ಗೋಮಾಂಸ ತಿನ್ನುವವರಿಗೂ ಬಾಗಿಲು ತೆರೆದಿದೆ, ಘರ್ ವಾಪ್ಸಿ ಮಾಡಬಹುದು: ಆರ್‌ಎಸ್‌ಎಸ್‌ ನಾಯಕ ದತ್ತಾತ್ರೇಯ ಹೊಸಬಾಳೆ

ಯಾವುದೋ ಕಾರಣಕ್ಕೆ ಹೋಗಿ ಬಲವಂತವಾಗಿ ಗೋಮಾಂಸ ಸೇವಿಸಿದವರಿಗೆ ನಾವು ಬಾಗಿಲು ಮುಚ್ಚುವುದಿಲ್ಲ. ಅವರು ಘರ್ ವಾಪ್ಸಿ ಮಾಡಬಹುದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ಎಸ್ಎಸ್) ನಾಯಕ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.
ದತ್ತಾತ್ರೇಯ ಹೊಸಬಾಳೆ
ದತ್ತಾತ್ರೇಯ ಹೊಸಬಾಳೆ

ನವದೆಹಲಿ: ಯಾವುದೋ ಕಾರಣಕ್ಕೆ ಹೋಗಿ ಬಲವಂತವಾಗಿ ಗೋಮಾಂಸ ಸೇವಿಸಿದವರಿಗೆ ನಾವು ಬಾಗಿಲು ಮುಚ್ಚುವುದಿಲ್ಲ. ಅವರು ಘರ್ ವಾಪ್ಸಿ ಮಾಡಬಹುದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ಎಸ್ಎಸ್) ನಾಯಕ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.

ಗೋಮಾಂಸ ಸೇವಿಸಿದವರು ಹಿಂದೂ ಧರ್ಮಕ್ಕೆ ಮರಳಬಹುದು. ಅವರ ಪೂರ್ವಜರು ಹಿಂದೂಗಳಾಗಿದ್ದವರು ಇಂದಿಗೂ ಹಿಂದೂಗಳಾಗಿದ್ದಾರೆ ಎಂದು ಹೇಳಿದರು. ಇಷ್ಟೇ ಅಲ್ಲ, ತನ್ನನ್ನು ತಾನು ಹಿಂದೂ ಎಂದು ಪರಿಗಣಿಸುವವನು ಹಿಂದೂ. ಇಷ್ಟೇ ಅಲ್ಲ, ನಾವು ಯಾರನ್ನು ಹಿಂದೂ ಎಂದು ಕರೆಯುತ್ತೇವೆಯೋ ಅವರೂ ಹಿಂದೂಗಳೇ.

ಭಾರತದಲ್ಲಿ ಆರುನೂರಕ್ಕೂ ಹೆಚ್ಚು ಬುಡಕಟ್ಟುಗಳಿವೆ. ಭಾರತ ವಿರೋಧಿ ಶಕ್ತಿಗಳು ಅವರನ್ನು ಹಿಂದೂ ಎಂದು ಪರಿಗಣಿಸುವುದಿಲ್ಲ. ಆದರೆ ಆತ ಹಿಂದೂ. ಬಲವಂತದಿಂದ ದನದ ಮಾಂಸ ಸೇವಿಸಿದರೂ, ಕಾರಣಾಂತರಗಳಿಂದ ದೂರ ಹೋದರೆ ಅವರಿಗೆ ಬಾಗಿಲು ಮುಚ್ಚುವಂತಿಲ್ಲ. ಅವರೂ ಘರ್ ವಾಪ್ಸಿ ಮಾಡಬಹುದು ಎಂದರು.

ಅಹಂಕಾರಕ್ಕಾಗಿ ಅಲ್ಲ, ಜಗತ್ತಿನ ಕತ್ತಲೆಯನ್ನು ಹೋಗಲಾಡಿಸಲು ಭಾರತ ಒಂದಾಗಲಿದೆ. ಭಾರತದಲ್ಲಿ ವಾಸಿಸುವ ಜನರು ಹಿಂದೂಗಳು ಏಕೆಂದರೆ ಅವರ ಪೂರ್ವಜರು ಹಿಂದೂಗಳು. ಭಾರತದ ಜನರ ಆರಾಧನಾ ವಿಧಾನ ವಿಭಿನ್ನವಾಗಿರಬಹುದು. ಆದರೆ ಅವರೆಲ್ಲರ ಡಿಎನ್ಎ ಒಂದೇ. ಒತ್ತಾಯಪೂರ್ವಕವಾಗಿ ಗೋಮಾಂಸ ಭಕ್ಷಕರನ್ನು ಕೂಡ ಹಿಂದೂ ಧರ್ಮಕ್ಕೆ ಮರಳಿ ತರಬಹುದು. ಅವರು ಬರಲು ಬಯಸಿದರೆ, ಅವರಿಗೆ ಬಾಗಿಲು ಮುಚ್ಚುವುದಿಲ್ಲ. ಹಿಂದೂ ಎಂಬುದು ಒಂದು ಗುರುತು ಮತ್ತು ಜನರು ಪರಸ್ಪರ ಸಂಪರ್ಕ ಹೊಂದಿರುವ ಸಂಸ್ಕೃತಿಯಾಗಿದೆ. 

ಎಂ.ಎಸ್.ಗೋಳ್ವಾಲ್ಕರ್ ಅವರು ಹಿಂದೂ ಎಂಬುದಕ್ಕೆ ನಿಖರವಾದ ವ್ಯಾಖ್ಯಾನವನ್ನು ಕೂಡಲು ಸಾಧ್ಯವಾಗಲಿಲ್ಲ. ಆದರೆ ವೀರ್ ಸಾವರ್ಕರ್ ಅವರು ತಮ್ಮ ಬರಹಗಳಲ್ಲಿ ಸಿಂಧೂ ನದಿಯವರೆಗಿನ ಭೂಮಿಯನ್ನು ತಮ್ಮ ಭೂಮಿ ಎಂದು ಪರಿಗಣಿಸುವವರು ಹಿಂದೂಗಳು ಎಂದು ಹೇಳಿದ್ದಾರೆ. 
ಎಂ.ಎಸ್.ಗೋಳ್ವಾಲ್ಕರ್ ಅವರನ್ನು ಉಲ್ಲೇಖಿಸಿ ಹೊಸಬಾಳೆ ಅವರು, ಅನ್ಯ ಧರ್ಮಕ್ಕೆ ಮತಾಂತರಗೊಂಡವರಿಗೆ ನಮ್ಮ ಬಾಗಿಲು ಮುಚ್ಚಲು ಸಾಧ್ಯವಿಲ್ಲ. ಬೇರೆ ಧರ್ಮಕ್ಕೆ ಮತಾಂತರಗೊಂಡವರನ್ನೂ ಹಿಂದುತ್ವಕ್ಕೆ ಕರೆತರಬಹುದು ಎಂದು ಗೋಳ್ವಾಲ್ಕರ್ ಹೇಳಿದ್ದರು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com