ಇಟಲಿಯ ಸಾರ್ವತ್ರಿಕ ಚುನಾವಣೆ: ಜಾರ್ಜಿಯಾ ಮೆಲೋನಿಗೆ ಗೆಲುವು; ಪ್ರಧಾನಿ ಮೋದಿ ಅಭಿನಂದನೆ

ಇಟಲಿಯ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಕ್ಕಾಗಿ ಬಲಪಂಥೀಯ ಒಕ್ಕೂಟದ ನಾಯಕಿ ಜಾರ್ಜಿಯಾ ಮೆಲೋನಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಒಟ್ಟಾಗಿ ಕೆಲಸ ಮಾಡಲು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ. 
ಇಟಲಿಯ ನೂತನ ಪ್ರಧಾನ ಮಂತ್ರಿಗೆ ಪ್ರಧಾನಿ ಮೋದಿ ಅಭಿನಂದನೆ
ಇಟಲಿಯ ನೂತನ ಪ್ರಧಾನ ಮಂತ್ರಿಗೆ ಪ್ರಧಾನಿ ಮೋದಿ ಅಭಿನಂದನೆ

ನವದೆಹಲಿ:  ಇಟಲಿಯ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಕ್ಕಾಗಿ ಬಲಪಂಥೀಯ ಒಕ್ಕೂಟದ ನಾಯಕಿ ಜಾರ್ಜಿಯಾ ಮೆಲೋನಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಒಟ್ಟಾಗಿ ಕೆಲಸ ಮಾಡಲು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ. 

ಇಟಲಿಯ ಸಾರ್ವತ್ರಿಕ ಚುನಾವಣೆಯಲ್ಲಿ ನಿಮ್ಮ ಪಕ್ಷವನ್ನು ಗೆಲುವಿನತ್ತ ಮುನ್ನಡೆಸಿದ್ದಕ್ಕಾಗಿ ಅಭಿನಂದನೆಗಳು. ನಮ್ಮ ಸಂಬಂಧಗಳನ್ನು ಬಲಪಡಿಸಲು ಒಟ್ಟಾಗಿ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ. 

ರಾಷ್ಟ್ರೀಯವಾದಿ ಬ್ರದರ್ಸ್ ಆಫ್ ಇಟಲಿಯು ಶೇಕಡಾ 26 ರಷ್ಟು ಮತಗಳನ್ನು ಗಳಿಸಿದ ನಂತರ ಬಲಪಂಥೀಯ ಒಕ್ಕೂಟವು ಹೊಸ ಸಂಸತ್ತನ್ನು ರಚಿಸಲು ದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಜಯವನ್ನು ಗಳಿಸಿದೆ. ಪಕ್ಷದ ನಾಯಕಿ ಜಾರ್ಜಿಯಾ ಮೆಲೋನಿ ಅವರು ದೇಶದ ಮುಂದಿನ ಪ್ರಧಾನಿಯಾಗುತ್ತಾರೆ, ಆ ಮೂಲಕ ಈ ಪಾತ್ರದಲ್ಲಿ ಸೇವೆ ಸಲ್ಲಿಸಿದ ಮೊದಲ ಮಹಿಳೆಯಾಗಿದ್ದಾರೆ.

ಇಟಾಲಿಯನ್ನರು ನಮಗೆ ಸೂಕ್ತವಾದ ಜವಾಬ್ದಾರಿಯನ್ನು ವಹಿಸಿದ್ದಾರೆ, ಮತ್ತು ಅವರನ್ನು ನಿರಾಸೆಗೊಳಿಸದಂತೆ ಮತ್ತು ರಾಷ್ಟ್ರದ ಘನತೆ ಮತ್ತು ಹೆಮ್ಮೆಯನ್ನು ಪುನಃಸ್ಥಾಪಿಸಲು ನಮ್ಮ ಅತ್ಯುತ್ತಮವಾದ ಕೆಲಸವನ್ನು ಮಾಡುವುದು ನಮ್ಮ ಕಾರ್ಯವಾಗಿದೆ" ಎಂದು ಮೆಲೋನಿ ಸೋಮವಾರ ತಮ್ಮ ಫೇಸ್ಬುಕ್ ಪುಟದಲ್ಲಿ ಪ್ರತಿಕ್ರಿಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com