ರಾಜಸ್ಥಾನ: ಫಲಿತಾಂಶ ಅನಿರೀಕ್ಷಿತ, ಜನಾದೇಶವನ್ನು ಒಪ್ಪಿಕೊಳ್ಳುತ್ತೇವೆ: ಗೆಹ್ಲೋಟ್

ರಾಜಸ್ಥಾನ ವಿಧಾನಸಭಾ ಚುನಾವಣಾ ಫಲಿತಾಂಶ ಎಲ್ಲರಿಗೂ ಅನಿರೀಕ್ಷಿತವಾಗಿದ್ದು, ಜನಾದೇಶವನ್ನು ಸ್ವೀಕರಿಸಲಾಗುವುದು ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಭಾನುವಾರ ಹೇಳಿದ್ದಾರೆ.
ಅಶೋಕ್ ಗೆಹ್ಲೋಟ್
ಅಶೋಕ್ ಗೆಹ್ಲೋಟ್

ಜೈಪುರ:  ರಾಜಸ್ಥಾನ ವಿಧಾನಸಭಾ ಚುನಾವಣಾ ಫಲಿತಾಂಶ ಎಲ್ಲರಿಗೂ ಅನಿರೀಕ್ಷಿತವಾಗಿದ್ದು, ಜನಾದೇಶವನ್ನು ಸ್ವೀಕರಿಸಲಾಗುವುದು ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಭಾನುವಾರ ಹೇಳಿದ್ದಾರೆ.

ರಾಜಸ್ಥಾನದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್  ಸೋಲಿಸುವ ಮೂಲಕ ಬಿಜೆಪಿ ಗೆಲ್ಲುವ ನಿರೀಕ್ಷೆಯಿದೆ. ಇತ್ತೀಚಿನ ಲಭ್ಯವಿರುವ ಟ್ರೆಂಡ್‌ಗಳ ಪ್ರಕಾರ, ಬಿಜೆಪಿ 52 ಸ್ಥಾನಗಳನ್ನು ಗೆದ್ದು 63 ರಲ್ಲಿ ಮುಂದಿದ್ದರೆ,  ಕಾಂಗ್ರೆಸ್ 26 ರಲ್ಲಿ ಗೆದ್ದು 43 ರಲ್ಲಿ ಮುನ್ನಡೆ ಸಾಧಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಗೆಹ್ಲೋಟ್, ರಾಜಸ್ಥಾನದ ಜನರು ನೀಡಿದ ಜನಾದೇಶವನ್ನು ವಿನಮ್ರತೆಯಿಂದ ಸ್ವೀಕರಿಸುತ್ತೇವೆ. ಇದು ಎಲ್ಲರಿಗೂ ಅನಿರೀಕ್ಷಿತ ಫಲಿತಾಂಶವಾಗಿದೆ. ಈ ಸೋಲು ನಮ್ಮ ಯೋಜನೆಗಳು, ಕಾನೂನುಗಳು ಮತ್ತು ನಾವೀನ್ಯತೆಗಳನ್ನು ಸಾರ್ವಜನಿಕರಿಗೆ ಕೊಂಡೊಯ್ಯುವಲ್ಲಿ ನಾವು ಸಂಪೂರ್ಣವಾಗಿ ಯಶಸ್ವಿಯಾಗಲಿಲ್ಲ ಎಂಬುದನ್ನು ತೋರಿಸುತ್ತದೆ. ಹಳೆ ಪಿಂಚಣಿ ಯೋಜನೆ, ಚಿರಂಜೀವಿ ಆರೋಗ್ಯ ವಿಮಾ ಯೋಜನೆ ಸೇರಿದಂತೆ ಕಳೆದ ಐದು ವರ್ಷಗಳಲ್ಲಿ ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಎಲ್ಲ ಯೋಜನೆಗಳನ್ನು ಮುಂದಿನ ಸರಕಾರ ಕೊಂಡೊಯ್ಯಬೇಕು ಎಂದಿದ್ದಾರೆ.

ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಗೆಹ್ಲೋಟ್, ಚುನಾವಣೆಗೆ ಸಂಪೂರ್ಣವಾಗಿ ಸಿದ್ಧರಾಗಿದ್ದೇವು. ನಮ್ಮ ಪ್ರಸ್ತುತ ಯೋಜನೆಗಳ ಆಧಾರದ ಮೇಲೆ ಜನರು ಮತ ಹಾಕುತ್ತಾರೆ ಎಂದು ನಾವು ಭಾವಿಸಿದ್ದೇವು. ಆದರೆ ಅದು ಆಗಲಿಲ್ಲ. ನಾವು ಇದನ್ನು ವಿಶ್ಲೇಷಿಸುತ್ತೇವೆ. ನಾನು. ಜನರು ಪ್ರಧಾನಿ ಮೋದಿ ಮತ್ತು  ಅಮಿತ್ ಶಾ ಅವರಿಂದ ಸೇಡು ತೀರಿಸಿಕೊಳ್ಳುತ್ತಾರೆ ಎಂದು ಭಾವಿಸಿದ್ದೇವು. ಆದರೆ ಸಾರ್ವಜನಿಕರು ಇದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com