ಮಾಲೇಗಾಂವ್ ಸ್ಫೋಟ ಪ್ರಕರಣ: ವಿಶೇಷ ಎನ್ಐಎ ಕೋರ್ಟ್ ನಿಂದ ಎಟಿಎಸ್ ಅಧಿಕಾರಿ ವಿರುದ್ಧ ವಾರೆಂಟ್ 

ವಿಶೇಷ ಎನ್ಐಎ ಕೋರ್ಟ್ ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಭಯೋತ್ಪಾದನೆ ನಿಗ್ರಹ ತಂಡ (ಎಟಿಎಸ್)ದ ಅಧಿಕಾರಿಯೊಬ್ಬರಿಗೆ ಜಾಮೀನು ಸಿಗಬಹುದಾದ ವಾರೆಂಟ್ ನ್ನು ಜಾರಿಗೊಳಿಸಿದೆ. 
ಮಾಲೇಗಾಂವ್ ಸ್ಫೋಟ ಪ್ರಕರಣ
ಮಾಲೇಗಾಂವ್ ಸ್ಫೋಟ ಪ್ರಕರಣ

ಮುಂಬೈ: ವಿಶೇಷ ಎನ್ಐಎ ಕೋರ್ಟ್ ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಭಯೋತ್ಪಾದನೆ ನಿಗ್ರಹ ತಂಡ (ಎಟಿಎಸ್)ದ ಅಧಿಕಾರಿಯೊಬ್ಬರಿಗೆ ಜಾಮೀನು ಸಿಗಬಹುದಾದ ವಾರೆಂಟ್ ನ್ನು ಜಾರಿಗೊಳಿಸಿದೆ. 

2008 ರ ಮಾಲೆಗಾಂವ್ ಸ್ಫೋಟಕ್ಕೆ ಸಂಬಂಧಿಸಿದ ವಾರೆಂಟ್ ಇದಾಗಿದ್ದು, ಸಂಬಂಧಪಟ್ಟ ಅಧಿಕಾರಿ ಕೆಲವು ಮಂದಿ ಶಂಕಿತರನ್ನು ಬಂಧಿಸಿ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದರು, ಸ್ವತಃ ಅಧಿಕಾರಿಯೂ ಈ ಪ್ರಕರಣದಲ್ಲಿ ಸಾಕ್ಷಿಯಾಗಿದ್ದರು

ಹಲವು ಸಮನ್ಸ್ ಗಳನ್ನು ನಿರ್ಲಕ್ಷ್ಯಿಸಿದ್ದ ಕಾರಣಕ್ಕಾಗಿ 5,000 ರೂಪಾಯಿಗಳ ಜಾಮೀನು ನೀಡಬಹುದಾದ ವಾರೆಂಟ್ ನ್ನು ಕೋರ್ಟ್ ಅಧಿಕಾರಿ ವಿರುದ್ಧ ಜಾರಿಗೊಳಿಸಿದೆ ಎಂದು ವಕೀಲರು ಹೇಳಿದ್ದಾರೆ.

ನಾಸಿಕ್ ನಲ್ಲಿ ಮಸೀದಿಯೊಂದರ ಬಳಿ 2008 ರ ಸೆ.29 ರಂದು ನಡೆದಿದ್ದ ಸ್ಫೋಟ ಪ್ರಕರಣದಲ್ಲಿ 6 ಮಂದಿ ಸಾವನ್ನಪ್ಪಿ 100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 260 ಸಾಕ್ಷ್ಯಗಳನ್ನು ಪರೀಕ್ಷಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com