‘ವಿವಾಹಿತ ಮಹಿಳೆಯರು ಮನೆಯಲ್ಲಿಯೇ ಇರಬೇಕು’: ವಿವಾದಕ್ಕೆ ತಿರುಗಿದ ಕೇರಳ ಡಬ್ಲ್ಯುಸಿಡಿಯ ಏಪ್ರಿಲ್ ಫೂಲ್ ಜೋಕ್

ಕೇರಳದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ (ಡಬ್ಲ್ಯುಸಿಡಿ) ಇಲಾಖೆಯ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಏಪ್ರಿಲ್ ಫೂಲ್ ದಿನದ ಅಂಗವಾಗಿ ಹಾಕಿದ್ದ ಎಲ್ಲಾ ಪೋಸ್ಟ್‌ಗಳು ಇದೀಗ ವಿವಾದಕ್ಕೆ ಕಾರಣವಾಗಿವೆ.
ಕೇರಳದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪೋಸ್ಟ್ ಮಾಡಿದ್ದ ಸಂದೇಶ
ಕೇರಳದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪೋಸ್ಟ್ ಮಾಡಿದ್ದ ಸಂದೇಶ

ತಿರುವನಂತಪುರಂ: ಕೇರಳದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ (ಡಬ್ಲ್ಯುಸಿಡಿ) ಇಲಾಖೆಯ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಏಪ್ರಿಲ್ ಫೂಲ್ ದಿನದ ಅಂಗವಾಗಿ ಹಾಕಿದ್ದ ಎಲ್ಲಾ ಪೋಸ್ಟ್‌ಗಳು ಇದೀಗ ವಿವಾದಕ್ಕೆ ಕಾರಣವಾಗಿವೆ.

ಏಪ್ರಿಲ್‌ನಲ್ಲಿ ಜಾರಿಗೆ ಬಂದ ಕೆಲವು ವಿಲಕ್ಷಣ ಮತ್ತು ಅಸ್ತಿತ್ವದಲ್ಲಿಲ್ಲದ ಕಾನೂನುಗಳನ್ನು ವಿವರಿಸಲು ಹೋದ ಪೋಸ್ಟ್‌ಗಳು 'ಅಸೂಕ್ಷ್ಮ' ಮತ್ತು 'ಮಹಿಳೆಯರನ್ನು ಉನ್ನತೀಕರಿಸುವಲ್ಲಿ ಕೇರಳ ಸಾಧಿಸಿದ ಪ್ರಗತಿಯನ್ನು ಕಡಿಮೆಗೊಳಿಸಿವೆ' ಎಂದು ಪರಿಗಣಿಸಲಾಗಿದೆ. 

'ವರದಕ್ಷಿಣೆ ತೆಗೆದುಕೊಳ್ಳುವುದು ಅಥವಾ ನೀಡುವುದು ಶಿಕ್ಷಾರ್ಹ ಅಪರಾಧವಲ್ಲ', 'ವಿವಾಹಿತ ಮಹಿಳೆಯರು ಮನೆಯಲ್ಲಿಯೇ ಇರಬೇಕು' ಮತ್ತು 'ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಲು ಪತಿ ಹೆಂಡತಿಯ ಮೇಲೆ ಹಲ್ಲೆ ನಡೆಸಬಹುದು' ಎಂಬ ಸಂದೇಶಗಳನ್ನು ಡಬ್ಲ್ಯುಸಿಡಿ ಇಲಾಖೆಯ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಪೋಸ್ಟ್ ಮಾಡಿದ ಕಾರ್ಡ್‌ಗಳಲ್ಲಿನ ಯಾವುದೇ ಸಂದೇಶವು ಕಾನೂನುಬದ್ಧವಾಗಿಲ್ಲ ಎಂಬುದನ್ನು ಹೈಲೈಟ್ ಮಾಡುವುದು ಉದ್ದೇಶಿತ ಆಲೋಚನೆಯಾಗಿದ್ದರೂ, ಹೇಳಬೇಕಾಗಿದ್ದ ಮುಖ್ಯ ವಿಷಯ ಅಲ್ಲಿ ಕಳೆದುಹೋಗಿದೆ. ಈ ಸಂಬಂಧ ನೆಟಿಜನ್‌ಗಳು ಟೀಕೆ ಮತ್ತು ಕಾಮೆಂಟ್‌ಗಳೊಂದಿಗೆ ವಿರೋಧ ವ್ಯಕ್ತಪಡಿಸುತ್ತಲೇ, ಅಧಿಕಾರಿಗಳು ತ್ವರಿತವಾಗಿ ಆ ಪೋಸ್ಟ್‌ಗಳನ್ನು ತೆಗೆದುಹಾಕಿದರು. 
ಕೇರಳ ಪ್ರವಾಸೋದ್ಯಮದ ಪೋಸ್ಟ್ ಚರ್ಚೆ

ಕೇರಳ ಪ್ರವಾಸೋದ್ಯಮವು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ ಫೋಟೋದಲ್ಲಿ ಹಾಲಿವುಡ್‌ನ ನೆಚ್ಚಿನ ದಂಪತಿಗಳಾದ ಟಾಮ್ ಹಾಲೆಂಡ್ ಮತ್ತು ಝೆಂಡಯಾ ಮುನ್ನಾರ್‌‌ನಂತೆ ಕಾಣುವ ತೋಟಗಳ ಸಾಲುಗಳಲ್ಲಿ ಅಡ್ಡಾಡುತ್ತಿರುವುದನ್ನು ತೋರಿಸಿದೆ. ಮೇಲ್ನೋಟಕ್ಕೆ ಈ ಫೋಟೊಗಳು ನಕಲಿಯಾಗಿದ್ದರೂ, ದಂಪತಿ ಮುಂಬೈಗೆ ಬಂದಿದ್ದಾರೆ ಎಂದು ಶುಕ್ರವಾರ ತಿಳಿಯುತ್ತಿದ್ದಂತೆ ಈ ಫೋಟೊ ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com