ಮನೀಶ್ ಸಿಸೋಡಿಯಾ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ, ಏಪ್ರಿಲ್ 12ರಂದು ಜಾಮೀನು ಅರ್ಜಿ ವಿಚಾರಣೆ
ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆ ನಡೆಸುತ್ತಿರುವ ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ನಾಯಕ ಮನೀಶ್ ಸಿಸೋಡಿಯಾ ಅವರ ನ್ಯಾಯಾಂಗ ಬಂಧನವನ್ನು ದೆಹಲಿ ನ್ಯಾಯಾಲಯವು ಏಪ್ರಿಲ್ 17 ರವರೆಗೆ ವಿಸ್ತರಿಸಿದೆ ಮತ್ತು ಏಪ್ರಿಲ್ 12 ರಂದು ಅವರ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಲಿದೆ.
Published: 05th April 2023 04:33 PM | Last Updated: 05th April 2023 04:36 PM | A+A A-

ಮನೀಶ್ ಸಿಸೋಡಿಯಾ
ನವದೆಹಲಿ: ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆ ನಡೆಸುತ್ತಿರುವ ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ನಾಯಕ ಮನೀಶ್ ಸಿಸೋಡಿಯಾ ಅವರ ನ್ಯಾಯಾಂಗ ಬಂಧನವನ್ನು ದೆಹಲಿ ನ್ಯಾಯಾಲಯವು ಏಪ್ರಿಲ್ 17 ರವರೆಗೆ ವಿಸ್ತರಿಸಿದೆ ಮತ್ತು ಏಪ್ರಿಲ್ 12 ರಂದು ಅವರ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಲಿದೆ.
ಸಿಸೋಡಿಯಾ ಪರ ವಾದ ಮಂಡಿಸಿದ ವಕೀಲ ವಿವೇಕ್ ಜೈನ್, ಅವರ (ಸಿಸೋಡಿಯಾ) ವಿರುದ್ಧ ಹೊರಿಸಲಾಗಿರುವ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಅಡಿಯಲ್ಲಿ ಯಾವುದೇ ಅಪರಾಧವನ್ನು ಅವರು ಎಸಗಿಲ್ಲ ಎಂದು ಹೇಳಿದರು.
ಸಿಸೋಡಿಯಾ ಪರ ವಕೀಲರ ಸುದೀರ್ಘ ವಾದ ಆಲಿಸಿದ ಬಳಿಕ ರೋಸ್ ಅವೆನ್ಯೂ ನ್ಯಾಯಾಲಯದ ವಿಶೇಷ ಸಿಬಿಐ ನ್ಯಾಯಾಧೀಶ ಎಂ.ಕೆ. ನಾಗ್ಪಾಲ್ ಅವರು ಏಪ್ರಿಲ್ 12ಕ್ಕೆ ಜಾಮೀನು ಅರ್ಜಿಯ ವಿಚಾರಣೆಯನ್ನು ಪಟ್ಟಿ ಮಾಡಿದರು.
ಇ.ಡಿಯನ್ನು ಪ್ರತಿನಿಧಿಸುವ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ಜೊಹೆಬ್ ಹುಸೇನ್ ಅವರು ಹವಾಲಾ ಆಪರೇಟರ್‌ಗಳಿಗೆ ಸಂಬಂಧಿಸಿದ ಕೆಲವು ಹೊಸ ಪುರಾವೆಗಳನ್ನು ಸಂಗ್ರಹಿಸುತ್ತಿರುವುದರಿಂದ ತಮ್ಮ ದಾಖಲೆ ಸಲ್ಲಿಸಲು ಸಮಯ ಕೋರಿದರು.
ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಹಗರಣ: ಸಿಸೋಡಿಯಾ ನ್ಯಾಯಾಂಗ ಬಂಧನ ಏಪ್ರಿಲ್ 17 ರವರೆಗೆ ವಿಸ್ತರಣೆ
'ಮನೀಶ್ ಸಿಸೋಡಿಯಾ ವಿರುದ್ಧ ಕೆಲವು ನಿರ್ಣಾಯಕ ಪುರಾವೆಗಳು ಇನ್ನೂ ಪತ್ತೆಯಾಗುತ್ತಿವೆ' ಎಂದು ಹುಸೇನ್ ಹೇಳಿದರು.
ಮಾರ್ಚ್ 21 ರಂದು, ಇ.ಡಿ ಪ್ರಕರಣದಲ್ಲಿ ಜಾಮೀನು ಕೋರಿ ಸಿಸೋಡಿಯಾ ಮನವಿ ಸಲ್ಲಿಸಿದರು.
ಫೆಬ್ರುವರಿ 26 ರಂದು ಎಎಪಿ ನಾಯಕನನ್ನು ಸಿಬಿಐ ಬಂಧಿಸಿದ ನಂತರ, ಇ.ಡಿ ಕೂಡ ಅದೇ ಪ್ರಕರಣದಲ್ಲಿ ಮಾರ್ಚ್ 9 ರಂದು ಅವರನ್ನು ಬಂಧಿಸಿತು.
ಒಂದು ವರ್ಷದ ಅವಧಿಯಲ್ಲಿ 14 ಫೋನ್‌ಗಳನ್ನು ನಾಶಪಡಿಸಲಾಗಿದೆ ಮತ್ತು ಬದಲಾಯಿಸಲಾಗಿದೆ ಮತ್ತು ಸಿಸೋಡಿಯಾ ಮೊದಲಿನಿಂದಲೂ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ತನಿಖಾ ಸಂಸ್ಥೆ ಈ ಹಿಂದೆ ಹೇಳಿಕೊಂಡಿತ್ತು.