
ಸಂಗ್ರಹ ಚಿತ್ರ
ನವದೆಹಲಿ: ವಕೀಲ ವೀರೇಂದ್ರ ಕುಮಾರ್ ನರ್ವಾಲ್ ಎಂಬುವರನ್ನು ಇಂದು ಸಂಜೆ ದೆಹಲಿಯ ದ್ವಾರಕಾ ಪ್ರದೇಶದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ವೀರೇಂದ್ರ ನರ್ವಾಲ್ ಅವರು ಸೆಕ್ಟರ್ 12 ದ್ವಾರಕಾ ನಿವಾಸಿಯಾಗಿದ್ದು ಇಂದು ಸಂಜೆ 6.15ರ ಸುಮಾರಿಗೆ ಮಣಿಪಾಲ ಆಸ್ಪತ್ರೆ ಎದುರು ಈ ಘಟನೆ ನಡೆದಿದೆ. ಪ್ರಕರಣ ಕುರಿತಂತೆ ಹಲವು ಆಯಾಮಗಳನ್ನು ಗಮನದಲ್ಲಿಟ್ಟುಕೊಂಡು ತನಿಖೆ ನಡೆಸಲಾಗುತ್ತಿದೆ. ಯಾರೊಂದಿಗೆ ವಕೀಲ ವೀರೇಂದ್ರ ಕುಮಾರ್‌ಗೆ ದ್ವೇಷವಿತ್ತು ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಹೇಳಿದ್ದೇನು?
ಇಬ್ಬರು ದಾಳಿಕೋರರು ಬೈಕ್‌ನಲ್ಲಿ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ವಕೀಲ ವೀರೇಂದ್ರ ಕುಮಾರ್ ನರ್ವಾಲ್ ಅವರ ಎರ್ಟಿಗಾ ಕಾರಿನಲ್ಲಿದ್ದರು. ಅವರು ದ್ವಾರಕಾ ಸೆಕ್ಟರ್ 1 ಬಳಿಕ ಹೋಗುತ್ತಿದ್ದಾಗ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದು ಆರೋಪಿಗಳ ಪತ್ತೆಗೆ ಪೊಲೀಸರು ಕ್ರಮಕೈಗೊಂಡಿದ್ದಾರೆ.
Advocate Virender Kumar was shot dead by bike-borne assailants in the Dwarka area today evening. Police probing the matter from all angles: Delhi Police
— ANI (@ANI) April 1, 2023
ವಕೀಲ ವೀರೇಂದ್ರ ಕುಮಾರ್ ಅವರ ಮೇಲೆ ಈ ಹಿಂದೆಯೂ ಹಲ್ಲೆ ನಡೆದಿತ್ತು. ಆದ್ದರಿಂದ ದ್ವೇಷದ ಕಾರಣ ಅವರನ್ನು ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಸದ್ಯ ಪೊಲೀಸರು ಕೊಲೆಗೆ ಯಾವುದೇ ಕಾರಣ ನೀಡಿಲ್ಲ ಆದರೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದರು.