ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ವಿರುದ್ಧ ಇಡಿಗೆ ದೂರು
ನಟಿ-ರಾಜಕಾರಣಿ ಮತ್ತು ತೃಣಮೂಲ ಕಾಂಗ್ರೆಸ್ ಲೋಕಸಭಾ ಸದಸ್ಯೆ ನುಸ್ರತ್ ಜಹಾನ್ ವಿರುದ್ಧ ಇಡಿ ದೂರು ಸ್ವೀಕರಿಸಿದೆ. ರಾಜ್ಯ ಬಿಜೆಪಿ ನಾಯಕ ಶಂಕುದೇಬ್ ಪಾಂಡಾ ಸೋಮವಾರ ಸಂಜೆ ಕೋಲ್ಕತ್ತಾದ ಹೊರವಲಯದಲ್ಲಿರುವ ಇಡಿ ಸಾಲ್ಟ್ ಲೇಕ್ ಕಚೇರಿಯಲ್ಲಿ ಜಹಾನ್ ವಿರುದ್ಧ ಖುದ್ದು ದೂರು ದಾಖಲಿಸಿದ್ದಾರೆ.
Published: 01st August 2023 03:32 PM | Last Updated: 01st August 2023 07:10 PM | A+A A-

ನುಸ್ರತ್ ಜಹಾನ್
ಕೋಲ್ಕತ್ತಾ: ನಟಿ-ರಾಜಕಾರಣಿ ಮತ್ತು ತೃಣಮೂಲ ಕಾಂಗ್ರೆಸ್ ಲೋಕಸಭಾ ಸದಸ್ಯೆ ನುಸ್ರತ್ ಜಹಾನ್ ವಿರುದ್ಧ ಇಡಿ ದೂರು ಸ್ವೀಕರಿಸಿದೆ. ರಾಜ್ಯ ಬಿಜೆಪಿ ನಾಯಕ ಶಂಕುದೇಬ್ ಪಾಂಡಾ ಸೋಮವಾರ ಸಂಜೆ ಕೋಲ್ಕತ್ತಾದ ಹೊರವಲಯದಲ್ಲಿರುವ ಇಡಿ ಸಾಲ್ಟ್ ಲೇಕ್ ಕಚೇರಿಯಲ್ಲಿ ಜಹಾನ್ ವಿರುದ್ಧ ಖುದ್ದು ದೂರು ದಾಖಲಿಸಿದ್ದಾರೆ.
ನುಸ್ರತ್ ಜಹಾನ್ ಈ ಹಿಂದೆ ನಿರ್ದೇಶಕರಾಗಿದ್ದ ಹಣಕಾಸು ಸಂಸ್ಥೆಯಿಂದ ವಂಚನೆಗೊಳಗಾದ ಕೆಲವು ವ್ಯಕ್ತಿಗಳೊಂದಿಗೆ ಪಾಂಡಾ ದೂರನ್ನು ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಸೆವೆನ್ ಸೆನ್ಸ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ನಾಲ್ಕು ವರ್ಷಗಳೊಳಗೆ ರಿಯಾಯಿತಿ ದರದಲ್ಲಿ ವಸತಿ ಫ್ಲಾಟ್ ನೀಡುವುದಾಗಿ ನಂಬಿಸಿ ರೂ, 6,00, 000 ಪಡೆದು ಹೂಡಿಕೆದಾರರನ್ನು ವಂಚಿಸಿದೆ ಎಂದು ಪಾಂಡಾ ಸಲ್ಲಿಸಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಜಹಾನ್ ಸೇರಿದಂತೆ ಸಂಸ್ಥೆಯ ನಿರ್ದೇಶಕರು ತಮ್ಮ ಸ್ವಂತ ಫ್ಲಾಟ್‌ಗಳನ್ನು ನಿರ್ಮಿಸಲು ಆ ಹಣವನ್ನು ಬಳಸಿರುವುದಾಗಿ ಸಂಸ್ಥೆಯ ನಿರ್ದೇಶಕರು ಹೇಳಿದ್ದಾರೆ. ಇದು ಹಣಕಾಸಿನ ಹಗರಣದ ಸ್ಪಷ್ಟ ಪ್ರಕರಣವಾಗಿದೆ. ಈ ಸಂಬಂಧ ನ್ಯಾಯಾಲಯದಲ್ಲಿ ಈ ಹಿಂದೆ ಪ್ರಕರಣ ದಾಖಲಾಗಿತ್ತು. ತೃಣಮೂಲ ಕಾಂಗ್ರೆಸ್ ಸಂಸದರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನ್ಯಾಯಾಲಯ ಹೇಳಿತು. ಆದರೆ, ಅದನ್ನು ಅವರು ಉಲ್ಲಂಘಿಸಿದ್ದರು. ಹಾಗಾಗಿ ಇಡಿಗೆ ದೂರು ನೀಡಿದ್ದೇವೆ ಎಂದು ಪಾಂಡಾ ತಿಳಿಸಿದರು.
ಫೆಬ್ರವರಿ 2012 ರಲ್ಲಿ ಆಂಗ್ಲೋ-ಇಂಡಿಯನ್ ಮಹಿಳೆಯೊಬ್ಬರ ಮೇಲೆ ಕುಖ್ಯಾತ ಪಾರ್ಕ್ ಸ್ಟ್ರೀಟ್ ಸಾಮೂಹಿಕ ಅತ್ಯಾಚಾರದ ನಂತರ ಜಹಾನ್ ವಿವಾದಕ್ಕೊಳಗಾಗಿದ್ದರು. ಪ್ರಕರಣದ ಪ್ರಮುಖ ಆರೋಪಿ ಖಾದರ್ ಖಾನ್‌ಗೆ ಆಶ್ರಯ ನೀಡಿದ್ದಕ್ಕಾಗಿ ಜಹಾನ್ ವಿರುದ್ಧ ಆರೋಪಗಳಿವೆ. 2019 ರ ಲೋಕಸಭಾ ಚುನಾವಣೆಯಲ್ಲಿ ಅವರು ಉತ್ತರ 24 ಪರಗಣ ಜಿಲ್ಲೆಯ ಬಸಿರ್ಹತ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದರು.