ಪುದುಚೇರಿ: ಶಾಲಾ ಸಮವಸ್ತ್ರದಲ್ಲಿ ಸದನಕ್ಕೆ ಬಂದ ಡಿಎಂಕೆ ಶಾಸಕರು, ಸರ್ಕಾರದ ವಿರುದ್ಧ ಪ್ರತಿಭಟನೆ
ಪುದುಚೇರಿಗೆ ರಾಜ್ಯದ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿ ಅಂಗೀಕರಿಸಲು ಸರ್ಕಾರ ಹಿಂದೇಟು ಹಾಕುತ್ತಿರುವುದನ್ನು ಖಂಡಿಸಿ ಪ್ರತಿಪಕ್ಷ ಡಿಎಂಕೆ ಮತ್ತು ಕಾಂಗ್ರೆಸ್ ಸದಸ್ಯರು ಶುಕ್ರವಾರ ಪುದುಚೇರಿ...
Published: 03rd February 2023 04:00 PM | Last Updated: 03rd February 2023 04:00 PM | A+A A-

ಡಿಎಂಕೆ ಶಾಸಕರು
ಪುದುಚೇರಿ: ಪುದುಚೇರಿಗೆ ರಾಜ್ಯದ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿ ಅಂಗೀಕರಿಸಲು ಸರ್ಕಾರ ಹಿಂದೇಟು ಹಾಕುತ್ತಿರುವುದನ್ನು ಖಂಡಿಸಿ ಪ್ರತಿಪಕ್ಷ ಡಿಎಂಕೆ ಮತ್ತು ಕಾಂಗ್ರೆಸ್ ಸದಸ್ಯರು ಶುಕ್ರವಾರ ಪುದುಚೇರಿ ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿ ಸಭಾತ್ಯಾಗ ಮಾಡಿದರು.
ಇಂದು ವಿಧಾನಸಭೆ ಅಧಿವೇಶನಕ್ಕೆ ಶಾಲಾ ಸಮವಸ್ತ್ರದಲ್ಲಿ ಸೈಕಲ್‌ಗಳಲ್ಲಿ ಆಗಮಿಸಿದ ಡಿಎಂಕೆ ಸದಸ್ಯರು ಮತ್ತು ಕಾಂಗ್ರೆಸ್ ಸದಸ್ಯರು ರಾಜ್ಯದ ಸ್ಥಾನಮಾನ ಕುರಿತು ಸರ್ಕಾರ ನಿರ್ಣಯ ಅಂಗೀಕರಿಸಬೇಕು ಎಂದುಒತ್ತಾಯಿಸಿದರು.
ಇದನ್ನು ಓದಿ: ಪುದುಚೇರಿ: ಅಪಘಾತದಲ್ಲಿ ತಾತನ ಮೂಳೆ ಮುರಿತ; ರಸ್ತೆ ಗುಂಡಿಯನ್ನು ಮುಚ್ಚಿದ 8ನೇ ತರಗತಿ ಬಾಲಕ
ಬ್ರಿಟನ್ ರಾಣಿ ಎಲಿಜಬೆತ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ ನಂತರ ಮಾತನಾಡಿದ ಪ್ರತಿಪಕ್ಷದ ನಾಯಕ ಆರ್.ಶಿವ ಅವರು, ಪುದುಚೇರಿಗೆ ರಾಜ್ಯದ ಸ್ಥಾನಮಾನ ಕೋರಿ ನಿರ್ಣಯ ಮಂಡಿಸುವುದು ಅತ್ಯಂತ ಮುಖ್ಯವಾಗಿದೆ. ನಿರ್ಣಯದ ಕುರಿತು ಚರ್ಚಿಸಿ ಅಂಗೀಕರಿಸಲು ಸಮಯ ನೀಡಬೇಕು ಎಂದರು.
ಮುಖ್ಯಮಂತ್ರಿಗಳು ರಾಜ್ಯದ ಸ್ಥಾನಮಾನದ ಅಗತ್ಯ ಇದೆ ಎಂದು ಹೇಳುತ್ತಿದ್ದಾರೆ. ಆದರೆ ಲೆಫ್ಟಿನೆಂಟ್ ಗವರ್ನರ್ ಪುದುಚೇರಿ ಕೇಂದ್ರಾಡಳಿತ ಪ್ರದೇಶವಾಗಿದ್ದರೂ ಒಂದು ರಾಜ್ಯ ಪಡೆಯುವ ಎಲ್ಲಾ ಪ್ರಯೋಜನಗಳನ್ನು ಈಗ ಪಡೆಯುತ್ತಿದೆ ಎಂದಿದ್ದಾರೆ. ಇದರಲ್ಲಿ ಯಾವುದು ನಿಜ ಎಂಬುದನ್ನು ಸದನದ ಸಿಎಂ ಸ್ಪಷ್ಟಪಡಿಸಬೇಕು ಎಂದು ಆರ್.ಶಿವ ಒತ್ತಾಯಿಸಿದರು.