ಹೆಚ್ಚುವರಿಯಾಗಿ ಮರ ಕಡಿದಿದ್ದಕ್ಕೆ ಮುಂಬೈ ಮೆಟ್ರೋಗೆ 10 ಲಕ್ಷ ರೂಪಾಯಿ ದಂಡ!

ಅನುಮತಿಯನ್ನು ಮೀರಿ, ಆರೇ ಅರಣ್ಯ ಪ್ರದೇಶದಲ್ಲಿ ಮರಗಳನ್ನು ಹೆಚ್ಚುವರಿಯಾಗಿ ಕಡಿದಿದ್ದಕ್ಕೆ ಮುಂಬೈ ಮೆಟ್ರೋಗೆ 10 ಲಕ್ಷ ರೂಪಾಯಿ ಮೊತ್ತದ ದಂಡ ಪಾವತಿಸುವಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. 
ಮುಂಬೈ ಮೆಟ್ರೋ ಕಾಮಗಾರಿ ಸ್ಥಳದ ದೃಶ್ಯ (ಸಂಗ್ರಹ ಚಿತ್ರ)
ಮುಂಬೈ ಮೆಟ್ರೋ ಕಾಮಗಾರಿ ಸ್ಥಳದ ದೃಶ್ಯ (ಸಂಗ್ರಹ ಚಿತ್ರ)

ಮುಂಬೈ: ಅನುಮತಿಯನ್ನು ಮೀರಿ, ಆರೇ ಅರಣ್ಯ ಪ್ರದೇಶದಲ್ಲಿ ಮರಗಳನ್ನು ಹೆಚ್ಚುವರಿಯಾಗಿ ಕಡಿದಿದ್ದಕ್ಕೆ ಮುಂಬೈ ಮೆಟ್ರೋಗೆ 10 ಲಕ್ಷ ರೂಪಾಯಿ ಮೊತ್ತದ ದಂಡ ಪಾವತಿಸುವಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. 

ನ್ಯಾಯಾಲಯದ ವ್ಯಾಪ್ತಿಯನ್ನು ಮೀರುವ ಯತ್ನ ಮುಂಬೈ ಮೆಟ್ರೋದಿಂದ ನಡೆದಿದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್, 2 ವಾರಗಳಲ್ಲಿ ದಂಡದ ಮೊತ್ತವನ್ನು ಪಾವತಿಸುವಂತೆ ಸೂಚನೆ ನೀಡಿದೆ. 

ನ್ಯಾ. ಡಿ.ವೈ ಚಂದ್ರಚೂಡ್, ನ್ಯಾ. ಪಿಎಸ್ ನರಸಿಂಹ ಹಾಗೂ ಜೆಬಿ ಪರ್ದಿವಾಲ ಅವರಿದ್ದ ಪೀಠ, ಈ ಆದೇಶ ಪ್ರಕಟಿಸಿದ್ದು, ಮುಂಬೈ ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಎಂಎಂಆರ್ ಸಿಎಲ್) 84 ಮರಗಳನ್ನು ಹೆಚ್ಚುವರಿಯಾಗಿ ಕಡಿದಿರುವುದು ಸರಿಯಲ್ಲ ಎಂದು ಹೇಳಿದೆ.

ಆದರೆ ಕೋರ್ಟ್ ಈ ಹಿಂದೆ 177 ಮರಗಳನ್ನು ಕಡಿಯುವುದಕ್ಕೆ ಅನುಮತಿ ನೀಡಿತ್ತು. ಆಗ ಮರ ಕಡಿಯುವುದಕ್ಕೆ ತಡೆ ನೀಡಿದರೆ, ಸಾರ್ವಜನಿಕ ಯೋಜನೆಗಳಿಗೆ ಅಡ್ಡಿಯಾಗುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತ್ತು.

ಈಗ ಕೋರ್ಟ್ ಆದೇಶವನ್ನು ಮೀರಿ ಹೆಚ್ಚುವರಿಯಾಗಿ ಮರ ಕಡಿದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಕೋರ್ಟ್ 10 ಲಕ್ಷ ರೂಪಾಯಿ ದಂಡವನ್ನು ಅರಣ್ಯ ಸಂರಕ್ಷಣಾಧಿಕಾರಿಗೆ ಪಾವತಿಸಬೇಕು ಹಾಗೂ ನಿರ್ದೇಶನ ನೀಡಿರುವ ಪ್ರಕಾರ ಎಲ್ಲಾ ಅರಣ್ಯೀಕರಣ ಪೂರ್ಣಗೊಂಡಿದೆ ಎಂಬುದನ್ನು ಸಂರಕ್ಷಣಾಧಿಕಾರಿ ಖಚಿತಪಡಿಸಿಕೊಳ್ಳಬೇಕು, ”ಎಂದು ನ್ಯಾಯಪೀಠ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com