ವಾರಣಾಸಿಯ ಬಲಪಂಥೀಯ ವ್ಯಕ್ತಿಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ವರುಣ್ ಗಾಂಧಿ
ತಮ್ಮ ಟ್ವಿಟರ್ ಖಾತೆಯಲ್ಲಿ ಬಲಪಂಥೀಯ ಗುಂಪಿನ ಪದಾಧಿಕಾರಿ ಎಂದು ಪರಿಚಯಿಸಿಕೊಂಡಿರುವ ವಾರಣಾಸಿ ಮೂಲದ ವಿವೇಕ್ ಪಾಂಡೆ ವಿರುದ್ಧ ಪಿಲಿಭಿತ್ ಸಂಸದ ವರುಣ್ ಗಾಂಧಿ ಅವರು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
Published: 16th April 2023 11:10 AM | Last Updated: 16th April 2023 11:10 AM | A+A A-

ವರುಣ್ ಗಾಂಧಿ (ಸಂಗ್ರಹ ಚಿತ್ರ)
ಫಿಲಿಭಿತ್: ತಮ್ಮ ಟ್ವಿಟರ್ ಖಾತೆಯಲ್ಲಿ ಬಲಪಂಥೀಯ ಗುಂಪಿನ ಪದಾಧಿಕಾರಿ ಎಂದು ಪರಿಚಯಿಸಿಕೊಂಡಿರುವ ವಾರಣಾಸಿ ಮೂಲದ ವಿವೇಕ್ ಪಾಂಡೆ ವಿರುದ್ಧ ಪಿಲಿಭಿತ್ ಸಂಸದ ವರುಣ್ ಗಾಂಧಿ ಅವರು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಮಾರ್ಚ್ 29ರಂದು ತಮ್ಮ ದಿವಂಗತ ತಂದೆ ಸಂಜಯ್ ಗಾಂಧಿ ಕುರಿತು ಪಾಂಡೆ ಅವರು ತಮ್ಮ ಟ್ವಿಟರ್ ಹ್ಯಾಂಡಲ್, '@vivekkumar_IND' ಮೂಲಕ ಪೋಸ್ಟ್ ಮಾಡಿದ ಕೆಲವು ಅವಹೇಳನಕಾರಿ ಕಮೆಂಟ್‌ಗಳ ವಿರುದ್ಧ ವರುಣ್ ಗಾಂಧಿ ಅವರು ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ II, ಅಭಿನವ್ ತಿವಾರಿ ಅವರನ್ನು ಸಂಪರ್ಕಿಸಿದ್ದಾರೆ.
ಪಾಂಡೆ ತನ್ನ ತಂದೆಯನ್ನು 'ಕೆಟ್ಟದಾಗಿ ಬಿಂಬಿಸಿದ್ದಾರೆ' ತೋರಿಸಿದ್ದಾರೆ ಮತ್ತು ಅವರ ಬಗ್ಗೆ ಆಕ್ಷೇಪಾರ್ಹ ಟೀಕೆ ಮಾಡಿದ್ದಾರೆ ಎಂದು ಗಾಂಧಿ ತಮ್ಮ ದೂರಿನಲ್ಲಿ ಹೇಳಿದ್ದಾರೆ.
ಈ ಕಟ್ಟುಕಥೆ ಮತ್ತು ಸುಳ್ಳು ಟ್ವೀಟ್ ಅನ್ನು ಆರೋಪಿಯು ತನ್ನ ದಿವಂಗತ ತಂದೆ ಮತ್ತು ಅವರ ಕುಟುಂಬದ ಮಾನಹಾನಿ ಮಾಡುವ ಉದ್ದೇಶದಿಂದ ಪೋಸ್ಟ್ ಮಾಡಿದ್ದಾನೆ. ಈ ಪೋಸ್ಟ್ ನಮ್ಮ ಭಾವನೆಗಳಿಗೆ ತೀವ್ರ ನೋವುಂಟು ಮಾಡಿದೆ ಎಂದು ಅವರು ಹೇಳಿದರು.
ಪಿಲಿಭಿತ್‌ನ ಹಿರಿಯ ವಕೀಲೆ ಅಶ್ವಿನಿ ಅಗ್ನಿಹೋತ್ರಿ, ಐಪಿಸಿ ಸೆಕ್ಷನ್ 500ರ ಅಡಿಯಲ್ಲಿ ಆರೋಪಿಗೆ ಮಾನನಷ್ಟಕ್ಕಾಗಿ ಎರಡು ವರ್ಷಗಳ ಅವಧಿಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು ಎಂದು ಹೇಳಿದರು.