ಜಾರ್ಖಂಡ್: ಗಂಡನ ಎದುರೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, 6 ಮಂದಿ ಬಂಧನ
ಜಾರ್ಖಂಡ್‌ನ ಪಲಾಮು ಜಿಲ್ಲೆಯಲ್ಲಿ 22 ವರ್ಷದ ಮಹಿಳೆಯೊಬ್ಬಳ ಮೇಲೆ ಆಕೆಯ ಗಂಡನ ಎದುರೇ ಆರು ಮಂದಿ ಅತ್ಯಾಚಾರವೆಸಗಿದ್ದಾರೆ. ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
Published: 26th September 2022 05:04 PM | Last Updated: 26th September 2022 05:04 PM | A+A A-

ಪ್ರಾತಿನಿಧಿಕ ಚಿತ್ರ
ಮೇದಿನಿನಗರ: ಜಾರ್ಖಂಡ್‌ನ ಪಲಾಮು ಜಿಲ್ಲೆಯಲ್ಲಿ 22 ವರ್ಷದ ಮಹಿಳೆಯೊಬ್ಬಳ ಮೇಲೆ ಆಕೆಯ ಗಂಡನ ಎದುರೇ ಆರು ಮಂದಿ ಅತ್ಯಾಚಾರವೆಸಗಿದ್ದಾರೆ. ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಸತ್ಬರ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ಬಕೋರಿಯಾ ಭಾಲುವಾಹಿ ಕಣಿವೆ ಬಳಿ ಘಟನೆ ನಡೆದಿದೆ ಎಂದು ಪಲಾಮು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಚಂದನ್ ಕುಮಾರ್ ಸಿನ್ಹಾ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಪಲಾಮು ಜಿಲ್ಲೆಯ ಪಟಾನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ತನ್ನ ಅತ್ತೆಯ ಮನೆಯಲ್ಲಿ ಜಗಳ ಮಾಡಿಕೊಂಡಿದ್ದ ಮಹಿಳೆ ಶನಿವಾರ ನಡೆದುಕೊಂಡು ಪಕ್ಕದ ಲತೇಹರ್ ಜಿಲ್ಲೆಯ ಮಾಣಿಕಾ ಪೊಲೀಸ್ ಠಾಣೆ ಪ್ರದೇಶದಲ್ಲಿರುವ ತನ್ನ ತಂದೆಯ ಮನೆಗೆ ತೆರಳುತ್ತಿದ್ದಳು.
ಮಹಿಳೆಯನ್ನು ಹುಡುಕಲು ಆಕೆಯ ಪತಿ ಮತ್ತು ಅವರ ಸಂಬಂಧಿಕರೊಬ್ಬರು ಮೋಟಾರ್ ಸೈಕಲ್‌ನಲ್ಲಿ ಹೊರಟಿದ್ದಾರೆ. ರಾತ್ರಿ 8 ಗಂಟೆ ಸುಮಾರಿಗೆ ಸತ್ಬರ್ವಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ರಾಷ್ಟ್ರೀಯ ಹೆದ್ದಾರಿ 39ರಲ್ಲಿ ಆಕೆ ನಡೆದು ಹೋಗುತ್ತಿರುವುದನ್ನು ಕಂಡಿದ್ದಾರೆ.
ಮಹಿಳೆಯ ಪತಿ ಪೊಲೀಸರಿಗೆ ನೀಡಿದ ಹೇಳಿಕೆ ಪ್ರಕಾರ, ಅವರು ಮನೆಗೆ ಮರಳುವಂತೆ ಮಹಿಳೆಯ ಮನವೊಲಿಸುತ್ತಿದ್ದರಂತೆ. ಆಗ ಮೋಟಾರ್ ಸೈಕಲ್‌ಗಳಲ್ಲಿ ಬಂದ ಆರು ಜನರು, ಆತನನ್ನು ಮತ್ತು ಆತನ ಸಂಬಂಧಿಯನ್ನು ತೀವ್ರವಾಗಿ ಥಳಿಸಿ, ತನಗೂ ಕಾಣುವಂತ ಹತ್ತಿರದ ಸ್ಥಳಕ್ಕೆ ಹೆಂಡತಿಯನ್ನು ಕರೆದೊಯ್ದು ಅತ್ಯಾಚಾರ ಎಸಗಿದರು. ಆರೋಪಿಗಳ ಪೈಕಿ ಇಬ್ಬರ ಪರಿಚಯವಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: 16 ವರ್ಷದ ದಲಿತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಇಬ್ಬರ ವಿರುದ್ಧ ಪ್ರಕರಣ ದಾಖಲು
ದಾಳಿಯಿಂದಾಗಿ ತೀವ್ರವಾಗಿ ಗಾಯಗೊಂಡರು ಮತ್ತು ಅವರ ಸಂಬಂಧಿ ಪ್ರಜ್ಞಾಹೀನರಾದರು. ಅವರು ಅಪರಾಧ ಸ್ಥಳಕ್ಕೆ ತಲುಪುವ ವೇಳೆಗೆ, ಆರೋಪಿಗಳು ತನ್ನ ಹೆಂಡತಿಯನ್ನು ಮೋಟಾರ್ ಸೈಕಲ್‌ನಲ್ಲಿ ಬೇರೆ ಕಡೆಗೆ ಕರೆದೊಯ್ಯಲು ಪ್ರಯತ್ನಿಸುವಾಗ ರಸ್ತೆಯಲ್ಲಿ ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಮೋಟಾರ್ ಸೈಕಲ್ ಡಿಕ್ಕಿ ಹೊಡೆಯಿತು. ಮಹಿಳೆ ಸಹಾಯಕ್ಕಾಗಿ ಕೂಗತೊಡಗಿದಾಗ, ಆಕೆಯ ಕಿರುಚಾಟ ಕೇಳಿದ ಸ್ಥಳೀಯ ಗ್ರಾಮಸ್ಥರು ಆಕೆಯನ್ನು ರಕ್ಷಿಸಿದ್ದು, ಇಬ್ಬರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಉಳಿದ ನಾಲ್ವರು ತಪ್ಪಿಸಿಕೊಂಡಿದ್ದಾರೆ.
ಇಬ್ಬರು ಆರೋಪಿಗಳನ್ನು ಘಟನೆ ನಡೆದ ದಿನದಂದೇ ಬಂಧಿಸಲಾಗಿದ್ದು, ಇನ್ನುಳಿದ ನಾಲ್ವರನ್ನು ಸೋಮವಾರ ಬಂಧಿಸಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.
ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಮೇದಿನಿನಗರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಸತ್ಬರ್ವಾ ಪೊಲೀಸ್ ಠಾಣೆ ಪ್ರಭಾರಿ ರಿಷಿಕೇಶ್ ಕುಮಾರ್ ರೈ ತಿಳಿಸಿದ್ದಾರೆ.