ಏಮ್ಸ್ ಸಿಬ್ಬಂದಿ ಬಿಕ್ಕಟ್ಟು: ಮೋದಿ ಸರ್ಕಾರ ಭಾರತದ ಆರೋಗ್ಯ ವ್ಯವಸ್ಥೆಯನ್ನು 'ಅನಾರೋಗ್ಯ'ಗೊಳಿಸಿದೆ: ಮಲ್ಲಿಕಾರ್ಜುನ ಖರ್ಗೆ
ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಏಮ್ಸ್‌ಗೆ ವೈದ್ಯರು ಮತ್ತು ಸಿಬ್ಬಂದಿ ಕೊರತೆಯುಂಟಾಗುವಂತೆ ಮಾಡಿದ್ದು, ದೇಶದ ಆರೋಗ್ಯ ವ್ಯವಸ್ಥೆಯನ್ನು ಕೇಂದ್ರ ಸರ್ಕಾರವು 'ಅನಾರೋಗ್ಯ'ಗೊಳಿಸಿದೆ ಎಂದು ಆರೋಪಿಸಿದರು.
Published: 13th August 2023 03:11 PM | Last Updated: 17th August 2023 04:15 PM | A+A A-

ಏಮ್ಸ್ - ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಏಮ್ಸ್‌ಗೆ ವೈದ್ಯರು ಮತ್ತು ಸಿಬ್ಬಂದಿ ಕೊರತೆಯುಂಟಾಗುವಂತೆ ಮಾಡಿದ್ದು, ದೇಶದ ಆರೋಗ್ಯ ವ್ಯವಸ್ಥೆಯನ್ನು ಕೇಂದ್ರ ಸರ್ಕಾರವು 'ಅನಾರೋಗ್ಯ'ಗೊಳಿಸಿದೆ ಎಂದು ಆರೋಪಿಸಿದರು.
ಜನರು ಜಾಗೃತರಾಗಿದ್ದಾರೆ ಮತ್ತು ಮೋದಿ ಸರ್ಕಾರಕ್ಕೆ 'ವಿದಾಯ' ಕೋರುವ ಸಮಯ ಬಂದಿದೆ ಎಂದು ಕಾಂಗ್ರೆಸ್ ಮುಖ್ಯಸ್ಥರು ಹೇಳಿದ್ದಾರೆ.
19 ಏಮ್ಸ್‌ಗಳು ವೈದ್ಯರು ಮತ್ತು ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿವೆ ಎಂಬ ಮಾಧ್ಯಮ ವರದಿಯನ್ನು ಖರ್ಗೆ ಉಲ್ಲೇಖಿಸಿದ್ದಾರೆ.
लूट और जुमलों ने देश को किया अस्वस्थ,
मोदी जी के हर शब्द में केवल झूठ ही कंठस्थ !