ಮೆಕ್ಸಿಕೋದಿಂದ ಬಂಧಿಸಿ ಕರೆತರಲಾಗಿದ್ದ ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ದೀಪಕ್ ಬಾಕ್ಸರ್ 8 ದಿನಗಳ ಪೊಲೀಸ್ ಕಸ್ಟಡಿಗೆ

ದೆಹಲಿ ನ್ಯಾಯಾಲಯವು ಬುಧವಾರ ಗ್ಯಾಂಗ್‌ಸ್ಟರ್ ದೀಪಕ್ ಬಾಕ್ಸರ್‌ನನ್ನು ಎಂಟು ದಿನಗಳ ದೆಹಲಿ ಪೊಲೀಸರ ವಿಶೇಷ ಸೆಲ್‌ ಕಸ್ಟಡಿಗೆ ನೀಡಿದೆ. ಭದ್ರತಾ ಕಾರಣಗಳಿಗಾಗಿ ಗ್ಯಾಂಗ್‌ಸ್ಟರ್‌ನನ್ನು ನೇರವಾಗಿ ಲಾಕಪ್‌ನಿಂದ ವರ್ಚುಯಲ್ ಆಗಿ ಪಟಿಯಾಲ ಹೌಸ್ ಕೋರ್ಟ್‌ಗೆ ಹಾಜರುಪಡಿಸಲಾಯಿತು.
ದೀಪಕ್ ಬಾಕ್ಸರ್
ದೀಪಕ್ ಬಾಕ್ಸರ್

ನವದೆಹಲಿ: ದೆಹಲಿ ನ್ಯಾಯಾಲಯವು ಬುಧವಾರ ಗ್ಯಾಂಗ್‌ಸ್ಟರ್ ದೀಪಕ್ ಬಾಕ್ಸರ್‌ನನ್ನು ಎಂಟು ದಿನಗಳ ದೆಹಲಿ ಪೊಲೀಸರ ವಿಶೇಷ ಸೆಲ್‌ ಕಸ್ಟಡಿಗೆ ನೀಡಿದೆ.

ಭದ್ರತಾ ಕಾರಣಗಳಿಗಾಗಿ ಗ್ಯಾಂಗ್‌ಸ್ಟರ್‌ನನ್ನು ನೇರವಾಗಿ ಲಾಕಪ್‌ನಿಂದ ವರ್ಚುಯಲ್ ಆಗಿ ಪಟಿಯಾಲ ಹೌಸ್ ಕೋರ್ಟ್‌ಗೆ ಹಾಜರುಪಡಿಸಲಾಯಿತು.

ದೆಹಲಿ ಪೊಲೀಸ್ ವಿಶೇಷ ದಳದ ಐವರು ಸದಸ್ಯರ ತಂಡ ಬುಧವಾರ ಬೆಳಗ್ಗೆ ಇಂದಿರಾ ಗಾಂಧಿ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗ್ಯಾಂಗ್‌ಸ್ಟರ್‌ನೊಂದಿಗೆ ಬಂದಿಳಿದಿತ್ತು. ದೆಹಲಿ ಪೊಲೀಸರು ಎಫ್‌ಬಿಐ ನೆರವಿನೊಂದಿಗೆ ಮೆಕ್ಸಿಕೋದಲ್ಲಿ ಮೋಸ್ಟ್ ವಾಂಟೆಡ್ ದೀಪಕ್ ಬಾಕ್ಸರ್‌ನನ್ನು ಬಂಧಿಸಿದ್ದರು.

ಪೊಲೀಸರ ಪ್ರಕಾರ, ಕುಖ್ಯಾತ ಗ್ಯಾಂಗ್‌ಸ್ಟರ್‌ ದೀಪಕ್ ಪಹಲ್ ಅಲಿಯಾಸ್ ಬಾಕ್ಸರ್, ಹರಿಯಾಣದ ಸೋನಿಪತ್ ನಿವಾಸಿಯಾಗಿದ್ದು, ಕೊಲೆ, ಕೊಲೆ ಯತ್ನ ಮತ್ತು ಕಟ್ಟುನಿಟ್ಟಾದ ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಎಂಸಿಒಸಿಎ) ಸೇರಿದಂತೆ 10 ಕ್ರಿಮಿನಲ್ ಪ್ರಕರಣಗಳಲ್ಲಿ ಬೇಕಾಗಿದ್ದಾನೆ.

ಇದಲ್ಲದೆ, ಜಿತೇಂದರ್ ಗೋಗಿ ಸಾವಿನ ನಂತರ ಆತನ ಗ್ಯಾಂಗ್ ಅನ್ನು ಸಹ ದೀಪಕ್ ಬಾಕ್ಸರ್ ನಿರ್ವಹಿಸುತ್ತಿದ್ದನು. ರೋಹಿಣಿ ನ್ಯಾಯಾಲಯದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಗೋಗಿಯನ್ನು ಪ್ರತಿಸ್ಪರ್ಧಿಗಳು ಕೊಂದಿದ್ದರು. ಆತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದನು.

ಪೊಲೀಸರ ಪ್ರಕಾರ, ದೀಪಕ್ ಬಾಕ್ಸರ್ ಇರುವ ಸ್ಥಳದ ಬಗ್ಗೆ ದೆಹಲಿ ಪೊಲೀಸರ ವಿಶೇಷ ತಂಡಕ್ಕೆ ಲಭ್ಯವಾದ ಸುಳಿವಿನ ಆಧಾರದ ಮೇಲೆ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು.

ತರುವಾಯ, ದೀಪಕ್ ಬಾಕ್ಸರ್ ಕೋಲ್ಕತ್ತಾ ವಿಮಾನ ನಿಲ್ದಾಣದಿಂದ ವಿದೇಶಕ್ಕೆ ಪಲಾಯನ ಮಾಡುವ ಮುನ್ನ ಉತ್ತರ ಪ್ರದೇಶದ ಬರೇಲಿಯಿಂದ ರವಿ ಆಂಟಿಲ್ ಹೆಸರಿನಲ್ಲಿ ನಕಲಿ ಪಾಸ್‌ಪೋರ್ಟ್ ಪಡೆದಿದ್ದನು ಎಂದು ಮೂಲಗಳಿಂದ ತಿಳಿದುಬಂದಿದೆ.

ಅಧಿಕಾರಿಗಳು ಆತನನ್ನು ಮೆಕ್ಸಿಕನ್ ಬೀಚ್ ನಗರವಾದ ಕ್ಯಾನ್‌ಕುನ್‌‌ನಲ್ಲಿ ಪತ್ತೆಹಚ್ಚಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com