ಕಾಶ್ಮೀರದಲ್ಲಿ ತಗ್ಗಿದ ಉಗ್ರ ಚಟುವಟಿಕೆ: ಕಳೆದ ಮೂರು ತಿಂಗಳಲ್ಲಿ ಕೇವಲ ಎರಡು ಎನ್‌ಕೌಂಟರ್‌

ಈ ಹಿಂದಿನ ಎರಡು ವರ್ಷಗಳ ಇದೇ ಅವಧಿಗೆ ಹೋಲಿಸಿದರೆ ಈ ವರ್ಷದ ಮೊದಲ ಮೂರು ತಿಂಗಳಲ್ಲಿ ಕಾಶ್ಮೀರದಲ್ಲಿ ಅತ್ಯಂತ ಕಡಿಮೆ ಎನ್‌ಕೌಂಟರ್‌ಗಳು ಮತ್ತು ಉದ್ದೇಶಿತ ಹತ್ಯೆಗಳು ನಡೆದಿದ್ದು, ಕಣಿವೆಯಲ್ಲಿ ಉಗ್ರ ಚಟುವಟಿಕೆಗಳು ಗಣನೀಯವಾಗಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶ್ರೀನಗರ: ಈ ಹಿಂದಿನ ಎರಡು ವರ್ಷಗಳ ಇದೇ ಅವಧಿಗೆ ಹೋಲಿಸಿದರೆ ಈ ವರ್ಷದ ಮೊದಲ ಮೂರು ತಿಂಗಳಲ್ಲಿ ಕಾಶ್ಮೀರದಲ್ಲಿ ಅತ್ಯಂತ ಕಡಿಮೆ ಎನ್‌ಕೌಂಟರ್‌ಗಳು ಮತ್ತು ಉದ್ದೇಶಿತ ಹತ್ಯೆಗಳು ನಡೆದಿದ್ದು, ಕಣಿವೆಯಲ್ಲಿ ಉಗ್ರ ಚಟುವಟಿಕೆಗಳು ಗಣನೀಯವಾಗಿ ಕಡಿಮೆಯಾಗಿದೆ.

2023ರ ಮೊದಲ ಮೂರು ತಿಂಗಳಲ್ಲಿ ಕಾಶ್ಮೀರದಲ್ಲಿ ಕೇವಲ ಎರಡು ಎನ್‌ಕೌಂಟರ್‌ಗಳು ವರದಿಯಾಗಿವೆ ಮತ್ತು ಈ ಅವಧಿಯಲ್ಲಿ ಉಗ್ರರಿಂದ ಭದ್ರತಾ ಪಡೆಗಳ ಮೇಲೆ ಯಾವುದೇ ಹಿಟ್ ಅಂಡ್ ರನ್ ದಾಳಿ ನಡೆದಿಲ್ಲ. ಈ ವರ್ಷ ನಡೆದ ಎರಡು ಎನ್‌ಕೌಂಟರ್‌ಗಳಲ್ಲಿ, ಒಂದು ಜನವರಿ 17 ರಂದು ಮಧ್ಯ ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ನಡೆದಿದ್ದು, ಇದರಲ್ಲಿ ಹೊಸದಾಗಿ ನೇಮಕಗೊಂಡ ಇಬ್ಬರು ಸ್ಥಳೀಯ ಲಷ್ಕರ್ ಉಗ್ರರನ್ನು ಹತ್ಯೆ ಮಾಡಲಾಗಿದೆ. 

ಇನ್ನು ಫೆಬ್ರವರಿ 28 ರಂದು ಪುಲ್ವಾಮಾದ ಅವಂತಿಪೋರಾ ಪ್ರದೇಶದಲ್ಲಿ ನಡೆದ ಎರಡನೇ ಎನ್‌ಕೌಂಟರ್‌ನಲ್ಲಿ ಇಬ್ಬರು ಸ್ಥಳೀಯ ಟಿಆರ್‌ಎಫ್ ಉಗ್ರರು ಹತರಾಗಿದ್ದರು.

ಈ ವರ್ಷ ಕಣಿವೆಯಲ್ಲಿ ಉಗ್ರರು ಎರಡು ಉದ್ದೇಶಿತ ದಾಳಿಗಳನ್ನು ನಡೆಸಿದ್ದು, ಇದರಲ್ಲಿ ಕಾಶ್ಮೀರಿ ಪಂಡಿತ ಬ್ಯಾಂಕ್ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದಾರೆ ಮತ್ತು ಹತ್ಯೆಯಾದ ಪೋಲೀಸರ ಪುತ್ರ ಗಾಯಗೊಂಡಿದ್ದಾರೆ. ಎರಡೂ ದಾಳಿಗಳು ದಕ್ಷಿಣ ಕಾಶ್ಮೀರದಲ್ಲಿ ನಡೆದಿವೆ.

ಈ ವರ್ಷ ಉಗ್ರರ ದಾಳಿಯಲ್ಲಿ ಓರ್ವ ಸೇನಾ ಯೋಧ ಸಾವನ್ನಪ್ಪಿದ್ದಾರೆ. ಫೆಬ್ರವರಿ 28 ರಂದು ಪುಲ್ವಾಮಾದ ಅವಂತಿಪೋರಾ ಪ್ರದೇಶದಲ್ಲಿ ಉಗ್ರರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com