ಸೆಲ್ಯೂಟ್ ಹೊಡೆಯದ್ದಕ್ಕೆ ಕೆಂಡಾಮಂಡಲ: ಯುವಕನಿಗೆ ಮನಬಂದಂತೆ ಥಳಿಸಿದ ಜಾರ್ಖಂಡ್ ಕಾಂಗ್ರೆಸ್ ನಾಯಕನ ಪುತ್ರ!
ಸೆಲ್ಯೂಟ್ ಹೊಡೆಯದ್ದಕ್ಕೆ ತೀವ್ರವಾಗಿ ಕೆಂಡಾಮಂಡಲಗೊಂಡ ಜಾರ್ಖಂಡ್ ಕಾಂಗ್ರೆಸ್ ನಾಯಕನ ಪುತ್ರನೊಬ್ಬ, ಯುವಕನಿಗೆ ಮನಬಂದಂತೆ ಥಳಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Published: 30th August 2023 01:35 PM | Last Updated: 30th August 2023 03:18 PM | A+A A-

ಯುವಕನಿಗೆ ಥಳಿಸುತ್ತಿರುವುದು.
ರಾಂಚಿ: ಸೆಲ್ಯೂಟ್ ಹೊಡೆಯದ್ದಕ್ಕೆ ತೀವ್ರವಾಗಿ ಕೆಂಡಾಮಂಡಲಗೊಂಡ ಜಾರ್ಖಂಡ್ ಕಾಂಗ್ರೆಸ್ ನಾಯಕನ ಪುತ್ರನೊಬ್ಬ, ಯುವಕನಿಗೆ ಮನಬಂದಂತೆ ಥಳಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಧನ್‌ಬಾದ್‌ನಲ್ಲಿ ಕಾಂಗ್ರೆಸ್ ನಾಯಕ ರಣವಿಜಯ್ ಸಿಂಗ್ ಅವರ ಪುತ್ರ ರಣವೀರ್ ಸಿಂಗ್, ಯುವಕ ತಲೆಬಾಗಲಿಲ್ಲ ಎಂಬ ಕಾರಣಕ್ಕೆ ಮನಬಂದಂತೆ ಥಳಿಸಿದ್ದಾನೆ. ಕಾಂಗ್ರೆಸ್ ಮುಖಂಡನ ಮಗ ತನ್ನ ಸ್ನೇಹಿತರು ಮತ್ತು ವೈಯಕ್ತಿಕ ಅಂಗರಕ್ಷಕನೊಂದಿಗೆ ಸೇರಿ ಬಾಲಕನಿಗೆ ಹಾಕಿ ಸ್ಟಿಕ್‌ಗಳಿಂದ ಹೊಡೆದಿದ್ದಾನೆ. ಇದಾದ ಬಳಿಕ ಯುವಕನ ತಲೆಗೆ ಪಿಸ್ತೂಲ್‌ನಿಂದ ಹೊಡೆದು ಗಾಯಗೊಳಿಸಿದ್ದಾನೆ.
ಸೋಮವಾರ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
"Parnam kaahe nahi kiya re Madh**d!"
— Treeni (@_treeni) August 29, 2023
Dhanbad, Jharkhand: Ranveer, the son of a Congress leader Ranvijay Singh, brutally beat a student with the butt of a pistol for not touching his feet. An FIR has been registered after immense pressure. pic.twitter.com/VjdrTfg4xc
ವೈರಲ್ ಆಗಿರುವ ವಿಡಿಯೋದಲ್ಲಿ ಕಾಂಗ್ರೆಸ್ ನಾಯಕ ರಣವಿಜಯ್ ಸಿಂಗ್ ಅವರ ಪುತ್ರ ರಣವೀರ್ ಮತ್ತು ಅವರ ಅಂಗರಕ್ಷಕರು 17 ವರ್ಷದ ಆಕಾಶ್ ಎಂಬ ಯುವಕನಿಗೆ ಒದೆಯುತ್ತಿರುವುದು, ಪಿಸ್ತೂಲ್‌ನಿಂದ ತಲೆಗೆ ಹೊಡೆದಿರುವುದು ಕಂಡು ಬಂದಿದೆ. ಅಲ್ಲದೆ, ಈ ವೇಳೆ ಪ್ರಣಾಮ್ ಕ್ಯೋಂ ನಹಿಂ ಕಿಯಾ' ಎಂದು ಕೂಗುತ್ತಿರುವುದು ಕಂಡು ಬಂದಿದೆ.
ಈ ಸಂಬಂಧ ಆಕಾಶ್ ತಂದೆ ಧನ್‌ಬಾದ್‌ನ ಸರಾಯಿಧೆಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನಲ್ಲಿ ಪುತ್ರನ್ನು ಕೆಲಕಾಲ ಅಪಹರಿಸಿದ್ದ ರಣವೀರ್ ಸಿಂಗ್ ಅಂಗರಕ್ಷಕರು, ಅವರ ಕಾಲಿಗೆ ಬೀಳುವಂತೆ ಮಾಡಿದ್ದಾರೆ. ಬಳಿಕ ಬೂಟಿನಿಂದ ಒದ್ದು, ಪಿಸ್ತೂಲ್ ನಿಂದ ತಲೆಗೆ ಹೊಡೆದಿದ್ದಾರೆಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಜಾರ್ಖಂಡ್: ಡಿಆರ್ ಎಂ ಪತ್ನಿಗೆ ಶೂ ಕಳಚಲು ಹೇಳಿದ್ದೇ ತಪ್ಪಾಯ್ತು!: ಕಳಚಿದ್ದು ಆಸ್ಪತ್ರೆಯ ಸಿಬ್ಬಂದಿಯ ಬಟ್ಟೆ!
ದೆಹಲಿ ಪಬ್ಲಿಕ್ ಶಾಲೆಯಲ್ಲಿ 11ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದೇನೆ, ಕೋಚಿಂಗ್ ಸೆಂಟರ್ ನಿಂದ ಹೊರಬಂದ ನಾನು ಸ್ನೇಹಿತರೊಂದಿಗೆ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ನಿಂತಿದ್ದೆ. ಈ ವೇಳೆ ನೋಂದಣಿ ಸಂಖ್ಯೆ 0027 ಹೊಂದಿರುವ ಹಲವಾರು ವಾಹನಗಳು ನಮ್ಮ ಮುಂದೆ ಸಾಗಿದವು. ಈ ವೇಳೆ ಸೆಲ್ಯೂಟ್ ಹೊಡೆಯದ ಕಾರಣಕ್ಕೆ, ಕಾರಿನಿಂದ ಹೊರ ಬಂದ ರಣವೀರ್ ಹಾಗೂ ಆತನ 15 ಮಂದಿ ಅಂಗರಕ್ಷಕರು ಪ್ರಣಾಮ್ ಕ್ಯೋಂ ನಹಿಂ ಕಿಯಾ ಎಂದು ಪ್ರಶ್ನಿಸಿದರು. ಈ ವೇಳೆ ಸೆಲ್ಯೂಟ್ ಹೊಡೆಯಲು ನಿಕಾರಿಸಿದಾಗ ಥಳಿಸಲು ಆರಂಭಿಸಿದರು. ಬಳಿಕ ಬಲವಂತವಾಗಿ ವಾಹನ ಹತ್ತಿಸಿಕೊಂಡಿರು. ಟೀ ಸ್ಟಾಲ್ ವೊಂದರ ಬಳಿ ಕರೆದುಕೊಂಡು ಹೋಗಿ, ರಣವೀರ್ ಸಿಂಗ್ ಅವರ ಕಾಲಿಗೆ ಬೀಳುವಂತೆ ಮಾಡಿದರು. ಬಳಿಕ ತಂದೆಗೆ ಕರೆ ಮಾಡಿ, ಅಪಹರಣ ಮಾಡಿರುವುದಾಗಿ ಬೆದರಿಕೆ ಹಾಕಿದರು. ಫೋನ್ ಮಾಡಿದವರು ಯಾರು ಎಂದು ನನ್ನ ತಂದೆ ಕೇಳಿದಾಗ ಅಪ್ನೆ ಬೇಟೆ ಸೆ ಪುಚ್ ಲೆನಾ (ನಿಮ್ಮ ಮಗನನ್ನು ಕೇಳಿ) ಎಂದು ಹೇಳಿದರು ಎಂದು ಥಳಿತಕ್ಕೊಳಗಾದ ಬಾಲಕ ಹೇಳಿದ್ದಾನೆ.
ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮುಖಂಡರಾಗಿರುವ ರಣವೀರ್ ಸಿಂಗ್ ಅವರ ತಂದೆ, ರಾಜಕೀಯ ಕ್ಷೇತ್ರದಲ್ಲಿ ಜನಪ್ರಿಯತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನನ್ನ ವರ್ಚಸ್ಸು ಹಾಳು ಮಾಡುವ ಸಲುವಾಗಿ ಪಿತೂರು ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಯಾರ ಮುಖವೂ ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ವಿಡಿಯೋ ಸತ್ಯವೆಂದು ಹೇಳಲು ಸಾಧ್ಯ. ವೀಡಿಯೊ ತುಣುಕನ್ನು ಫೊರೆನ್ಸಿಕ್ ಪರೀಕ್ಷೆಗೊಳಪಡಿಸಬೇಕೆಂದು ಒತ್ತಾಯಿಸಿದ್ದಾರೆ.