ಅಯೋಧ್ಯೆ ರಾಮಮಂದಿರದ ಭದ್ರತೆಗಾಗಿ 2 ಬಾಂಬ್ ಸ್ಕ್ವಾಡ್ ನಿಯೋಜನೆ
ಅಯೋಧ್ಯೆಯಲ್ಲಿ ನಡೆಯುತ್ತಿರುವ ರಾಮಮಂದಿರ ನಿರ್ಮಾಣದ ದೃಷ್ಟಿಯಿಂದ ಬಾಂಬ್ ನಿಷ್ಕ್ರಿಯ ಮತ್ತು ಪತ್ತೆ ದಳದ(ಬಿಡಿಡಿಎಸ್) ಎರಡು ತಂಡಗಳನ್ನು ಭದ್ರತೆಗಾಗಿ ಪ್ರತ್ಯೇಕವಾಗಿ ನಿಯೋಜಿಸಲಾಗಿದೆ...
Published: 03rd April 2023 07:19 PM | Last Updated: 03rd April 2023 08:14 PM | A+A A-

ಅಯೋಧ್ಯೆಯ ಉದ್ದೇಶಿತ ರಾಮಮಂದಿರ
ಅಯೋಧ್ಯೆ: ಅಯೋಧ್ಯೆಯಲ್ಲಿ ನಡೆಯುತ್ತಿರುವ ರಾಮಮಂದಿರ ನಿರ್ಮಾಣದ ದೃಷ್ಟಿಯಿಂದ ಬಾಂಬ್ ನಿಷ್ಕ್ರಿಯ ಮತ್ತು ಪತ್ತೆ ದಳದ(ಬಿಡಿಡಿಎಸ್) ಎರಡು ತಂಡಗಳನ್ನು ಭದ್ರತೆಗಾಗಿ ಪ್ರತ್ಯೇಕವಾಗಿ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಅಲಹಾಬಾದ್ ಹೈಕೋರ್ಟ್, ಲಖನೌ ಬೆಂಚ್‌ನ ಹೈಕೋರ್ಟ್, ವಾರಣಾಸಿ ಕಮಿಷನರೇಟ್, ಪಿಎಸಿ ಗೊಂಡಾ ಮತ್ತು ಲಖನೌದ ಸೆಕ್ರೆಟರಿಯೇಟ್ ಕಾಂಪ್ಲೆಕ್ಸ್‌ನಲ್ಲಿ ಐದು ಹೊಸ ಬಿಡಿಡಿಎಸ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಯೋಧ್ಯೆಯ ರಾಮ ಜನ್ಮಭೂಮಿ ಸಂಕೀರ್ಣದ ಭದ್ರತೆಗಾಗಿ ಬಿಡಿಡಿಎಸ್‌ನ ಎರಡು ತಂಡಗಳನ್ನು ಪ್ರತ್ಯೇಕವಾಗಿ ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನು ಓದಿ: ಅಯೋಧ್ಯೆಗೆ ಕರ್ನಾಟಕದ ಬೃಹತ್ ಶಿಲೆ; ಶ್ರೀರಾಮ ಮೂರ್ತಿ ಕೆತ್ತನೆಗೆ ಕಾರ್ಕಳದ ಕಲ್ಲು ಆಯ್ಕೆ!
ಬಿಡಿಡಿಎಸ್ ಜೊತೆಗೆ, ಅಯೋಧ್ಯೆಯಲ್ಲಿ ಎರಡು ಹೊಸ ವಿಧ್ವಂಸಕ ವಿರೋಧಿ ತಪಾಸಣೆ ತಂಡಗಳನ್ನು ಸಹ ನಿಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.
13 ವರ್ಷಗಳ ನಂತರ, ಉತ್ತರ ಪ್ರದೇಶ ಪೊಲೀಸರ ಭದ್ರತಾ ವಿಭಾಗದ ಬಿಡಿಡಿಎಸ್ ತಂಡಗಳನ್ನು ರಾಜ್ಯ ಮಟ್ಟದಲ್ಲಿ ಹೆಚ್ಚಿಸಲಾಗಿದೆ.
ಈಗ ರಾಜ್ಯಾದ್ಯಂತ ಬಿಡಿಡಿಎಸ್‌ನ 31 ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.