
ಪೂಂಚ್ ನಲ್ಲಿ ಮೃತಪಟ್ಟ ಯೋಧರ ಪಾರ್ಥಿವ ಶರೀರ
ಶ್ರೀನಗರ: ಪೂಂಚ್ ನಲ್ಲಿ ಕಳೆದ ಮಂಗಳವಾರ ನಡೆದ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ 14 ಮಂದಿ ಕಾರ್ಯಕರ್ತರೂ ಸೇರಿದಂತೆ ಒಟ್ಟು 50 ಮಂದಿಯನ್ನು ಈ ವರೆಗೂ ಬಂಧಿಸಲಾಗಿದೆ. ದಾಳಿಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕರ ಹೆಡೆಮುರಿಕಟ್ಟಲು ಭಟ ಧುರಿಯನ್-ತೋಟ ಗಲಿ ಮತ್ತು ನೆರೆಯ ಪ್ರದೇಶಗಳಲ್ಲಿ ಬೃಹತ್ ಶೋಧಕರ್ಯಾಚರಣೆ ನಡೆದಿದೆ.
ವಿಶೇಷ ಪಡೆಗಳು ಮತ್ತು ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಕೂಡ ದಟ್ಟ ಅರಣ್ಯ ಪ್ರದೇಶಗಳಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ, ಡ್ರೋನ್‌ಗಳು, ಸ್ನಿಫರ್ ಡಾಗ್‌ಗಳು ಮತ್ತು ಮೆಟಲ್ ಡಿಟೆಕ್ಟರ್‌ಗಳನ್ನು ಈ ಕಾರ್ಯಾಚರಣೆಯಲ್ಲಿ ಬಳಸಲಾಗುತ್ತಿದೆ.
ದಾಳಿಗೆ ಸಂಬಂಧಿಸಿದಂತೆ 14 (ಓವರ್ ಗ್ರೌಂಡ್ ವರ್ಕರ್ ಗಳು) ಸೇರಿದಂತೆ ಸುಮಾರು 50 ಜನರನ್ನು ಬಂಧಿಸಲಾಗಿದೆ ಮತ್ತು ಅವರಲ್ಲಿ ಕೆಲವರನ್ನು ವಿಚಾರಣೆಯ ನಂತರ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ಪೂಂಚ್ ನಲ್ಲಿ ಭಯೋತ್ಪಾದಕ ದಾಳಿ: ವಿಚಾರಣೆಗಾಗಿ 40 ಮಂದಿ ವಶಕ್ಕೆ
7-8 ಭಯೋತ್ಪಾದಕರ ಎರಡು ಗುಂಪು ಈ ದಾಳಿಯನ್ನು ರೂಪಿಸಿದೆ ಎಂದು ನಂಬಲಾಗಿದೆ ಎಂದು ಮೂಲಗಳು ತಿಳಿಸಿವೆ. ತನಿಖೆಯ ಪ್ರಕಾರ, ಭಯೋತ್ಪಾದಕರು ವಾಹನದ ಮೇಲೆ ದಾಳಿ ಮಾಡುವ ಮೊದಲು ಈ ರಸ್ತೆಯ ಕಲ್ವರ್ಟ್‌ನಲ್ಲಿ ಅಡಗಿಕೊಂಡಿದ್ದರು ಎಂದು ವರದಿಯಾಗಿದೆ. ದಾಳಿಗೆ ಗುರಿಯಾದ ವಾಹನದಲ್ಲಿ 50 ಕ್ಕೂ ಹೆಚ್ಚು ಗುಂಡಿನ ಗುರುತುಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶೋಧ ಕಾರ್ಯಾಚರಣೆಯ ಸಮಯದಲ್ಲಿ, ಈ ಪ್ರದೇಶದಲ್ಲಿ ಕೆಲವು ನೈಸರ್ಗಿಕ ಗುಹೆಗಳಲ್ಲಿ ಅಡಗುತಾಣಗಳನ್ನು ಸೇನಾ ಪಡೆಗಳು ಪತ್ತೆ ಮಾಡಿವೆ, ಇದನ್ನು ಈ ಹಿಂದೆ ಭಯೋತ್ಪಾದಕರು ಬಳಸಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.