ಪೂಂಚ್ ದಾಳಿಯಲ್ಲಿ ಐವರು ಯೋಧರು ಹುತಾತ್ಮ: ಮೂರರಿಂದ ಐವರು ಉಗ್ರರಿಂದ ಕೃತ್ಯ, ಉಕ್ಕು ಲೇಪಿತ ಗುಂಡುಗಳ ಬಳಕೆ!

ಗಡಿ ಜಿಲ್ಲೆ ಪೂಂಚ್‌ನಲ್ಲಿ ಉಗ್ರರ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾದ ಒಂದು ವಾರದ ನಂತರ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಅವರು, ಮೂರರಿಂದ ಐದು ಉಗ್ರರು ದಾಳಿಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಹೇಳಿದರು.
ಪೂಂಚ್ ದಾಳಿ
ಪೂಂಚ್ ದಾಳಿ

ಶ್ರೀನಗರ: ಗಡಿ ಜಿಲ್ಲೆ ಪೂಂಚ್‌ನಲ್ಲಿ ಉಗ್ರರ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾದ ಒಂದು ವಾರದ ನಂತರ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಅವರು, ಮೂರರಿಂದ ಐದು ಉಗ್ರರು ದಾಳಿಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಹೇಳಿದರು.

ಬುಲೆಟ್ ಪ್ರೂಫ್ ಜಾಕೆಟ್ ಗಳನ್ನು ಭೇದಿಸಬಲ್ಲ ಉಕ್ಕು ಲೇಪಿತ ಗುಂಡುಗಳನ್ನು ಉಗ್ರರು ಬಳಸಿದ್ದಾರೆ. ಅಲ್ಲದೆ ಸ್ಥಳೀಯರ ಬೆಂಬಲ ಪಡೆದು ಉಗ್ರರು ಐಇಡಿಗಳನ್ನು ಬಳಸಿದ್ದಾರೆ. ಡ್ರೋನ್‌ ಮೂಲಕ ಐಇಡಿಯನ್ನು ಟ್ರಕ್ ಮೇಲೆ ಬೀಳಿಸಿದ್ದಾರೆ. ಉಗ್ರಗಾಮಿಗಳಿಗೆ ಆಶ್ರಯ ಮತ್ತು ಆಹಾರವನ್ನು ಒದಗಿಸುವಲ್ಲಿ ಮತ್ತು ಅವರ ಸಾಗಣೆಗೆ ಸಹಾಯ ಮಾಡುವಲ್ಲಿ ತೊಡಗಿಸಿಕೊಂಡಿದ್ದ ಆರು ಮಂದಿ ಸ್ಥಳೀಯರನ್ನು ಬಂಧಿಸಲಾಗಿದೆ ಎಂದು ದಿಲ್ಬಾಗ್ ಸಿಂಗ್ ಹೇಳಿದರು.

ಏಪ್ರಿಲ್ 20ರಂದು ದಾಳಿ ನಡೆದ ಪ್ರದೇಶದಲ್ಲಿ(ಭೀಂಬರ್ ಗಲಿ-ಸುರನ್‌ಕೋಟೆ-ಪೂಂಚ್ ರಸ್ತೆ) ಉಗ್ರರು ರೆಸಿಕ್ ನಡೆಸಿದ್ದರು. ರೆಸಿಕ್ ನಂತರ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇಳಿಜಾರಿನ ಭೂಪ್ರದೇಶದಲ್ಲಿ ದಾಳಿ ನಡೆಸಿದ್ದಾರೆ ಎಂದು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ.

ಏಪ್ರಿಲ್ 20ರಂದು ನಡೆದ ಉಗ್ರರ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದು, ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿದ್ದರು. ಉಗ್ರರು ಸ್ಥಳದಿಂದ ಪರಾರಿಯಾಗುವ ಮೊದಲು ಯೋಧರ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡಿದ್ದರು. ದಾಳಿಯಲ್ಲಿ ಮೂರ್ನಾಲ್ಕು ಉಗ್ರರು ಭಾಗಿಯಾಗಿದ್ದಾರೆ ಎಂದು ಡಿಜಿಪಿ ತಿಳಿಸಿದ್ದಾರೆ.

ಗುಂಡಿನ ದಾಳಿಯಲ್ಲಿ ಯೋಧರು ಗಾಯಗೊಂಡ ನಂತರ ಅವರು ವಾಹನ ಮೇಲೆ ಐಇಡಿ ಸ್ಫೋಟಿಸಿದ್ದಾರೆ. ಹೀಗಾಗಿ ಐಇಡಿ ಸ್ಫೋಟದಿಂದಾಗಿ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಹಿಂದೆ ಕಾಶ್ಮೀರದ ಪೂಂಚ್ ಮತ್ತು ರಜೌರಿಯಲ್ಲೂ ಉಕ್ಕು ಲೇಪಿತ ಗುಂಡುಗಳನ್ನು ಉಗ್ರರು ಬಳಸಿದ್ದರು ಎಂದು ಅವರು ಹೇಳಿದ್ದಾರೆ.

ಈ ವರ್ಷ ಜನವರಿ 1ರಂದು ರಾಜೌರಿಯ ಡ್ಯಾಂಗ್ರಿಯಲ್ಲಿ ಹಿಂದೂಗಳ ಮೇಲೆ ನಡೆದ ದಾಳಿಯಲ್ಲಿ ಈ ಗುಂಡುಗಳನ್ನು ಬಳಸಿದ್ದರು. ಉಗ್ರರಿಗೆ ಸ್ಥಳೀಯರ ಬೆಂಬಲ ಸಿಕ್ಕಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಜಿಪಿ, ಸ್ಥಳೀಯರ ಬೆಂಬಲವಿಲ್ಲದೆ ಈ ರೀತಿಯ ದಾಳಿ ನಡೆಸಲು ಸಾಧ್ಯವಿಲ್ಲ. ಉಗ್ರರಿಗೆ ಬೆಂಬಲ ನೀಡುತ್ತಿದ್ದ ಮಾಡ್ಯೂಲ್ ಅನ್ನು ನಾವು ಬಂಧಿಸಿದ್ದೇವೆ. ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com