ಶಿವಸೇನಾ ಸಂಸದರು, ಶಾಸಕರೊಂದಿಗೆ ಅಯೋಧ್ಯೆಗೆ ಹೊರಟ ಮಹಾ ಸಿಎಂ
ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಶಿವಸೇನೆ ನಾಯಕ ಏಕನಾಥ್ ಶಿಂಧೆ ಅವರು ಶನಿವಾರ ಸಂಜೆ ಪಕ್ಷದ ಸಂಸದರು ಮತ್ತು ಶಾಸಕರೊಂದಿಗೆ ಅಯೋಧ್ಯೆ ಪ್ರವಾಸ ಕೈಗೊಂಡಿದ್ದು, ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
Published: 08th April 2023 07:22 PM | Last Updated: 08th April 2023 07:22 PM | A+A A-

ಸಂಸದರು, ಶಾಸಕರೊಂದಿಗೆ ಅಯೋಧ್ಯೆಗೆ ಹೊರಟ ಮಹಾ ಸಿಎಂ
ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಶಿವಸೇನೆ ನಾಯಕ ಏಕನಾಥ್ ಶಿಂಧೆ ಅವರು ಶನಿವಾರ ಸಂಜೆ ಪಕ್ಷದ ಸಂಸದರು ಮತ್ತು ಶಾಸಕರೊಂದಿಗೆ ಅಯೋಧ್ಯೆ ಪ್ರವಾಸ ಕೈಗೊಂಡಿದ್ದು, ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ಶಿವಸೇನೆಯ ನಾಯಕರು, ಸಂಸದರು ಮತ್ತು ಶಾಸಕರು ಹಾಗೂ ಮಿತ್ರ ಪಕ್ಷ ನಾಯಕರೊಂದಿಗೆ ಶಿಂಧೆ ಅವರು ಮುಂಬೈ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಲಖನೌಗೆ ತೆರಳುತ್ತಿದ್ದಾರೆ.
ಜೂನ್ 2022 ರಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮತ್ತು ಚುನಾವಣಾ ಆಯೋಗವು ಅವರ ನೇತೃತ್ವದ ಬಣಕ್ಕೆ ಶಿವಸೇನೆಯ ಮೂಲ ಚಿಹ್ನೆ 'ಬಿಲ್ಲು ಮತ್ತು ಬಾಣ' ಪಡೆದ ನಂತರ ಶಿಂಧೆ ಅವರು ಮೊದಲ ಬಾರಿಗೆ ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ.
ಇದನ್ನು ಓದಿ: ಬಜೆಟ್ ಅಧಿವೇಶನ ಮುಗಿದ ನಂತರ ಅಯೋಧ್ಯೆಗೆ ಮಹಾರಾಷ್ಟ್ರ ಸಿಎಂ ಶಿಂಧೆ ಭೇಟಿ
ಶಿಂಧೆ ಅವರು ಭಾನುವಾರ ಮಧ್ಯಾಹ್ನ ಲಖನೌದಿಂದ ಅಯೋಧ್ಯೆಗೆ ಪ್ರಯಾಣಿಸಲಿದ್ದು, ನಿರ್ಮಾಣ ಹಂತದಲ್ಲಿರುವ ರಾಮಮಂದಿರದಲ್ಲಿ 'ಮಹಾ ಆರತಿ'ಯಲ್ಲಿ, ನಂತರ ಸಂಜೆ ಶರಾಯು ನದಿಯಲ್ಲಿ 'ಮಹಾ ಆರತಿ'ಯಲ್ಲಿ ಭಾಗವಹಿಸಲಿದ್ದಾರೆ.
ಮಹಾ ಸಿಎಂ ಶಿಂಧೆ ಅವರು ಭಾನುವಾರ ರಾತ್ರಿ ಮುಂಬೈಗೆ ಹಿಂತಿರುಗಲಿದ್ದಾರೆ ಎಂದು ಅವರ ಸಹಾಯಕರು ತಿಳಿಸಿದ್ದಾರೆ.
ಈ ಹಿಂದೆ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನಕ್ಕೂ ಕೆಲವೇ ದಿನಗಳ ಮುನ್ನ, ಜೂನ್ 2022 ರ ಮಧ್ಯಭಾಗದಲ್ಲಿ ಆಗಿನ ಮಹಾರಾಷ್ಟ್ರ ಕ್ಯಾಬಿನೆಟ್ ಸಚಿವ ಆದಿತ್ಯ ಠಾಕ್ರೆ ಅವರೊಂದಿಗೆ ಏಕನಾಥ್ ಶಿಂಧೆ ಅವರು ಅಯೋಧ್ಯೆಗೆ ಭೇಟಿ ನೀಡಿದ್ದರು.