ಶ್ರೀನಗರ: ಖಾಸಗಿ ಕಾರೊಂದರಲ್ಲಿ ಸ್ಫೋಟ, ಅಪಾಯದಿಂದ ಪಾರಾದ ವೃದ್ಧ ದಂಪತಿ
ಶ್ರೀನಗರದಲ್ಲಿ ಭಾನುವಾರ ಖಾಸಗಿ ಕಾರೊಂದರಲ್ಲಿ ಸ್ಫೋಟ ಸಂಭವಿಸಿದೆ. ಆದರೆ ಅದರಲ್ಲಿದ್ದ ವೃದ್ಧ ದಂಪತಿ ಸೇರಿದಂತೆ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Published: 02nd April 2023 04:47 PM | Last Updated: 02nd April 2023 04:47 PM | A+A A-

ಕಾರಿನ ಹಿಂಬದಿಯಲ್ಲಿ ಸ್ಫೋಟ
ಶ್ರೀನಗರ: ಶ್ರೀನಗರದಲ್ಲಿ ಭಾನುವಾರ ಖಾಸಗಿ ಕಾರೊಂದರಲ್ಲಿ ಸ್ಫೋಟ ಸಂಭವಿಸಿದೆ. ಆದರೆ ಅದರಲ್ಲಿದ್ದ ವೃದ್ಧ ದಂಪತಿ ಸೇರಿದಂತೆ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
'ಬೌಲೆವಾರ್ಡ್ ರಸ್ತೆಯಲ್ಲಿ JK01M 0878 ಸಂಖ್ಯೆಯ ಹೋಂಡಾ ಸಿಟಿ ವಾಹನದ ಹಿಂಬದಿಯಲ್ಲಿ ಸ್ಫೋಟ ಸಂಭವಿಸಿದೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Srinagar, J&K | A blast took place in a car at Boulevard road. An elderly couple, residents of Kral Sangri Nishat, Srinagar, were in the vehicle. Both are safe. Prima facie the blast looks like some equipment failure. Police team is on the spot: Police
— ANI (@ANI) April 2, 2023
ಸ್ಫೋಟದ ಸಮಯದಲ್ಲಿ ಕ್ರಾಲ್‌ಸಂಗ್ರಿ ನಿಶಾತ್ ನಿವಾಸಿಗಳಾದ ಹಫೀಜುಲ್ಲಾ ಭಟ್ ಮತ್ತು ಅವರ ಪತ್ನಿ ಎಂದು ಗುರುತಿಸಲಾದ ದಂಪತಿ ಕಾರಿನಲ್ಲಿದ್ದರು. ಇಬ್ಬರೂ ಸುರಕ್ಷಿತವಾಗಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ, ಕೆಲವು ಸಲಕರಣೆಗಳ ವೈಫಲ್ಯದಿಂದ ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿದಂತೆ ತೋರುತ್ತಿದೆ. ಪೊಲೀಸರ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ ಎಂದು ಅಧಿಕಾರಿ ಹೇಳಿದರು.