ರಾಜಕೀಯದಲ್ಲಿ ನಾಯಕನ ಆರಾಧನೆ ಕುರಿತು ಅಂಬೇಡ್ಕರ್ ಎಚ್ಚರಿಸಿದ್ದರು: ಮಲ್ಲಿಕಾರ್ಜುನ ಖರ್ಗೆ

ಬಲವಂತದಿಂದ ಜನರ ಬಾಯಿ ಮುಚ್ಚಿಸುವುದು ಮತ್ತು ರಾಷ್ಟ್ರ ವಿರೋಧಿ ಎಂದು ಒಬ್ಬರನ್ನು ಬ್ರಾಂಡ್ ಮಾಡುವುದು ಅಪಾಯಕಾರಿಯಾದ ಬೆಳವಣಿಗೆಯಾಗಿದೆ. ಈ ಪ್ರವೃತ್ತಿ ನಮ್ಮ ಪ್ರಜಾಪ್ರಭುತ್ವವನ್ನು ಕೊನೆಗೊಳಿಸಿ, ಸಂವಿಧಾನವನ್ನು ನಾಶಗೊಳಿಸುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಹೇಳುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 
ಅಂಬೇಡ್ಕರ್, ಮಲ್ಲಿಕಾರ್ಜುನ ಖರ್ಗೆ ಸಾಂದರ್ಭಿಕ ಚಿತ್ರ
ಅಂಬೇಡ್ಕರ್, ಮಲ್ಲಿಕಾರ್ಜುನ ಖರ್ಗೆ ಸಾಂದರ್ಭಿಕ ಚಿತ್ರ

ನವದೆಹಲಿ: ಬಲವಂತದಿಂದ ಜನರ ಬಾಯಿ ಮುಚ್ಚಿಸುವುದು ಮತ್ತು ರಾಷ್ಟ್ರ ವಿರೋಧಿ ಎಂದು ಒಬ್ಬರನ್ನು ಬ್ರಾಂಡ್ ಮಾಡುವುದು ಅಪಾಯಕಾರಿಯಾದ ಬೆಳವಣಿಗೆಯಾಗಿದೆ. ಈ ಪ್ರವೃತ್ತಿ ನಮ್ಮ ಪ್ರಜಾಪ್ರಭುತ್ವವನ್ನು ಕೊನೆಗೊಳಿಸಿ, ಸಂವಿಧಾನವನ್ನು ನಾಶಗೊಳಿಸುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಹೇಳುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಅಂಬೇಡ್ಕರ್ ಜಯಂತಿ ಪ್ರಯುಕ್ತ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮಹತ್ವ ಕುರಿತು ಟ್ವೀಟರ್ ನಲ್ಲಿ ಖರ್ಗೆ ವಿಡಿಯೋ ಸಂದೇಶ ನೀಡಿದ್ದು, ಆಡಳಿತ ಪಕ್ಷದ ನಡೆಯನ್ನು ತೀಕ್ಷ್ಣವಾಗಿ ಖಂಡಿಸಿದ್ದಾರೆ. ಸಂಸತ್ತನ್ನು ಚರ್ಚೆಗಿಂತ ಹೋರಾಟದ ಅಖಾಡವಾಗಿ ಆಡಳಿತ ಪಕ್ಷ ಬದಲಾಯಿಸಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ನಾಯಕನ ಆರಾಧನೆ ಮತ್ತು ಭಕ್ತಿಯ ದುಷ್ಪರಿಣಾಮಗಳ ಕುರಿತು ಅಂಬೇಡ್ಕರ್ ಮೊದಲ್ಲೇ ಎಚ್ಚರಿಸಿದ್ದರು ಎಂದು ಖರ್ಗೆ ನೆನಪು ಮಾಡಿಕೊಂಡಿದ್ದಾರೆ.  ಧರ್ಮದ ಪ್ರಕಾರ ಭಕ್ತಿ ಮೋಕ್ಷದ ದಾರಿಯಾಗಿದೆ. ಆದರೆ, ರಾಜಕೀಯದಲ್ಲಿ ಭಕ್ತಿ ಅಥವಾ ನಾಯಕನ ಆರಾಧನೆ ದೇಶದ ಅವನತಿಗೆ ದಾರಿಯಾಗಲಿದೆ. ಅಂತಿಮವಾಗಿ ಸರ್ವಾಧಿಕಾರಕ್ಕೆ ದಾರಿ ಮಾಡಿಕೊಡಲಿದೆ ಎಂದು ಅಂಬೇಡ್ಕರ್ ಹೇಳಿದ ಮಾತನ್ನು ಖರ್ಗೆ ಪುನರುಚ್ಚರಿಸಿದ್ದಾರೆ.

ಬಾಬಾ ಸಾಹೇಬರು ಸ್ವಾತಂತ್ರ್ಯ,ಸಮಾನತೆ, ಭ್ರಾತೃತ್ವ ಮತ್ತು ನ್ಯಾಯದ ಪ್ರಜಾಸತ್ತಾತ್ಮಕ ತತ್ವಗಳ ಚಾಂಪಿಯನ್ ಆಗಿದ್ದರು. ನಾವೆಲ್ಲರೂ ಅವರನ್ನು ಭಾರತದ ಸಂವಿಧಾನ ಶಿಲ್ಪಿ ಎಂದು ಗೌರವಿಸುತ್ತೇನೆ. ಪ್ರಜಾಪ್ರಭುತ್ವದ ಅವನತಿಗೆ ಅವಕಾಶ ನೀಡುತ್ತವೆಯೇ ಅಥವಾ ಸರ್ವಾಧಿಕಾರಕ್ಕೆ ದಾರಿ ಮಾಡಿಕೊಡುತ್ತವೆಯೇ ಎಂಬ ಆಯ್ಕೆ ನಮ್ಮ ಕೈಯಲ್ಲಿದೆ ಎಂದು ಅವರು ಹೇಳಿದ್ದಾರೆ.

"ಸಂಸತ್ತನ್ನು ಚರ್ಚೆಗಿಂತ ಹೋರಾಟದ ಅಖಾಡವಾಗಿ ಪರಿವರ್ತಿಸಲಾಗಿದೆ. ವಿರೋಧ ಪಕ್ಷದಿಂದಲ್ಲ, ಆದರೆ ಆಡಳಿತ ಪಕ್ಷದಿಂದಲೇ" ಎಂದು ಖರ್ಗೆ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com