ಮಹಾರಾಷ್ಟ್ರ: ಚಂದ್ರಾಪುರದಲ್ಲಿ ಚಿರತೆ ದಾಳಿಗೆ ಮಹಿಳೆ ಸಾವು
ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ 53 ವರ್ಷದ ಮಹಿಳೆಯ ಮೇಲೆ ಚಿರತೆ ದಾಳಿ ನಡೆಸಿದೆ. ಮಹಿಳೆಯನ್ನು ಚಿರತೆ ಎಳೆದೊಯ್ದು ಕೊಂದಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
Published: 18th April 2023 10:08 PM | Last Updated: 19th April 2023 02:19 PM | A+A A-

ಸಾಂದರ್ಭಿಕ ಚಿತ್ರ
ಚಂದ್ರಾಪುರ: ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ 53 ವರ್ಷದ ಮಹಿಳೆಯ ಮೇಲೆ ಚಿರತೆ ದಾಳಿ ನಡೆಸಿದೆ. ಮಹಿಳೆಯನ್ನು ಚಿರತೆ ಎಳೆದೊಯ್ದು ಕೊಂದಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರದಿಂದ ಸುಮಾರು 56 ಕಿ.ಮೀ ದೂರದಲ್ಲಿರುವ ಸಾವೊಲಿ ಅರಣ್ಯ ವ್ಯಾಪ್ತಿಯ ವಿರ್ಖಾಲ್ಚಕ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೃತ ಮಹಿಳೆಯನ್ನು ಮಂದಾಬಾಯಿ ಸಿದಮ್ ಎಂದು ಗುರುತಿಸಲಾಗಿದೆ. ಸೋಮವಾರ ತಡರಾತ್ರಿ ಮಹಿಳೆ ತನ್ನ ಮನೆಯ ಹೊರಗೆ ಮಲಗಿದ್ದಾಗ ಚಿರತೆ ದಾಳಿ ನಡೆಸಿದೆ ಎಂದು ಚಂದ್ರಾಪುರ ವೃತ್ತದ ಹಿರಿಯ ಅರಣ್ಯಾಧಿಕಾರಿ ಹೇಳಿದ್ದಾರೆ.
ಆಕೆ ಕೂಗಿಕೊಂಡ ನಂತರ ಪ್ರಾಣಿ ಅವಳನ್ನು ಬಿಟ್ಟು ಕಾಡಿಗೆ ಪರಾರಿಯಾಯಿತು. ಆದರೆ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಅವರು ತಿಳಿಸಿದ್ದಾರೆ.
ಇದನ್ನು ಓದಿ: ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ- ಪ್ರಾಣಿ ಸಂಘರ್ಷ ಪ್ರಕರಣಗಳು: 3 ವರ್ಷಗಳಲ್ಲಿ 63 ಚಿರತೆಗಳ ಸೆರೆ
ಇದಕ್ಕು ಮುನ್ನ ಮಹಿಳೆ ಮೇಲೆ ಹುಲಿ ದಾಳಿ ನಡೆಸಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದರು. ಆದರೆ ಘಟನಾ ಸ್ಥಳದಲ್ಲಿ ಚಿರತೆಯ ಪಗ್‌ಮಾರ್ಕ್‌ಗಳು ಕಂಡುಬಂದಿವೆ ಎಂದು ಸಾವೊಲಿ ಪಿ ಜಿ ವಿರುತ್ಕರ್ ವ್ಯಾಪ್ತಿಯ ಅರಣ್ಯಾಧಿಕಾರಿ ಹೇಳಿದ್ದಾರೆ.
ಚಿರತೆಯನ್ನು ಸೆರೆ ಹಿಡಿಯಲು 10 ಜನರ ಅರಣ್ಯ ಸಿಬ್ಬಂದಿ ತಂಡ ಗ್ರಾಮದಲ್ಲಿ ಗಸ್ತು ತಿರುಗುತ್ತಿದ್ದು, ಆಸುಪಾಸಿನಲ್ಲಿ ಎರಡು ಬೋನುಗಳನ್ನು ಅಳವಡಿಸಿದೆ ಎಂದು ಅವರು ತಿಳಿಸಿದ್ದಾರೆ.