ನೀರಜ್ ಚೋಪ್ರಾರಂತೆ ಇರಿ; ಹೃದಯಗಳನ್ನು ಗೆಲ್ಲಿರಿ, ಚಲನ್‌ಗಳನ್ನಲ್ಲ: ರಸ್ತೆ ಸುರಕ್ಷತೆ ಕುರಿತು ದೆಹಲಿ ಪೊಲೀಸರ ಟ್ವೀಟ್
ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳನ್ನು ಅನುಸರಿಸುವ ಕುರಿತು ಚಾಲಕರಿಗೆ ಜಾಗೃತಿ ಮೂಡಿಸಲು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಅವರ ಗೆಲುವನ್ನು ಉಲ್ಲೇಖಿಸಿ ದೆಹಲಿ ಪೊಲೀಸರು ಸಾಮಾಜಿಕ ಮಾಧ್ಯಮದಲ್ಲಿ ಸೃಜನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.
Published: 29th August 2023 01:02 PM | Last Updated: 29th August 2023 03:13 PM | A+A A-

ಸಾಂಕೇತಿಕ ಚಿತ್ರ
ನವದೆಹಲಿ: ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳನ್ನು ಅನುಸರಿಸುವ ಕುರಿತು ಚಾಲಕರಿಗೆ ಜಾಗೃತಿ ಮೂಡಿಸಲು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಅವರ ಗೆಲುವನ್ನು ಉಲ್ಲೇಖಿಸಿ ದೆಹಲಿ ಪೊಲೀಸರು ಸಾಮಾಜಿಕ ಮಾಧ್ಯಮದಲ್ಲಿ ಸೃಜನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ಚಾಲಕರೇ.. ನೀವು ನೀರಜ್ ಚೋಪ್ರಾ ಅವರಂತೆ ಇರಿ. ಹೃದಯಗಳನ್ನು ಗೆಲ್ಲಿರಿ, ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಮೂಲಕ ಚಲನ್‌ಗಳಲ್ಲ' ಎಂದು ಬರೆದಿದ್ದಾರೆ.
Be like #NeerajChopra
Win hearts, not Challans. pic.twitter.com/aNzV6acGpF— Delhi Police (@DelhiPolice) August 28, 2023
ಮುಂದುವರಿದು, 'ಚಾಲಕರು ಮತ್ತು ಸವಾರರಿಗೆ, ನೀವು ನೀರಜ್ ಅವರ ಜಾವೆಲಿನ್ ಅಲ್ಲ ಮತ್ತು ಬಿಳಿ ರೇಖೆಯನ್ನು ದಾಟುವುದರಿಂದ ನಿಮಗೆ ಯಾವುದೇ ಅಂಕಗಳು ಅಥವಾ ಪದಕಗಳು ಸಿಗುವುದಿಲ್ಲ' ಎಂದು ಅದು ಹೇಳಿದೆ.
ದೆಹಲಿ ಪೊಲೀಸರ ಈ ಟ್ವೀಟ್‌ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಬಳಕೆದಾರರಲ್ಲಿ ಒಬ್ಬರು, ಲೇನ್ ಡ್ರೈವಿಂಗ್ ಅನ್ನು ಆದ್ಯತೆಯ ಮೇಲೆ ಜಾರಿಗೊಳಿಸಬೇಕು ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್: ಚಿನ್ನ ಗೆದ್ದು ಹೊಸ ಇತಿಹಾಸ ಸೃಷ್ಟಿಸಿದ ನೀರಜ್ ಚೋಪ್ರಾ
ಆಗಸ್ಟ್ 27 ರಂದು ಹಂಗೇರಿಯ ಬುಡಾಪೆಸ್ಟ್‌ನಲ್ಲಿ ನಡೆದ ಪುರುಷರ ಜಾವೆಲಿನ್ ಫೈನಲ್‌ನಲ್ಲಿ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ 88.17 ಮೀಟರ್ ಎಸೆತದೊಂದಿಗೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಚೋಪ್ರಾ ಈಗ ಶೂಟರ್ ಅಭಿನವ್ ಬಿಂದ್ರಾ ನಂತರ ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿಗಳನ್ನು ಏಕಕಾಲದಲ್ಲಿ ಗೆದ್ದ ಎರಡನೇ ಭಾರತೀಯರಾಗಿದ್ದಾರೆ.
ಇದನ್ನೂ ಓದಿ: ವಿಶ್ವ ಅಥ್ಲೆಟಿಕ್ಸ್ ನಲ್ಲಿ ಭಾರತಕ್ಕೆ ಐತಿಹಾಸಿಕ ಚಿನ್ನ: 'ಒಲಿಂಪಿಕ್ ವೀರ' ನೀರಜ್ ಚೋಪ್ರಾ ಕೊಂಡಾಡಿದ ಪ್ರಧಾನಿ ಮೋದಿ
ಬಿಂದ್ರಾ ಅವರು 23ನೇ ವಯಸ್ಸಿನಲ್ಲಿ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದಿದ್ದರು ಮತ್ತು 25ನೇ ವಯಸ್ಸಿನಲ್ಲಿ ಒಲಿಂಪಿಕ್ಸ್ ಚಿನ್ನವನ್ನು ಗೆದ್ದಿದ್ದರು.