57 ವರ್ಷಗಳ ನಂತರ ಮೊದಲ ಎಲ್‌ಪಿಜಿ ಸಿಲಿಂಡರ್ ಪಡೆದ ಅರುಣಾಚಲ ಪ್ರದೇಶದ ಗ್ರಾಮ, ಮನೆಮಾಡಿದ ಸಂಭ್ರಮ

ಭಾರತದಲ್ಲಿ ಮೊದಲ ಬಾರಿಗೆ ಎಲ್‌ಪಿಜಿ ಸಂಪರ್ಕ ಕಲ್ಪಿಸಿದ್ದು 1965ರ ಅಕ್ಟೋಬರ್‌ 22ರಂದು. ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ನ ಇಂಡೇನ್‌ ಕೋಲ್ಕೊತಾದಲ್ಲಿ ಮನೆಗಳಿಗೆ ಅಡುಗೆ ಅನಿಲ ಸಂಪರ್ಕ ಒದಗಿಸಿತು. ಅದಾದ 57 ವರ್ಷಗಳ ನಂತರ ಮ್ಯಾನ್ಮಾರ್ ಗಡಿಯಲ್ಲಿರುವ ಅರುಣಾಚಲ ಪ್ರದೇಶದ ವಿಜಯನಗರ ವೃತ್ತಕ್ಕೆ ಅಡುಗೆ ಅನಿಲ ಸಂಪರ್ಕವನ್ನು ಒದಗಿಸಲಾಗಿದೆ.
ಎಲ್‌ಪಿಜಿ ಸಿಲಿಂಡರ್ ಪಡೆದ ಸಂತೋಷದಲ್ಲಿ ಸ್ಥಳೀಯರು
ಎಲ್‌ಪಿಜಿ ಸಿಲಿಂಡರ್ ಪಡೆದ ಸಂತೋಷದಲ್ಲಿ ಸ್ಥಳೀಯರು

ಗುವಾಹಟಿ: ಭಾರತದಲ್ಲಿ ಮೊದಲ ಬಾರಿಗೆ ಎಲ್‌ಪಿಜಿ ಸಂಪರ್ಕ ಕಲ್ಪಿಸಿದ್ದು 1965ರ ಅಕ್ಟೋಬರ್‌ 22ರಂದು. ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ನ ಇಂಡೇನ್‌ ಕೋಲ್ಕೊತಾದಲ್ಲಿ ಮನೆಗಳಿಗೆ ಅಡುಗೆ ಅನಿಲ ಸಂಪರ್ಕ ಒದಗಿಸಿತು. ಅದಾದ 57 ವರ್ಷಗಳ ನಂತರ ಮ್ಯಾನ್ಮಾರ್ ಗಡಿಯಲ್ಲಿರುವ ಅರುಣಾಚಲ ಪ್ರದೇಶದ ವಿಜಯನಗರ ವೃತ್ತಕ್ಕೆ ಅಡುಗೆ ಅನಿಲ ಸಂಪರ್ಕವನ್ನು ಒದಗಿಸಲಾಗಿದೆ.

ಎರಡು ದಿನಗಳ ಹಿಂದೆ, ಚಾಂಗ್ಲಾಂಗ್ ಜಿಲ್ಲೆಯ ಮಿಯಾವೊ ಉಪವಿಭಾಗದಲ್ಲಿರುವ ಏಜೆನ್ಸಿಯೊಂದು 157 ಕಿಮೀ ದೂರದ ವಿಜಯನಗರದ 15 ಕುಟುಂಬಗಳಿಗೆ ಎಲ್‌ಪಿಜಿ ಸಿಲಿಂಡರ್‌ಗಳನ್ನು ತಲುಪಿಸಿದೆ. ಇದೇ ಮೊದಲ ಬಾರಿಗೆ ಎಲ್‌ಪಿಜಿ ಸಂಪರ್ಕ ಪಡೆದಿರುವುದಕ್ಕೆ ಸ್ಥಳೀಯರು ಸಂಭ್ರಮಿಸಿದರು.

'ಈ ಸೇವೆಯು ಜನರ ಬಹುಕಾಲದ ಅಗತ್ಯವನ್ನು ಪೂರೈಸಿದೆ. ಅವರು ಅಡುಗೆಗಾಗಿ ಸಂಪೂರ್ಣವಾಗಿ ಉರುವಲಿನ ಮೇಲೆ ಅವಲಂಬಿತರಾಗಿದ್ದರು ಮತ್ತು ವಿಶೇಷವಾಗಿ ಮಳೆಗಾಲದಲ್ಲಿ ಅವರು ಬಹಳಷ್ಟು ತೊಂದರೆಗಳನ್ನು ಎದುರಿಸುತ್ತಿದ್ದರು' ಎಂದು ಸಚಿವ ಕಮ್ಲುಂಗ್ ಮೊಸಾಂಗ್ ಹೇಳಿದ್ದಾರೆ.

ಇದರಿಂದ ಗ್ರಾಹಕರು ಸಂತಸಗೊಂಡಿದ್ದಾರೆ. ಸುಮಾರು 500 ಜನರು ಎಲ್‌ಪಿಜಿ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅವರ ದಾಖಲೆಗಳು ಇನ್ನೂ ಏಜೆನ್ಸಿಗೆ ತಲುಪಿಲ್ಲ. 'ಲಾಜಿಸ್ಟಿಕ್ಸ್ ಮತ್ತು ದಾಖಲಾತಿಗಳಂತಹ ಸಮಸ್ಯೆಗಳಿಂದಾಗಿ ನಾವು ಅವರಿಗೆ ನಮ್ಮ ಸೇವೆಯನ್ನು ವಿಸ್ತರಿಸಲು ಸಾಧ್ಯವಾಗಲಿಲ್ಲ. ಒಂದು ಬ್ಯಾಂಕ್ ವಹಿವಾಟಿಗೂ ಹಲವು ದಿನ ಕಾಯಬೇಕು' ಎನ್ನುತ್ತಾರೆ ಗ್ಯಾಸ್ ಏಜೆನ್ಸಿ ಮಾಲೀಕ ಅಂತು ಎನ್‌ಗೆಮು.

ಕೆಂಪು ಬಣ್ಣದ ಸಿಲಿಂಡರ್‌ಗಳ ಆಗಮನದ ಸುದ್ದಿಯನ್ನು ನನಗೆ ತಿಳಿಸಲು ನನ್ನ ತಂದೆ ತುಂಬಾ ಭಾವಪರವಶರಾಗಿದ್ದರು. ಸದ್ಯ ಅವರು ಸಿಲಿಂಡರ್‌ಗಳನ್ನು ಪಡೆದುಕೊಂಡಿದ್ದಾರೆ. ನಿಧಾನವಾಗಿ ಸಂಪರ್ಕ ಸಾಧ್ಯವಾದರೂ ಕೂಡ ಇದು ಅವರ ಸಂತೋಷಕ್ಕೆ ಕಾರಣವಾಯಿತು ಎನ್ನುತ್ತಾರೆ 2019ರಲ್ಲಿ ವಿವಾಹವಾಗಿದ್ದ ಜೈರಾಮ್‌ಪುರ ಜಿಲ್ಲೆಯ ಉಸಿನಾ ಯೋಬಿನ್ ತಿಳಿಸುತ್ತಾರೆ.

ಬಿಎಸ್ಎನ್ಎಲ್ 2020 ರಲ್ಲಿ ವಿಜಯನಗರದಲ್ಲಿ ತನ್ನ ಸೇವೆಯನ್ನು ಆರಂಭಿಸಿತು. ಆದರೆ, ಅದೃಷ್ಟವಿದ್ದ ಒಬ್ಬರು ಮಾತ್ರ ಅದನ್ನು ಪಡೆಯಬಹುದಾಗಿತ್ತು. ಹಲವಾರು ಪ್ರಯತ್ನಗಳ ಹೊರತಾಗಿಯೂ ಯಾವುದೇ ಎಲ್‌ಪಿಜಿ ಗ್ರಾಹಕರನ್ನು ತಲುಪಲು ಸಾಧ್ಯವಾಗಿರಲಿಲ್ಲ. ವಿಜಯನಗರದಲ್ಲಿ ಜನಜೀವನ ತುಂಬಾ ಕಷ್ಟಕರವಾಗಿದೆ. ಉರುವಲು ಸಂಗ್ರಹಿಸಲು ಸ್ಥಳೀಯರು 15-20 ಕಿ.ಮೀ ನಡೆದು ಕಾಡಿಗೆ ಹೋಗುತ್ತಾರೆ' ಎಂದು ಅವರು ಹೇಳಿದರು.

8,000 ಚದರ ಕಿಲೋಮೀಟರ್‌ಗಳಲ್ಲಿ ಹರಡಿರುವ ವಿಜಯನಗರವನ್ನು 1961 ರಲ್ಲಿ ಅಸ್ಸಾಂ ರೈಫಲ್ಸ್ 'ಶ್ರೀಜಿತ್ II' ದಂಡಯಾತ್ರೆಯ ಸಮಯದಲ್ಲಿ ಪತ್ತೆ ಮಾಡಲಾಯಿತು. ಆಗಿನ ಇನ್ಸ್‌ಪೆಕ್ಟರ್ ಜನರಲ್ ಆಗಿದ್ದ ಮೇಜರ್ ಜನರಲ್ ಎ.ಎಸ್. ಗುರಯ್ಯ ಅವರ ನೇತೃತ್ವದಲ್ಲಿ ದಂಡಯಾತ್ರೆ ನಡೆಸಲಾಯಿತು. ಹೀಗಾಗಿ ಈ ಕಣಿವೆಗೆ ತನ್ನ ಮಗ ವಿಜಯ್ ಅವರ ಹೆಸರನ್ನು ಇಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com