ಎಂಜಿನ್ ನಲ್ಲಿ ಬೆಂಕಿ: ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಅಬುಧಾಬಿಗೆ ವಾಪಸ್, ಪ್ರಯಾಣಿಕರು ಸುರಕ್ಷಿತ
ಅಬುಧಾಬಿಯಿಂದ ಕೇರಳದ ಕಲ್ಲಿಕೋಟೆಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಎಂಜಿನ್ ನಲ್ಲಿ ಬೆಂಕಿ ಜ್ವಾಲೆ ಕಾಣಿಸಿಕೊಂಡು ಮತ್ತೆ ಅಬುಧಾಬಿ ವಿಮಾನ ನಿಲ್ದಾಣದಲ್ಲಿ ಇಳಿದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
Published: 03rd February 2023 09:48 AM | Last Updated: 03rd February 2023 02:38 PM | A+A A-

ಸಾಂದರ್ಭಿಕ ಚಿತ್ರ
ಕಲ್ಲಿಕೋಟೆ: ಅಬುಧಾಬಿಯಿಂದ ಕೇರಳದ ಕಲ್ಲಿಕೋಟೆಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಎಂಜಿನ್ ನಲ್ಲಿ ಬೆಂಕಿ ಜ್ವಾಲೆ ಕಾಣಿಸಿಕೊಂಡು ಮತ್ತೆ ಅಬುಧಾಬಿ ವಿಮಾನ ನಿಲ್ದಾಣದಲ್ಲಿ ಇಳಿದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಸಂಖ್ಯೆ ಐಎಕ್ಸ್ 348 ರ ಪೈಲಟ್ ಬೆಂಕಿ ಜ್ವಾಲೆಯನ್ನು ಕಂಡು ಅಬುಧಾಬಿಗೆ ಹಿಂತಿರುಗಿದರು. ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಒಟ್ಟು 184 ಪ್ರಯಾಣಿಕರು ಪ್ರಯಾಣಿಸುತ್ತಿದ್ದಾಗ ಇಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಬೆಂಕಿ ಹೊತ್ತಿಕೊಂಡಿದೆ. ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು, ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಏರ್ ಇಂಡಿಯಾ ಎಕ್ಸ್‌ಪ್ರೆಸ್ B737-800 ಏರ್‌ಕ್ರಾಫ್ಟ್ VT-AYC ಆಪರೇಟಿಂಗ್ ಫ್ಲೈಟ್ IX 348 (ಅಬುಧಾಬಿ-ಕ್ಯಾಲಿಕಟ್) ವಿಮಾನ ಹೊರಟ ಸಮಯದಲ್ಲಿ 1000 ಅಡಿಗಳಷ್ಟು ಎತ್ತರ ಹೋದಾಗ ನಂ.1 ಎಂಜಿನ್ ಫ್ಲೇಮ್‌ಔಟ್‌ನಿಂದ ಏರ್‌ಟರ್ನ್‌ಬ್ಯಾಕ್‌ನಲ್ಲಿ ಬೆಂಕಿ ಕಾಣಿಸಿರಕೊಂಡಿತು ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶಕರು(DGCA) ತಿಳಿಸಿದ್ದಾರೆ.