಲ್ ಮತ್ತು ಭರ್ತನ ರೈಲು ನಿಲ್ದಾಣಗಳ ನಡುವೆ ಸೆಪ್ಟೆಂಬರ್ 24-25 ರ ಮಧ್ಯರಾತ್ರಿ ಈ ಘಟನೆ ಸಂಭವಿಸಿದೆ.  ಸಂಗಮ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದರು.

ಮೀರತ್‌ನ ಮೋದಿ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಇನ್ ಸ್ಟ್ರಕ್ಟರ್ ಆಗಿರುವ ರಾಣಾ ಅವರು ಮೀರತ್ ತಂಡದೊಂದಿಗೆ ಚೌಧರಿ ಹರ್ಮೋಹನ್ ಸಿಂಗ್ ಯಾದವ್ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ 61 ನೇ ಉತ್ತರ ಪ್ರದೇಶದ ಬಾಸ್ಕೆಟ್‌ಬಾಲ್ ಸ್ಪರ್ಧೆಗಾಗಿ ಕಾನ್ಪುರಕ್ಕೆ ಹೋಗುತ್ತಿದ್ದರು.

ಇಟಾವಾಹ್ ಪೊಲೀಸ್ ಸೂಪರಿಂಟೆಂಡೆಂಟ್  ಕಪಿಲ್ ದೇವ್ ಸಿಂಗ್ ಪ್ರಕಾರ, ರಾಣಾ ಮೀರತ್‌ನ ಸಿವಿಲ್ ಲೈನ್ಸ್‌ನ ನಿವಾಸಿಯಾಗಿದ್ದಾರೆ. ಬಾಸ್ಕೆಟ್‌ಬಾಲ್ ತಂಡವು ಎಸ್ -3 ಮತ್ತು ಎಸ್ -7 ಕೋಚ್‌ಗಳಲ್ಲಿ ಪ್ರಯಾಣಿಸುತ್ತಿತ್ತು, ಅವರು ಎಸ್ -5 ಕೋಚ್‌ನಲ್ಲಿದ್ದರು.

ಭಾನುವಾರ ಬೆಳಗ್ಗೆ ರೈಲು ಕಾನ್ಪುರ ನಿಲ್ದಾಣ ತಲುಪಿದಾಗ ಕೋಚ್‌ನಲ್ಲಿ ರಾಣಾ ಪತ್ತೆಯಾಗದ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಇಟಾವಾ ಜಿಲ್ಲೆಯ ಭರ್ತನ ನಿಲ್ದಾಣದ ಬಳಿ ರೈಲ್ವೆ ಹಳಿಯ ಬದಿಯಲ್ಲಿ ಮೃತದೇಹ  ಪತ್ತೆಯಾಗಿದೆ. ಬಾಸ್ಕೆಟ್ ಬಾಲ್ ಸಂಸ್ಥೆಯ ಪದಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಗುರುತಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com