85ರ ವಯಸ್ಸಿನ ಮಹಿಳೆಯನ್ನು ಹತ್ಯೆ ಮಾಡಿದ 60ರ ವಯಸ್ಸಿನ ವ್ಯಕ್ತಿ; ಕೃತ್ಯ ಕ್ಯಾಮರಾದಲ್ಲಿ ಸೆರೆ!

85 ವರ್ಷದ ವೃದ್ಧೆಯನ್ನು 60 ವಯಸ್ಸಿನ ವೃದ್ಧನೋರ್ವ ಹಲ್ಲೆ ಮಾಡಿ ಹತ್ಯೆ ಮಾಡಿರುವ ಪೈಶಾಚಿಕ ಕೃತ್ಯ ರಾಜಸ್ಥಾನದ ಉದಯಪುರದಲ್ಲಿ ನಡೆದಿದೆ. 
85ರ ವಯಸ್ಸಿನ ಮಹಿಳೆಯನ್ನು ಹತ್ಯೆ ಮಾಡಿದ 60ರ ವಯಸ್ಸಿನ ವ್ಯಕ್ತಿ;
85ರ ವಯಸ್ಸಿನ ಮಹಿಳೆಯನ್ನು ಹತ್ಯೆ ಮಾಡಿದ 60ರ ವಯಸ್ಸಿನ ವ್ಯಕ್ತಿ;

ಉದಯ್ ಪುರ: 85 ವರ್ಷದ ವೃದ್ಧೆಯನ್ನು 60 ವಯಸ್ಸಿನ ವೃದ್ಧನೋರ್ವ ಹಲ್ಲೆ ಮಾಡಿ ಹತ್ಯೆ ಮಾಡಿರುವ ಪೈಶಾಚಿಕ ಕೃತ್ಯ ರಾಜಸ್ಥಾನದ ಉದಯಪುರದಲ್ಲಿ ನಡೆದಿದೆ. 

ತಮ್ಮ ಕಣ್ಣೆದುರೇ ಕೊಲೆಯ ಪ್ರಯತ್ನ ನಡೆಯುತ್ತಿದ್ದರೂ ಮಹಿಳೆಯನ್ನು ರಕ್ಷಿಸಲು ಏನನ್ನೂ ಮಾಡದೇ ಇಬ್ಬರು ಅಪ್ರಾಪ್ತ ಬಾಲಕರು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು. ವೃದ್ಧ ವ್ಯಕ್ತಿ ಮಹಿಳೆಯ ಮೇಲೆ ಛತ್ರಿಯಿಂದ ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾದ ಮಹಿಳೆ ಸಾವನ್ನಪ್ಪಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. 

ದೃಶ್ಯಾವಳಿಗಳಲ್ಲಿ ದಾಖಲಾಗಿರುವ ಪ್ರಕಾರ, ಆರೋಪಿ ಮದ್ಯಪಾನದ ಅಮಲಿನಲ್ಲಿರುವುದು ಸ್ಪಷ್ಟವಾಗಿದೆ. ಮದ್ಯದ ಅಮಲಿನಲ್ಲಿರುವ ಆತನನ್ನು ಓರ್ವ ವ್ಯಕ್ತಿ ತಡೆಯಲು ಯತ್ನಿಸುತ್ತಾನಾದರೂ ಅದು ವಿಫಲವಾಗಿ ಮಹಿಳೆ ಮೇಲೆ ಹಲ್ಲೆ ನಡೆದಿದೆ. 

"ಕುಡಿದ ಅಮಲಿನಲ್ಲಿದ್ದ ವ್ಯಕ್ತಿ ತನ್ನನ್ನು ತಾನು ಶಿವನ ಅವತಾರವೆಂದು ಭಾವಿಸಿದ್ದ. ಹಾಗೂ ಯಾವುದೇ ಮಹಿಳೆಯನ್ನು ಹತ್ಯೆ ಮಾಡಿ ಆ ನಂತರ ಆಕೆಗೆ ಮರುಜೀವ ನೀಡಬಹುದೆಂಬ ಭ್ರಮೆಯಲ್ಲಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ಮಹಿಳೆಯ ಪಕ್ಕದಲ್ಲಿ ಕುಳಿತಿದ್ದ ಆತ ಆಕೆಯ ಬಳಿ ನಾನು ಶಿವನ ಅನುಯಾಯಿ ಆತನೇ ನನ್ನನ್ನು ನಿನ್ನ ಬಳಿ ಕಳಿಸಿದ್ದಾನೆಂದು ಹೇಳುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ. ಅಷ್ಟೇ ಅಲ್ಲದೇ ಆಕೆಯ ಎದೆಗೆ ಏಕಾ ಏಕಿ ಗುದ್ದಿದ್ದಾನೆ, ಗುದ್ದಿದ ರಭಸಕ್ಕೆ ಆಕೆ ನೆಲಕ್ಕೆ ಉರುಳಿದ್ದಾಳೆ ನಂತರ ಛತ್ರಿಯಿಂದ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ವೃದ್ಧ ಮಹಿಳೆ ಹತ್ತಿರದಲ್ಲಿದ್ದ ತನ್ನ ಪರಿಚಯದವರ ಮನೆಗೆ ತೆರಳುತ್ತಿದ್ದಳು ಆಗ ಈ ಘಟನೆ ನಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com