ನಾಳೆ ಬಿಜೆಪಿ ಸಂಸದರಿಗೆ ವಿತ್ತ ಸಚಿವರಿಂದ ಬಜೆಟ್ ಕೋಚಿಂಗ್ ಕ್ಲಾಸ್!
2024 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ನರೇಂದ್ರ ಮೋದಿ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಅನ್ನು ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಲೋಕಸಭೆ ಮತ್ತು ರಾಜ್ಯಸಭೆಯ ಬಿಜೆಪಿ ಸಂಸದರಿಗೆ ಬಜೆಟ್ ಕುರಿತು ಬ್ರೀಫಿಂಗ್ (ಸ೦ಕ್ಷಿಪ್ತ ವಿವರ) ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
Published: 02nd February 2023 04:30 PM | Last Updated: 02nd February 2023 05:13 PM | A+A A-

ವಿತ್ತ ಸಚಿವರಿಂದ ಬಜೆಟ್ ಕೋಚಿಂಗ್
ನವದೆಹಲಿ: 2024 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ನರೇಂದ್ರ ಮೋದಿ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಅನ್ನು ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಲೋಕಸಭೆ ಮತ್ತು ರಾಜ್ಯಸಭೆಯ ಬಿಜೆಪಿ ಸಂಸದರಿಗೆ ಬಜೆಟ್ ಕುರಿತು ಬ್ರೀಫಿಂಗ್ (ಸ೦ಕ್ಷಿಪ್ತ ವಿವರ) ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸಂಸದರಿಗೆ ಬಜೆಟ್ ಕುರಿತು ಸಚಿವೆ ನಿರ್ಮಲಾ ಸೀತಾರಾಮನ್ ವಿವರಣೆ ನೀಡಲಿದ್ದು, ರಾಷ್ಟ್ರ ರಾಜಧಾನಿಯ ಸಂಸತ್ ಲೈಬ್ರರಿ ಕಟ್ಟಡದಲ್ಲಿರುವ ಬಾಲಯೋಗಿ ಆಡಿಟೋರಿಯಂನಲ್ಲಿ ಬೆಳಿಗ್ಗೆ 9 ಗಂಟೆಗೆ ಬ್ರೀಫಿಂಗ್ ನಡೆಯಲಿದೆ ಎಂದು ಎಲ್ಲಾ ಸಂಸದರಿಗೆ ತಿಳಿಸಲಾಗಿದೆ.
ಇದನ್ನೂ ಓದಿ: ಸಪ್ತ ಋಷಿ ಸೂತ್ರ ಎನ್ನುವ ಗಾಳಿಮಾತು; ವಿದೇಶಿ ವಿತ್ತ ನೀತಿಯ ಚಾಟಿ ಏಟು!
ಸಮಾಜದ ಪ್ರತಿಯೊಂದು ಸ್ತರದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಎಂದರೆ ಏನು ಮತ್ತು ಅದನ್ನು ಹೇಗೆ ಹೊರತರಲಾಗಿದೆ ಎಂಬುದನ್ನು ಆಯಾ ಕ್ಷೇತ್ರಗಳಿಗೆ ಹೋಗಿ ಸಾಮಾನ್ಯ ಜನರಿಗೆ ತಿಳಿಸಿ ಎಂದು ಬಿಜೆಪಿ ಪಕ್ಷವು ತನ್ನ ಎಲ್ಲಾ ಸಂಸತ್ ಸದಸ್ಯರನ್ನು ಕೇಳಿರುವ ಸಮಯದಲ್ಲಿ ಈ ಬ್ರೀಫಿಂಗ್ ಸಭೆ ನಡೆಯುತ್ತಿದೆ.