ಸ್ಯಾನಿಟರಿ ನ್ಯಾಪ್ಕಿನ್ ಕೇಳಿದ ವಿದ್ಯಾರ್ಥಿ; ಮುಂದೆ ಕಾಂಡೋಮ್‌ ಸಹ ಕೇಳ್ತೀರಾ ಎಂದ ಐಎಎಸ್ ಅಧಿಕಾರಿ; ವಿವರಣೆ ಕೇಳಿದ ಮಹಿಳಾ ಆಯೋಗ

ಕಡಿಮೆ ಬೆಲೆಯಲ್ಲಿ ಸರ್ಕಾರ ಹೆಣ್ಣುಮಕ್ಕಳಿಗೆ ಸ್ಯಾನಿಟರಿ ನ್ಯಾಪ್ಕಿನ್ ನೀಡಲು ವ್ಯವಸ್ಥೆ ಮಾಡಬಹುದೇ ಎಂದು ವಿದ್ಯಾರ್ಥಿನಿ ಕೇಳಿದ ಪ್ರಶ್ನೆಗೆ ಮಹಿಳಾ ಐಎಎಸ್ ಅಧಿಕಾರಿ ಆಘಾತಕಾರಿ ಉತ್ತರ ನೀಡಿದ್ದಾರೆ.
ಹರ್ಜೋತ್ ಕೌರ್ ಭಮ್ರಾ- ಐಎಎಸ್ ಅಧಿಕಾರಿ
ಹರ್ಜೋತ್ ಕೌರ್ ಭಮ್ರಾ- ಐಎಎಸ್ ಅಧಿಕಾರಿ

ಪಾಟ್ನಾ: ಕಡಿಮೆ ಬೆಲೆಯಲ್ಲಿ ಸರ್ಕಾರ ಹೆಣ್ಣುಮಕ್ಕಳಿಗೆ ಸ್ಯಾನಿಟರಿ ನ್ಯಾಪ್ಕಿನ್ ನೀಡಲು ವ್ಯವಸ್ಥೆ ಮಾಡಬಹುದೇ ಎಂದು ವಿದ್ಯಾರ್ಥಿನಿ ಕೇಳಿದ ಪ್ರಶ್ನೆಗೆ ಮಹಿಳಾ ಐಎಎಸ್ ಅಧಿಕಾರಿ ಆಘಾತಕಾರಿ ಉತ್ತರ ನೀಡಿದ್ದಾರೆ.

ಸರ್ಕಾರ 20-30 ರೂಪಾಯಿ ಬೆಲೆಯ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ನೀಡಬಹುದೇ? ಎಂಬ ವಿದ್ಯಾರ್ಥಿನಿ ಪ್ರಶ್ನೆಗೆ ಉತ್ತರ ನೀಡಿದ ಐಎಎಸ್ ಅಧಿಕಾರಿ ಹರ್ಜೋತ್ ಕೌರ್ ಭಮ್ರಾ, “ನಾಳೆ ನೀವು, ಸರ್ಕಾರವು ನಮಗೂ ಜೀನ್ಸ್ ನೀಡಬಹುದಲ್ಲವೇ, ಅದಾದ  ನಂತರ ಕೆಲವು ಸುಂದರವಾದ ಶೂಗಳನ್ನು ನೀಡಿ ಎಂದು ಕೇಳಬಹುದಲ್ಲವೇ ಎಂದಿದ್ದಾರೆ, ಅಷ್ಟಕ್ಕೆ ಮಾತು ನಿಲ್ಲಿಸದ ಅಧಿಕಾರಿ ಭಮ್ರಾ,  ‘ಸರ್ಕಾರವು ಕಾಂಡೋಮ್‌ ಸಹ ನೀಡಲಿ ಎಂದು ನೀವು ಬಯಸುತ್ತೀರಿ ಅಲ್ಲವೇ’ ಎಂದು ವಿದ್ಯಾರ್ಥಿನಿಯನ್ನು ಪ್ರಶ್ನಿಸುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಘಟನೆ ಬಿಹಾರದ ಪಾಟ್ನಾದಲ್ಲಿ ಮಹಿಳಾ ಅಭಿವೃದ್ಧಿ ನಿಗಮವು ಆಯೋಜಿಸಿದ್,  'ಸಶಕ್ತ್ ಬೇಟಿ, ಸಮೃದ್ಧ್ ಬಿಹಾರ' ಕಾರ್ಯಾಗಾರದಲ್ಲಿ, ನಿಗಮದ ನಿರ್ದೇಶಕಿ ಹರ್ಜೋತ್ ಕೌರ್ ಭಮ್ರಾ ಈ ಪ್ರಶ್ನೆ ಕೇಳಿದ್ದಾರೆ.  ಭಮ್ರಾ ಅವರು ಯುನಿಸೆಫ್ ಮತ್ತು ಇತರ ಸಂಸ್ಥೆಗಳೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಿದ ನಿಗಮದ ಮುಖ್ಯಸ್ಥರಾಗಿದ್ದಾರೆ. ಭಮ್ರಾ ಅವರ ಹೇಳಿಕೆಗೆ ವಿದ್ಯಾರ್ಥಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಗ ಭಮ್ರಾ ವಿದ್ಯಾರ್ಥಿನಿ ಮೇಲೆ ಕಿಡಿಕಾರಿದ್ದಾರೆ.

ಆಗ ವಿದ್ಯಾರ್ಥಿನಿ, ‘ಸೇವೆ ಮಾಡಲಿ ಎಂದಲ್ಲವೇ ನಾವು ಮತ ನೀಡುವುದು’ ಎಂದು ಪ್ರಶ್ನಿಸಿದ್ದಾಳೆ. ಅದಕ್ಕೆ ಭಮ್ರಾ ಅವರು, ‘ಇದು ಮೂರ್ಖತನದ ಪರಮಾವಧಿ. ಹಾಗಿದ್ದಲ್ಲಿ ಮತ ಹಾಕಬೇಡಿ. ಇದು ಪಾಕಿಸ್ತಾನವಾಗಲಿ’ ಎಂದಿದ್ದಾರೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿದ್ಯಾರ್ಥಿನಿ, ‘ ಮೇಡಂ ಇದ್ಯಾಕೆ ಪಾಕಿಸ್ತಾನವಾಗಬೇಕು. ಇದು ಭಾರತ. ನಾನು ಭಾರತೀಯಳು’ ಎಂದು ತಿರುಗೇಟು ನೀಡಿದ್ದಾಳೆ.

ಎಲ್ಲಾ ಅಗತ್ಯ ವಿಷಯಗಳಿಗೆ ಸರ್ಕಾರವನ್ನು ಅವಲಂಬಿಸಬಾರದು, ಸರ್ಕಾರವು ಸಾಕಷ್ಟು ವಸ್ತುಗಳನ್ನು ಉಚಿತವಾಗಿ ನೀಡುತ್ತದೆ. ಆದರೆ ನೀವು ಬದುಕಲು ಅಗತ್ಯವಿರುವ ಎಲ್ಲ ವಿಷಯಗಳಿಗೆ ನೀವು ಸರ್ಕಾರದ ಮೇಲೆ ಅವಲಂಬಿತರಾಗಿದ್ದೀರಿ ಎಂದು ಐಎಎಸ್ ಅಧಿಕಾರಿ ಸಮರ್ಥಿಸಿಕೊಂಡಿದ್ದಾರೆ.

ಕಡಿಮೆ ಬೆಲೆಯ ಸ್ಯಾನಿಟರಿ ನ್ಯಾಪ್‌ಕಿನ್ ನೀಡುವ ಸಂಬಂಧ ವಿದ್ಯಾರ್ಥಿನಿ ಕೇಳಿದ ಪ್ರಶ್ನೆಗೆ ಅನುಚಿತ ಮತ್ತು ಆಕ್ಷೇಪಾರ್ಹ ರೀತಿಯ ಹೇಳಿಕೆ ನೀಡಿರುವ  ಕುರಿತು ರಾಷ್ಟ್ರೀಯ ಮಹಿಳಾ ಆಯೋಗ ಹಿರಿಯ ಐಎಎಸ್ ಅಧಿಕಾರಿಯಿಂದ ವಿವರಣೆ ಕೇಳಿದೆ. ಜಬಾಬ್ದಾರಿಯುತ ಸ್ಥಾನದಲ್ಲಿರುವವರು ಸೂಕ್ಷ್ಮತೆಯಿಲ್ಲದೇ ನಡೆದುಕೊಳ್ಳುವುದು ನಾಚಿಕೆಗೇಡಿನ ಸಂಗತಿ ಎಂದು ಆಯೋಗ ತಿಳಿಸಿದೆ. ವಿವರಣೆ ನೀಡುವಂತೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಐಎಎಸ್ ಅಧಿಕಾರಿ ಹರ್ಜೋತ್ ಕೌರ್ ಭಮ್ರಾ ಅವರಿಗೆ ಪತ್ರ ಬರೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com