ತಮ್ಮ ದೇವಸ್ಥಾನದಲ್ಲಿ ತಂಗುವಂತೆ ರಾಹುಲ್ ಗಾಂಧಿಗೆ ಅಯೋಧ್ಯೆ ಶ್ರೀ ಆಹ್ವಾನ
ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ಕೇಂದ್ರ ಸರ್ಕಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ನೋಟಿಸ್ ನೀಡಿದ ಬೆನ್ನಲ್ಲೇ ಅವರಿಗೆ ಮನೆ ನೀಡಲು ಹಲವರು ಮುಂದೆ ಬಂದಿದ್ದರು. ಇದೀಗ ಅಯೋಧ್ಯೆ ಶ್ರೀಗಳೊಬ್ಬರು ತಮ್ಮ ದೇವಸ್ಥಾನದ...
Published: 04th April 2023 04:56 PM | Last Updated: 04th April 2023 07:35 PM | A+A A-

ರಾಹುಲ್ ಗಾಂಧಿಗೆ ಮನೆ ನೀಡಿದ ಕಾಂಗ್ರೆಸ್ ನಾಯಕ
ಅಯೋಧ್ಯೆ: ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ಕೇಂದ್ರ ಸರ್ಕಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ನೋಟಿಸ್ ನೀಡಿದ ಬೆನ್ನಲ್ಲೇ ಅವರಿಗೆ ಮನೆ ನೀಡಲು ಹಲವರು ಮುಂದೆ ಬಂದಿದ್ದರು. ಇದೀಗ ಅಯೋಧ್ಯೆ ಶ್ರೀಗಳೊಬ್ಬರು ತಮ್ಮ ದೇವಸ್ಥಾನದ ಆವರಣದಲ್ಲಿ ಸನ್ಯಾಸಿಗಳೊಂದಿಗೆ ವಾಸಿಸುವಂತೆ ರಾಹುಲ್ ಗಾಂಧಿ ಅವರಿಗೆ ಆಹ್ವಾನ ನೀಡಿದ್ದಾರೆ.
ಹನುಮಾನ್ ಘರಿ ದೇವಸ್ಥಾನದ ದರ್ಶಕ ಮಹಂತ್ ಸಂಜಯ್ ದಾಸ್ ಅವರು ಮಂಗಳವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಅಯೋಧ್ಯೆ ದೇವಸ್ಥಾನದ ಆವರಣದಲ್ಲಿ ವಾಸ್ತವ್ಯ ಹೂಡುವಂತೆ ಆಹ್ವಾನ ನೀಡಿದ್ದಾರೆ.
2019 ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ನ್ಯಾಯಾಲಯ ರಾಹುಲ್ ಗಾಂಧಿ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ ಬೆನ್ನಲ್ಲೇ ಲೋಕಸಭೆ ಸಚಿವಾಲಯ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದೆ. ನಂತರ ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ರಾಹುಲ್ ಗಾಂಧಿಗೆ ನೋಟಿಸ್ ನೀಡಲಾಗಿದೆ.
ಇದನ್ನು ಓದಿ: ನಮ್ಮ ಮನೆಯೂ ನಿಮ್ಮದೆ ಮನೆ: 'ಹೋಮ್ ಲೆಸ್' ರಾಹುಲ್ ಗೆ ಹರಿದು ಬಂತು ಮನೆಗಳ ಮಹಾಪೂರ; ಕಾಂಗ್ರೆಸ್ ಹೊಸ ಅಭಿಯಾನ!
"ನಾವು ರಾಹುಲ್ ಗಾಂಧಿಯನ್ನು ಹನುಮಾನ್‌ಘರಿ ಮತ್ತು ಅಯೋಧ್ಯೆಗೆ ಆಹ್ವಾನಿಸುತ್ತೇವೆ. ಅವರು ಇಲ್ಲಿಗೆ ಬಂದರೆ ನಾವು ಅವರಿಗೆ ನಮ್ಮ ಸ್ಥಾನವನ್ನು ನೀಡುತ್ತೇವೆ" ಎಂದು ಮಹಂತ್ ಸಂಜಯ್ ದಾಸ್ ಅವರು ಹೇಳಿದ್ದಾರೆ.
ಬಿಜೆಪಿ ಪ್ರಾಬಲ್ಯವಿರುವ ಅಯೋಧ್ಯೆಯಲ್ಲಿ ಶ್ರೀಗಳು ನೀಡಿರುವ ಈ ಆಫರ್ ಕಾಂಗ್ರೆಸ್ ಗೆ ವ್ಯಕ್ತವಾಗುತ್ತಿರುವ ಬೆಂಬಲ ಎಂದು ಹಲವರು ವಿಶ್ಲೇಷಣೆ ಮಾಡುತ್ತಿದ್ದಾರೆ.