ಟೊಮೆಟೊ ಬೆಲೆ ಕೆಜಿಗೆ 50-70 ರೂಪಾಯಿಗೆ ಇಳಿಕೆ: ಕೇಂದ್ರ ಸರ್ಕಾರ
ಹೊಸ ಬೆಳೆ ಆಗಮನದೊಂದಿಗೆ ಚಿಲ್ಲರೆ ಮಾರುಕಟ್ಟೆಗಳಲ್ಲಿ ಟೊಮೆಟೊ ಬೆಲೆ ಕೆಜಿಗೆ 50 ರಿಂದ 70 ರೂಪಾಯಿಗೆ ಕುಸಿದಿದ್ದು, ದರಗಳು ಸಾಮಾನ್ಯ ಮಟ್ಟಕ್ಕೆ ಬರುವವರೆಗೆ ರಿಯಾಯಿತಿ ದರದಲ್ಲಿ ಟೊಮೆಟೊ ಮಾರಾಟ ಮಾಡುವುದನ್ನು ಮುಂದುವರಿಸುವುದಾಗಿ ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.
Published: 21st August 2023 08:00 PM | Last Updated: 21st August 2023 08:05 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಹೊಸ ಬೆಳೆ ಆಗಮನದೊಂದಿಗೆ ಚಿಲ್ಲರೆ ಮಾರುಕಟ್ಟೆಗಳಲ್ಲಿ ಟೊಮೆಟೊ ಬೆಲೆ ಕೆಜಿಗೆ 50 ರಿಂದ 70 ರೂಪಾಯಿಗೆ ಕುಸಿದಿದ್ದು, ದರಗಳು ಸಾಮಾನ್ಯ ಮಟ್ಟಕ್ಕೆ ಬರುವವರೆಗೆ ರಿಯಾಯಿತಿ ದರದಲ್ಲಿ ಟೊಮೆಟೊ ಮಾರಾಟ ಮಾಡುವುದನ್ನು ಮುಂದುವರಿಸುವುದಾಗಿ ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.
ಅಕಾಲಿಕ ಮಳೆಯಿಂದಾಗಿ ದೇಶಾದ್ಯಂತ ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಕೆಜಿಗೆ 250 ರೂ.ಗೆ ಏರಿತ್ತು. ಪ್ರಸ್ತುತ ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಕೆಜಿಗೆ 50 ರಿಂದ 70 ರೂಪಾಯಿಯಷ್ಟಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಹೇಳಿದ್ದಾರೆ.
ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ಹೊಸ ಬೆಳೆ ಆಗಮನದಿಂದ ಬೆಲೆ ಕಡಿಮೆಯಾಗಲು ಪ್ರಾರಂಭಿಸಿವೆ. ಸಬ್ಸಿಡಿ ದರದಲ್ಲಿ ಟೊಮ್ಯಾಟೊ ಮಾರಾಟದಲ್ಲಿ, ದರಗಳು ಸಾಮಾನ್ಯ ಸ್ಥಿತಿಗೆ ಬರುವವರೆಗೆ ಆಯ್ದ ರಾಜ್ಯಗಳಲ್ಲಿ ರಿಯಾಯಿತಿ ದರದಲ್ಲಿ ಟೊಮೊಟೋ ಮಾರಾಟ ಮುಂದುವರೆಸುವುದಾಗಿ ಅವರು ಹೇಳಿದರು.
ಇದನ್ನೂ ಓದಿ: ಟೊಮೊಟೊ ದರ ಇಳಿಕೆಯಿಂದ ರೈತ ಕಂಗಾಲು; ಸಗಟು ದರ ಶೇ.30% ಕ್ಕಿಂತ ಹೆಚ್ಚು ಕುಸಿತ
ಸಹಕಾರಿ ಸಂಸ್ಥೆಗಳಾದ NCCF and NAFED ಆಗಸ್ಟ್ 20 ರಿಂದ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಗಳಲ್ಲಿ ಪ್ರತಿ ಕಿಲೋಗ್ರಾಂಗೆ 40 ರೂ.ಗೆ ಕಡಿಮೆ ದರದಲ್ಲಿ ಟೊಮ್ಯಾಟೊ ಮಾರಾಟವನ್ನು ಪ್ರಾರಂಭಿಸಿದೆ. ಕಳೆದ ತಿಂಗಳಿನಿಂದ ಭಾರತೀಯ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ ಮತ್ತು ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ ಬೆಲೆ ಏರಿಕೆ ತಡೆಗೆ ಗ್ರಾಹಕ ವ್ಯವಹಾರಗಳ ಸಚಿವಾಲಯದ ಪರವಾಗಿ ರಿಯಾಯಿತಿ ದರದಲ್ಲಿ ಟೊಮೆಟೊಗಳನ್ನು ಮಾರಾಟ ಮಾಡುತ್ತಿವೆ.