ಒಡಿಶಾ: ಕ್ರಿಕೆಟ್ ಪಂದ್ಯದ ವೇಳೆ ಚಾಕುವಿನಿಂದ ಇರಿತ; ಮೂವರು ಕಾಲೇಜ್ ವಿದ್ಯಾರ್ಥಿಗಳಿಗೆ ಗಾಯ
ಕಟಕ್ ಜಿಲ್ಲೆಯಲ್ಲಿ ಕ್ರಿಕೆಟ್ ಪಂದ್ಯದ ವೇಳೆ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ವಾರದ ನಂತರ, ಶನಿವಾರ ಇಲ್ಲಿನ ಬಕ್ಸಿ ಜಗಬಂಧು ಬಿದ್ಯಾಧರ್(ಬಿಜೆಬಿ) ಸ್ವಾಯತ್ತ ಕಾಲೇಜು ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯದ ವೇಳೆ...
Published: 23rd April 2023 04:06 PM | Last Updated: 23rd April 2023 04:06 PM | A+A A-

ಬಿಜೆಬಿ ಕಾಲೇಜ್
ಭುವನೇಶ್ವರ: ಕಟಕ್ ಜಿಲ್ಲೆಯಲ್ಲಿ ಕ್ರಿಕೆಟ್ ಪಂದ್ಯದ ವೇಳೆ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ವಾರದ ನಂತರ, ಶನಿವಾರ ಇಲ್ಲಿನ ಬಕ್ಸಿ ಜಗಬಂಧು ಬಿದ್ಯಾಧರ್(ಬಿಜೆಬಿ) ಸ್ವಾಯತ್ತ ಕಾಲೇಜು ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯದ ವೇಳೆ ಅದೇ ರೀತಿಯ ಘಟನೆ ನಡೆದಿದ್ದು, ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ವರದಿಗಳ ಪ್ರಕಾರ, ಶನಿವಾರ ಬೆಳಗ್ಗೆ ಕಾಲೇಜು ಮೈದಾನದಲ್ಲಿ ಕ್ರಿಕೆಟ್ ಪಂದ್ಯದ ವೇಳೆ ಸ್ಥಳೀಯ ಯುವಕರೊಂದಿಗೆ ವಾಗ್ವಾದದ ನಂತರ ವಿದ್ಯಾರ್ಥಿಗಳಿಗೆ ಚಾಕುವಿನಿಂದ ಇರಿಯಲಾಗಿದೆ. ಘಟನೆಯಲ್ಲಿ ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಇದನ್ನು ಓದಿ: ವಿಡಿಯೋ: ಪಿಂಚಣಿಗಾಗಿ ಮುರಿದ ಕುರ್ಚಿಯ ಸಹಾಯದಿಂದ ಕಿಲೋಮೀಟರ್‌ಗಟ್ಟಲೆ ಬರಿಗಾಲಿನಲ್ಲಿ ನಡೆದ 70 ವರ್ಷದ ಅಜ್ಜಿ
ಮೈದಾನಕ್ಕೆ ಬಂದ ಕಾಲೇಜಿನ ಸುಮಾರು 10 ರಿಂದ 12 ಪದವಿಪೂರ್ವ ವಿದ್ಯಾರ್ಥಿಗಳು ಅಲ್ಲಿ ವಿದ್ಯಾರ್ಥಿಗಳಲ್ಲದ ಗುಂಪು ಆಟವಾಡುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಎರಡು ಗುಂಪುಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ನಂತರ ಹತ್ತಿರದ ಸ್ಲಮ್‌ಗಳ ಕೆಲವು ಯುವಕರು ಸೇರಿದಂತೆ ವಿದ್ಯಾರ್ಥಿಗಳಲ್ಲದವರು ಕಾಲೇಜು ವಿದ್ಯಾರ್ಥಿಗಳ ಮೇಲೆ ದೊಣ್ಣೆ ಮತ್ತು ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದ್ದು, ಅವರಲ್ಲಿ ಮೂವರು ಗಾಯಗೊಂಡಿದ್ದಾರೆ.
ಮಾಹಿತಿ ತಿಳಿದ ಬಡಗದ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹಲ್ಲೆಗೆ ಸಂಬಂಧಿಸಿದಂತೆ ದೂರು ಸ್ವೀಕರಿಸಿದ ಪೊಲೀಸರು, 20 ರಿಂದ 25 ವರ್ಷದ ಮೂವರು ಯುವಕರನ್ನು ಬಂಧಿಸಿದ್ದಾರೆ.