ದೆಹಲಿ: ಕೇಂದ್ರ ಸಚಿವ ಕಿರಣ್ ರಿಜಿಜು ಅಧಿಕೃತ ನಿವಾಸದ ಗೋಡೆಗೆ ಕ್ಯಾಬ್ ಡಿಕ್ಕಿ!
ದೆಹಲಿಯಲ್ಲಿರುವ ಕೇಂದ್ರ ಭೂ ವಿಜ್ಞಾನ ಸಚಿವ ಕಿರಣ್ ರಿಜಿಜು ಅವರ ಅಧಿಕೃತ ನಿವಾಸದ ಗೋಡೆಗೆ ಚಾಲಕನ ನಿಯಂತ್ರಣ ಕಳೆದುಕೊಂಡ ಟ್ಯಾಕ್ಸಿಯೊಂದು ಡಿಕ್ಕಿ ಹೊಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
Published: 24th August 2023 04:47 PM | Last Updated: 24th August 2023 04:47 PM | A+A A-

ಕೇಂದ್ರ ಸಚಿವ ಕಿರಣ್ ರಿಜಿಜು ನಿವಾಸದ ಗೋಡೆಕೆ ಕ್ಯಾಬ್ ಡಿಕ್ಕಿ
ನವದೆಹಲಿ: ದೆಹಲಿಯಲ್ಲಿರುವ ಕೇಂದ್ರ ಭೂ ವಿಜ್ಞಾನ ಸಚಿವ ಕಿರಣ್ ರಿಜಿಜು ಅವರ ಅಧಿಕೃತ ನಿವಾಸದ ಗೋಡೆಗೆ ಚಾಲಕನ ನಿಯಂತ್ರಣ ಕಳೆದುಕೊಂಡ ಟ್ಯಾಕ್ಸಿಯೊಂದು ಡಿಕ್ಕಿ ಹೊಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಡಿಕ್ಕಿಯ ರಭಸಕ್ಕೆ ಗೋಡೆಯ ಒಂದು ಭಾಗವು ಮುರಿದು ಬಿದ್ದಿದೆ ಮತ್ತು ರಂಧ್ರ ಉಂಟಾಗಿದೆ.
'ಚಾಲಕನನ್ನು ರಹೀಮ್ ಖಾನ್ ಎಂದು ಗುರುತಿಸಲಾಗಿದ್ದು, ಮೊದಲಿಗೆ ಡಿಟಿಸಿ ಬಸ್‌ಗೆ ಡಿಕ್ಕಿ ಹೊಡೆದ ನಂತರ ಕ್ಯಾಬ್‌ನ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ನಂತರ ಕೃಷ್ಣ ಮೆನನ್ ಮಾರ್ಗದಲ್ಲಿರುವ ಕಿರಣ್ ರಿಜಿಜು ಅವರ ಅಧಿಕೃತ ನಿವಾಸದ ಗೋಡೆಗೆ ಬುಧವಾರ ಡಿಕ್ಕಿ ಹೊಡೆದಿದೆ' ಎಂದು ಹಿರಿಯ ಪೊಲೀಸರು ತಿಳಿಸಿದ್ದಾರೆ.
ಘಟನೆ ನಂತರ ಹರಿಯಾಣದ ನುಹ್ ಮೂಲದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ವಿಚಾರಣೆ ವೇಳೆ ರಹೀಮ್ ಖಾನ್, ತನ್ನ ಕ್ಯಾಬ್‌ಗೆ ಬಸ್ ಡಿಕ್ಕಿ ಹೊಡೆದಿದ್ದು, ನಂತರ ನಿಯಂತ್ರಣ ಕಳೆದುಕೊಂಡು ಕೇಂದ್ರ ಸಚಿವರ ನಿವಾಸದ ಗೋಡೆಗೆ ಡಿಕ್ಕಿ ಹೊಡೆದಿದೆ ಎಂದು ವಿವರಿಸಿದ್ದಾನೆ. ನಂತರ ಆತನನ್ನು ಬಿಡುಗಡೆ ಮಾಡಲಾಗಿದೆ.
ರಹೀಮ್ ಖಾನ್ ತನ್ನ ಕುಟುಂಬದೊಂದಿಗೆ ನುಹ್‌ಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅಧಿಕಾರಿಗಳ ಪ್ರಕಾರ, ವಿಚಾರಣೆಯ ನಂತರ ಆತನನ್ನು ಬಿಡುಗಡೆ ಮಾಡಲಾಯಿತು.