ಚೆನ್ನೈ: ಮಾಜಿ ಪ್ರೇಮಿಯನ್ನು ಕೊಂದು, ದೇಹವನ್ನು ತುಂಡು ತುಂಡು ಮಾಡಿ ಹೂತುಹಾಕಿದ್ದ ಮಹಿಳೆಯ ಬಂಧನ
38 ವರ್ಷದ ಮಹಿಳೆಯೊಬ್ಬಳು ತನ್ನ ಮಾಜಿ ಪ್ರೇಮಿಯನ್ನು ಕೊಂದು, ಆತನ ದೇಹವನ್ನು ತುಂಡುಗಳಾಗಿ ಕತ್ತರಿಸಿ ಚೆನ್ನೈನ ಹೊರವಲಯದಲ್ಲಿರುವ ಕೋವಲಂನಲ್ಲಿ ಹೂತುಹಾಕಿದ ಆರೋಪದ ಮೇಲೆ ಬಂಧಿಸಲಾಗಿದೆ. ಆಪಾದಿತ ಅಪರಾಧದಲ್ಲಿ ಆಕೆಗೆ ಸಹಾಯ ಮಾಡಿದ ಮೂವರು ತಲೆಮರೆಸಿಕೊಂಡಿದ್ದಾರೆ. ಪೊಲೀಸರಿಗೆ ಇನ್ನೂ ಮೃತದೇಹ ಪತ್ತೆಯಾಗಿಲ್ಲ.
Published: 04th April 2023 05:24 PM | Last Updated: 04th April 2023 05:24 PM | A+A A-

ಪ್ರಾತಿನಿಧಿಕ ಚಿತ್ರ
ಚೆನ್ನೈ: 38 ವರ್ಷದ ಮಹಿಳೆಯೊಬ್ಬಳು ತನ್ನ ಮಾಜಿ ಪ್ರೇಮಿಯನ್ನು ಕೊಂದು, ಆತನ ದೇಹವನ್ನು ತುಂಡುಗಳಾಗಿ ಕತ್ತರಿಸಿ ಚೆನ್ನೈನ ಹೊರವಲಯದಲ್ಲಿರುವ ಕೋವಲಂನಲ್ಲಿ ಹೂತುಹಾಕಿದ ಆರೋಪದ ಮೇಲೆ ಬಂಧಿಸಲಾಗಿದೆ. ಆಪಾದಿತ ಅಪರಾಧದಲ್ಲಿ ಆಕೆಗೆ ಸಹಾಯ ಮಾಡಿದ ಮೂವರು ತಲೆಮರೆಸಿಕೊಂಡಿದ್ದಾರೆ. ಪೊಲೀಸರಿಗೆ ಇನ್ನೂ ಮೃತದೇಹ ಪತ್ತೆಯಾಗಿಲ್ಲ.
ವಿಲ್ಲುಪುರಂ ಮೂಲದ ಎಂ ಜಯಂತನ್ (29) ಕೊಲೆಯಾದ ವ್ಯಕ್ತಿ. ಅವರು ಚೆನ್ನೈ ವಿಮಾನ ನಿಲ್ದಾಣದಲ್ಲಿ ಥಾಯ್ ಏರ್‌ವೇಸ್‌ನಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಮದ್ರಾಸ್ ಹೈಕೋರ್ಟ್‌ನಲ್ಲಿ ವಕೀಲರಾಗಿದ್ದ ಅವರ ಸಹೋದರಿ ಪಿ ಜಯಕೃಬಾ (41) ಅವರು ಮಾರ್ಚ್ 21ರಂದು ಪಜವಂತಂಗಲ್ ಪೊಲೀಸರಿಗೆ ಮಿಸ್ಸಿಂಗ್ ದೂರು ನೀಡಿದ ನಂತರ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಆಕೆಯ ದೂರಿನಲ್ಲಿ, ಆಕೆಯ ಸಹೋದರ ಜಯಂತನ್ ತನ್ನೊಂದಿಗೆ ಕಳೆದ ಐದು ವರ್ಷಗಳಿಂದ ವಾಸಿಸುತ್ತಿದ್ದನು ಎಂದಿದ್ದಾರೆ.
ಮಾರ್ಚ್ 18 ರಂದು, ಆತ ಕೆಲಸ ಮುಗಿಸಿ ವಿಲ್ಲುಪುರಂ ಮನೆಗೆ ಹೋಗುವುದಾಗಿ ಹೇಳಿದ್ದನು. ಆದರೆ, ಜಯಂತನ್ ತನ್ನ ತವರೂರಿಗೆ ತಲುಪಿರಲಿಲ್ಲ ಮತ್ತು ಆತನ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ಅವರು ಹೇಳಿದರು. ಆಕೆಯ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ನಾಪತ್ತೆಯಾದ ಒಂದು ದಿನದ ನಂತರ ಜಯಂತನ್ ಪುದುಕ್ಕೊಟ್ಟೈನಲ್ಲಿದ್ದರು ಎಂಬುದು ತನಿಖೆಯ ವೇಳೆ ಬೆಳಕಿಗೆ ಕಳೆದ ಮಾರ್ಚ್ 19ರಂದು ಬಂದಿದೆ. ಆತ ಈ ಹಿಂದೆ ಸಂಬಂಧ ಹೊಂದಿದ್ದ ಮಹಿಳೆಯನ್ನು ಭೇಟಿಯಾಗಲು ಅಲ್ಲಿಗೆ ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಜಿ ಬಕ್ಕಿಯಲಕ್ಷ್ಮಿ ಎಂದು ಗುರುತಿಸಲಾದ ಮಹಿಳೆ ಲೈಂಗಿಕ ಕಾರ್ಯಕರ್ತೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಭೇಟಿಯ ಸಮಯದಲ್ಲಿ, ಅವರು ಜಗಳವಾಡಿದ್ದಾರೆ ಮತ್ತು ಬಕ್ಕಿಯಲಕ್ಷ್ಮಿ ತನ್ನ ಸ್ನೇಹಿತ ಶಂಕರ್‌ಗೆ ಕರೆ ಮಾಡಿದ್ದಾಳೆ. ಆತ ತನ್ನಿಬ್ಬರು ಸ್ನೇಹಿತರೊಂದಿಗೆ ಅಲ್ಲಿಗೆ ಬಂದಿದ್ದಾನೆ.
ಇದನ್ನೂ ಓದಿ: 23 ವರ್ಷದ ಮಗಳಿಂದ ತಾಯಿಯ ಕೊಲೆ; ದೇಹದ ತುಂಡುಗಳನ್ನು 3 ತಿಂಗಳವರೆಗೆ ಮನೆಯಲ್ಲಿಟ್ಟುಕೊಂಡಿದ್ದ ಪಾತಕಿ!
'ಗ್ಯಾಂಗ್ ಜಯಂತನನ್ನು ಕೊಂದು ಆತನ ದೇಹವನ್ನು ತುಂಡುಗಳಾಗಿ ಕತ್ತರಿಸಿದೆ. ನಂತರ ಆತನ ಕೈಕಾಲುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ, ಮಾರ್ಚ್ 20ರ ಬೆಳ್ಳಂಬೆಳಗ್ಗೆ ಬಸ್ಸನ್ನು ಹತ್ತಿ ನಗರದ ಹೊರವಲಯದಲ್ಲಿ ಇಳಿದಿದೆ. ಅವರು ದೇಹದ ಭಾಗಗಳನ್ನು ಕೋವಲಂನಲ್ಲಿ ಹೂತುಹಾಕಿ ಪುದುಕ್ಕೊಟ್ಟೈಗೆ ಮರಳಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಬಕ್ಕಿಯಲಕ್ಷ್ಮಿ ಎರಡು ಬಾರಿ 380 ಕಿ.ಮೀ. ಪ್ರಯಾಣ ಮಾಡಿದ್ದಳು. ಅಲ್ಲದೆ, ಆಕೆ ಆರು ದಿನಗಳ ಕಾಲ ದೇಹದ ಉಳಿದ ಭಾಗಗಳೊಂದಿಗೆ ಇದ್ದಳು. ಮಾರ್ಚ್ 26 ರಂದು ಆಕೆ ಕಾರನ್ನು ಬಾಡಿಗೆಗೆ ಪಡೆದುಕೊಂಡು ಬಂದಿದ್ದಾರೆ. ಈ ಬಾರಿ ಬಕ್ಕಿಯಲಕ್ಷ್ಮಿ ಅವರು ಹಳೆಯ ಸ್ನೇಹಿತರಾಗಿದ್ದ ದೇವಸ್ಥಾನದ ಅರ್ಚಕರೊಬ್ಬರು, ಕೋವಲಂ ಬಳಿ ಶವವನ್ನು ಹೂಳಲು ಸಹಾಯ ಮಾಡಿದ್ದಾರೆ. ಅರ್ಚಕನ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇಹದ ಭಾಗಗಳನ್ನು ಹೊರತೆಗೆಯಲು ತಹಶೀಲ್ದಾರ್ ಹಾಗೂ ಕಂದಾಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯು ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಿದ್ದು, ಪ್ರಕರಣದ ತಳಹದಿಯನ್ನು ಪಡೆಯಲು ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪುದುಕ್ಕೊಟ್ಟೈನಲ್ಲಿ ಬಕ್ಕಿಯಲಕ್ಷ್ಮಿಗೆ ಸಹಾಯ ಮಾಡಿದ ಮೂವರನ್ನು ಹಿಡಿಯಲು ಹುಡುಕಾಟ ನಡೆಯುತ್ತಿದೆ.
ಇದನ್ನೂ ಓದಿ: ಉತ್ತರ ಪ್ರದೇಶ: ತಂದೆಯನ್ನು ಕೊಂದು, ಸೂಟ್‌ಕೇಸ್‌ಗೆ ತುಂಬಲು ದೇಹವನ್ನು ಕತ್ತರಿಸಿದ ಆರೋಪಿ
ಪೋಲೀಸರ ಪ್ರಕಾರ, ಜಯಂತನ್ ಬಕ್ಕಿಯಲಕ್ಷ್ಮಿಯನ್ನು ಮೊದಲು 2020 ರಲ್ಲಿ ಲಾಡ್ಜ್‌ನಲ್ಲಿ ಭೇಟಿಯಾಗಿದ್ದನು. ಜಯಂತನ್ ತನ್ನ ಮನೆಯವರಿಗೆ ತಿಳಿಯದೆ ವಿಲ್ಲುಪುರಂನ ದೇವಸ್ಥಾನದಲ್ಲಿ ಆಕೆಯನ್ನು ಮದುವೆಯಾದನು. ಜನವರಿ 2021ರಲ್ಲಿ ದೂರವಾಗಿದ್ದರು. ಬಕ್ಕಿಯಲಕ್ಷ್ಮಿ ಆಗಾಗ ಜಯಂತನ್‌ಗೆ ಹಣಕ್ಕಾಗಿ ಬೇಡಿಕೆಯಿಡುತ್ತಿದ್ದಳು ಮತ್ತು ಇದು ಆಗಾಗ್ಗೆ ಜಗಳಕ್ಕೆ ಕಾರಣವಾಗುತ್ತಿತ್ತು. ಇತ್ತೀಚೆಗಷ್ಟೇ ಆಕೆಯನ್ನು ಮತ್ತೆ ಏಕೆ ಭೇಟಿಯಾದನು ಎಂಬುದು ಸ್ಪಷ್ಟವಾಗಿಲ್ಲ. ಪ್ರಕರಣವನ್ನು ಅಪರಾಧ ನಡೆದ ಪುದುಕ್ಕೊಟ್ಟೈ ಪೊಲೀಸರಿಗೆ ವರ್ಗಾಯಿಸಬಹುದು ಎಂದು ಪೊಲೀಸರು ಸೇರಿಸಿದ್ದಾರೆ.