ಭಯ ಸೃಷ್ಟಿಸಲು ಹಿಂದೂ ದೇಗುಲದ ಮೇಲೆ ದಾಳಿ: ಕೆನಡಾದಲ್ಲಿ ಧ್ವಂಸಗೊಂಡ ದೇವಾಲಯದ ಅರ್ಚಕ

ಹಿಂದೂ ದೇವಾಲಯಗಳ ಮೇಲಿನ ದಾಳಿ ಪ್ರಕರಣಗಳು, ಭಾರತ ವಿರೋಧಿ ಮತ್ತು ಖಲಿಸ್ತಾನಿ ಪರ ಬರಹಗಳು ಜನರನ್ನು ಚಿಂತೆಗೀಡು ಮಾಡಿವೆ.
ಭಾರತ ವಿರೋಧಿ ಬರಹ
ಭಾರತ ವಿರೋಧಿ ಬರಹ

ನವದೆಹಲಿ: ಹಿಂದೂ ದೇವಾಲಯಗಳ ಮೇಲಿನ ದಾಳಿ ಪ್ರಕರಣಗಳು, ಭಾರತ ವಿರೋಧಿ ಮತ್ತು ಖಲಿಸ್ತಾನಿ ಪರ ಬರಹಗಳು ಜನರನ್ನು ಚಿಂತೆಗೀಡು ಮಾಡಿವೆ.

"ಭಯ ಸೃಷ್ಟಿಸಲು, ಸಮುದಾಯಗಳ ನಡುವೆ ಬಿರುಕು ಮೂಡಿಸುವ ಉದ್ದೇಶದಿಂದ ಮಧ್ಯರಾತ್ರಿಯಲ್ಲಿ ನಮ್ಮ ದೇವಸ್ಥಾನವನ್ನು ಧ್ವಂಸಗೊಳಿಸಲಾಗಿದೆ. ಧಾರ್ಮಿಕ ಸ್ಥಳವನ್ನು ಇಂತಹ ಘೋಷಣೆಗಳಿಗೆ ಬಳಸುವುದು ಸರಿಯಲ್ಲ" ಎಂದು ಟೊರೊಂಟೊದ ಬ್ರಾಂಪ್ಟನ್ ನಲ್ಲಿರುವ ಗೌರಿ ಶಂಕರ ದೇವಸ್ಥಾನದ ಪ್ರಧಾನ ಅರ್ಚಕ ಪಂಡಿತ್ ಧೀರೇಂದ್ರ ತ್ರಿಪಾಠಿ ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಜನವರಿ 30 ರಂದು ಕೆನಡಾದ ಬ್ರಾಂಪ್ಟನ್ ಪ್ರಾಂತ್ಯದಲ್ಲಿರುವ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಲಾಗಿದ್ದು, ಪೊಲೀಸರು ತಪ್ಪಿತಸ್ಥರ ಹುಡುಕಾಟದಲ್ಲಿದ್ದಾರೆ.

2009 ರಲ್ಲಿ ಈ ದೇವಾಲಯ ನಿರ್ಮಿಸಿದ ನಂತರ ನಡೆದ ಮೊದಲ ದಾಳಿ ಇದಾಗಿದೆ ಎಂದು ಪಂಡಿತ್ ತ್ರಿಪಾಠಿ ಹೇಳುತ್ತಾರೆ.

"ಈ ದೇವಾಲಯಕ್ಕೆ ಭೇಟಿ ನೀಡುವ ಸುಮಾರು ಶೇ. 25 ರಷ್ಟು ಭಕ್ತರು ಸಿಖ್ಖರಾಗಿದ್ದಾರೆ ಮತ್ತು ಅವರು ಬರುವುದನ್ನು ನಾವು ತಡೆಯಲ್ಲ. ಜನ ಮತ್ತಷ್ಟು ಪ್ರಚೋದನೆಗೆ ಒಳಗಾಗದಂತೆ ಮತ್ತು ಅವರ ಕೋಪವನ್ನು ಕಡಿಮೆ ಮಾಡಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ. ಪ್ರತಿಭಟಿಸುವುದು ಸರಿ. ದ್ವೇಷಿಸುವುದು ಸರಿಯಲ್ಲ" ಎಂದು ಪಂಡಿತ್ ಹೇಳಿದ್ದಾರೆ.

ಖಲಿಸ್ತಾನ್ ಕಾರ್ಯಸೂಚಿಯನ್ನು ಜೀವಂತವಾಗಿಡಲು ಕೆಲವು ದುಷ್ಕರ್ಮಿಗಳು ಗುಂಪು ಇಂತಹ ಕೃತ್ಯಗಳಲ್ಲಿ ತೊಡಗಿದೆ. ಆದರೆ ಕೆನಡಾದ ಬಹುತೇಕ ಸಿಖ್ ಸಮುದಾಯದವರು ಅದನ್ನು ಬೆಂಬಲಿಸುವುದಿಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com