ಅದಾನಿ ಗ್ರೂಪ್ ಗೆ ಚೀನಾ ನಂಟು: ಜೆಪಿಸಿ ತನಿಖೆ ಏಕೈಕ ಮಾರ್ಗ ಎಂದ ಕಾಂಗ್ರೆಸ್

ಅದಾನಿ ಗ್ರೂಪ್‌ ಜೊತೆಗಿನ ಚೀನಾ ನಂಟು ಎತ್ತಿ ತೋರಿಸಿದ  ಕಾಂಗ್ರೆಸ್, ಈ ಎಲ್ಲಾ ವಿಷಯಗಳ ಕುರಿತು ತನಿಖೆ ಮಾಡಲು ಜಂಟಿ ಸಂಸದೀಯ ಸಮಿತಿಯೊಂದೇ ನಮ್ಮ ಮುಂದಿರುವ ಏಕೈಕ ಮಾರ್ಗ ಎಂದು ಶುಕ್ರವಾರ ಪ್ರತಿಪಾದಿಸಿದೆ.
ಗೌತಮ್ ಅದಾನಿ
ಗೌತಮ್ ಅದಾನಿ

ನವದೆಹಲಿ: ಅದಾನಿ ಗ್ರೂಪ್‌ ಜೊತೆಗಿನ ಚೀನಾ ನಂಟು ಎತ್ತಿ ತೋರಿಸಿದ ಕಾಂಗ್ರೆಸ್, ಈ ಎಲ್ಲಾ ವಿಷಯಗಳ ಕುರಿತು ತನಿಖೆ ಮಾಡಲು ಜಂಟಿ ಸಂಸದೀಯ ಸಮಿತಿಯೊಂದೇ ನಮ್ಮ ಮುಂದಿರುವ ಏಕೈಕ ಮಾರ್ಗ ಎಂದು ಶುಕ್ರವಾರ ಪ್ರತಿಪಾದಿಸಿದೆ.

ಪಿಎಂಸಿ ಪ್ರಾಜೆಕ್ಟ್ಸ್(ಇಂಡಿಯಾ) ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಮೋರಿಸ್ ಚಾಂಗ್ ಅವರು ಅದಾನಿ ಗ್ರೂಪ್ ಜೊತೆ ನಂಟು ಹೊಂದಿದ್ದಾರೆ ಎಂಬ ಆರೋಪ ಕೇಳಿ ಬಂದನ ನಂತರ "ನಾನು ತೈವಾನ್ ಪ್ರಜೆ" ಅವರು ಹೇಳಿದ್ದಾರೆ. ಪಾಸ್‌ಪೋರ್ಟ್‌ ಆಧರಿಸಿ ಚಾಂಗ್ ಚೀನಾದ ಪ್ರಜೆ ಎಂದು ಹೇಳಲಾಗಿತ್ತು. ಚಾಂಗ್ ಅವರು ಗೌತಮ್ ಅದಾನಿಯವರ ಪೋರ್ಟ್ಸ್-ಟು-ಎನರ್ಜಿ ಜೊತೆ ಸಂಪರ್ಕ ಹೊಂದಿದ್ದಾರೆ.

ಪಿಎಂಸಿ ಪ್ರಾಜೆಕ್ಟ್ಸ್(ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಅದಾನಿ ಗ್ರೂಪ್‌ ಪರವಾಗಿ ಬಂದರುಗಳು, ಟರ್ಮಿನಲ್‌ಗಳು, ರೈಲು ಮಾರ್ಗಗಳು, ವಿದ್ಯುತ್ ಮಾರ್ಗಗಳು ಮತ್ತು ಇತರ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದೆ.

ಈ ಕುರಿತು ಪ್ರಕಟಣೆ ನೀಡಿರುವ ಕಾಂಗ್ರೆಸ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಪಿಎಂಸಿ ಪ್ರಾಜೆಕ್ಟ್ಸ್‌ ಮಾಲೀಕತ್ವ ಚಾಂಗ್‌ ಪುತ್ರನದ್ದು ಎಂದು ನಾವು ಉಲ್ಲೇಖಿಸಿದ್ದೇವೆ. ಕಂದಾಯ ಗುಪ್ತಚರ ನಿರ್ದೇಶನಾಲಯವು ಇದೇ ಕಂಪನಿಯು 5,500 ಕೋಟಿ ರೂಪಾಯಿ ಮೌಲ್ಯದ ಇಂಧನ ಖರೀದಿ ಹಗರಣದಲ್ಲಿ ಭಾಗಿಯಾಗಿರುವುದನ್ನು ಉಲ್ಲೇಖಿಸಿದೆ. ಈ ಎಲ್ಲದರ ಬಗ್ಗೆಯೂ ಜೆಪಿಸಿ ತನಿಖೆ ನಡೆಸುವ ಅಗತ್ಯ ಇದೆ ಎಂದು ಹೇಳಿದ್ದಾರೆ.

ಚಾಂಗ್‌ ಅವರ ಪುತ್ರ ಚಾಂಗ್ ಚೀನ್‌ ಟಿಂಗ್(ಮಾರಿಸ್‌ ಚಾಂಗ್), ತಾನು ತೈವಾನ್‌ ಪಾಸ್‌ಪೋರ್ಟ್ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ ಎಂದು ಜೈರಾಂ ರಮೇಶ್‌ ಅವರು ಉಲ್ಲೇಖಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com