ರಾಮಮಂದಿರದ ಪ್ರತಿಷ್ಠಾಪನೆಗೆ ಟಾಟಾ, ವಿರಾಟ್, ಸಚಿನ್‌, ಅಮಿತಾಬ್, ಅಂಬಾನಿ ಸೇರಿದಂತೆ 7000 ಗಣ್ಯರಿಗೆ ಆಹ್ವಾನ!

2024ರ ಜನವರಿ 22ರಂದು ಅಯೋಧ್ಯೆಯ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಇದರಲ್ಲಿ ಭಾಗವಹಿಸಲಿದ್ದಾರೆ.
ರಾಮಮಂದಿರ
ರಾಮಮಂದಿರ

ನವದೆಹಲಿ: 2024ರ ಜನವರಿ 22ರಂದು ಅಯೋಧ್ಯೆಯ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಇದರಲ್ಲಿ ಭಾಗವಹಿಸಲಿದ್ದಾರೆ. 450 ವರ್ಷಗಳ ಹೋರಾಟದ ನಂತರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಇದು ಹಿಂದೂಗಳಲ್ಲಿನ ಉತ್ಸಾಹವನ್ನು ಹೆಚ್ಚಿಸಿದೆ.

7000 ಗಣ್ಯರನ್ನು ರಾಮಮಂದಿರಕ್ಕೆ ಆಹ್ವಾನಿಸಲಾಗಿದ್ದು, ಅವರು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ಈ ಪೈಕಿ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ, ಹಿರಿಯ ನಟ ಅಮಿತಾಬ್ ಬಚ್ಚನ್ ಮತ್ತು ದೇಶದ ಶ್ರೀಮಂತ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರಿಗೂ ಆಹ್ವಾನ ಕಳುಹಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಭಾಗವಹಿಸಲಿದ್ದಾರೆ.

ದೇವಾಲಯದ ಟ್ರಸ್ಟ್ ಮೂಲಗಳ ಪ್ರಕಾರ, 150 ವೈದಿಕರು ಸಮಾರಂಭದ ವಿಧಿವಿಧಾನಗಳನ್ನು ನಡೆಸಲು ತೊಡಗಿಸಿಕೊಂಡಿದ್ದಾರೆ. ಕಾಶಿಯ ಶಂಕರಾಚಾರ್ಯ ವಿಜೇಂದ್ರ ಸರಸ್ವತಿ ಅವರ ಮಾರ್ಗದರ್ಶನದಲ್ಲಿ ಅರ್ಚಕರ ತಂಡವನ್ನು ಆಯ್ಕೆ ಮಾಡಲಾಗಿದೆ. 150 ಪುರೋಹಿತರ ತಂಡದೊಂದಿಗೆ ಕಾಶಿಯ ವೇದ ವಿದ್ವಾಂಸರಾದ ಲಕ್ಷ್ಮೀಕಾಂತ ದೀಕ್ಷಿತ್ ಮತ್ತು ಗಣೇಶ್ವರ ಶಾಸ್ತ್ರಿ ದ್ರಾವಿಡ್ ನೇತೃತ್ವದಲ್ಲಿ ಪೂಜೆ ನಡೆಯಲಿದೆ.

ಸಮಾರಂಭಕ್ಕೆ ಆಹ್ವಾನಿತರಲ್ಲಿ ಪ್ರಮುಖರೆಂದರೆ ಕೈಗಾರಿಕೋದ್ಯಮಿಗಳಾದ ಗೌತಮ್ ಅದಾನಿ ಮತ್ತು ರತನ್ ಟಾಟಾ, ಖ್ಯಾತ ಗಾಯಕಿ ಆಶಾ ಭೋಂಸ್ಲೆ, ನಟರಾದ ಅಕ್ಷಯ್ ಕುಮಾರ್, ಕಂಗನಾ ರನೌತ್, ಅರುಣ್ ಗೋವಿಲ್ ಗೆ ಆಹ್ವಾನ ನೀಡಲಾಗಿದೆ.

ಆಚರಣೆಗಳು ಜನವರಿ 15ರಿಂದ ಪ್ರಾರಂಭವಾಗುತ್ತವೆ. ಜನವರಿ 17ರಂದು ರಾಮಲಲ್ಲಾನ ವಿಗ್ರಹವನ್ನು ಹೊರತೆಗದೆು ಶೋಭಾ ಯಾತ್ರೆ ಮೂಲಕ ಜನ್ಮಭೂಮಿ ಆವರಣದಲ್ಲಿ ಸ್ಥಾಪಿಸಲಾಗುತ್ತದೆ. ಅದರ ನಂತರ ಜನವರಿ 18ರಿಂದ ಸರಣಿ ಪೂಜೆಗಳು ಮತ್ತು ಇತರ ಆಚರಣೆಗಳು ನಡೆಯಲಿವೆ.

ಬಿಹಾರದ ಸಾಮಾಜಿಕ ಕಾರ್ಯಕರ್ತ ರಾಕೇಶ್ ಪಾಂಡೆ 'ರಾಮ ಸ್ತಂಭ' ಪ್ರತಿಷ್ಠಾಪನೆ

'ಬ್ರಾವೋ ಫಾರ್ಮಾ' ಸಂಸ್ಥಾಪಕ ರಾಕೇಶ್ ಪಾಂಡೆ ಅವರು ಅಯೋಧ್ಯೆಯಲ್ಲಿ ರಾಮ ಮಂದಿರಕ್ಕಾಗಿ 'ರಾಮ ಸ್ತಂಭ' ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ. ಇತ್ತೀಚೆಗೆ ಚಂಪಾರಣ್‌ನ 100 ಯುವಕರನ್ನು ಕಾಶ್ಮೀರದ ಯಾತ್ರಾ ಸ್ಥಳಗಳಿಗೆ ಉಚಿತ ಪ್ರವಾಸಕ್ಕೆ ಕರೆದೊಯ್ದ ರಾಕೇಶ್ ಪಾಂಡೆ, ಬಿಹಾರದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. 2 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ 'ರಾಮಸ್ತಂಭ'ವನ್ನು ನಿರ್ಮಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com