ಐಡಿಯಾ ಸೆಲ್ಯೂಲರ್-ವೋಡಾಫೋನ್
ಐಡಿಯಾ ಸೆಲ್ಯೂಲರ್-ವೋಡಾಫೋನ್

ವೋಡಾಫೋನ್ ಐಡಿಯಾದ 2 ಬಿಲಿಯನ್ ಡಾಲರ್ ಸಾಲದ ಬಾಕಿಯನ್ನು ಈಕ್ವಿಟಿಯಾಗಿ ಪರಿವರ್ತಿಸಿದ ಕೇಂದ್ರ

ವೋಡಾಫೋನ್ ಐಡಿಯಾದ 2 ಬಿಲಿಯನ್ ಡಾಲರ್ ಸಾಲದ ಬಾಕಿಯನ್ನು ಈಕ್ವಿಟಿಯನ್ನಾಗಿ ಕೇಂದ್ರ ಪರಿವರ್ತಿಸಲಿದ್ದು ಶೇ.33 ರಷ್ಟು ಈಕ್ವಿಟಿಯನ್ನು ತಾನು ಹೊಂದಲಿದೆ. 

ನವದೆಹಲಿ: ವೋಡಾಫೋನ್ ಐಡಿಯಾದ 2 ಬಿಲಿಯನ್ ಡಾಲರ್ ಸಾಲದ ಬಾಕಿಯನ್ನು ಈಕ್ವಿಟಿಯನ್ನಾಗಿ ಕೇಂದ್ರ ಪರಿವರ್ತಿಸಲಿದ್ದು ಶೇ.33 ರಷ್ಟು ಈಕ್ವಿಟಿಯನ್ನು ತಾನು ಹೊಂದಲಿದೆ. 

ಈ ಪ್ರಕ್ರಿಯೆಗಳ ಬಳಿಕ ಈ ಟೆಲಿಕಾಮ್ ಸಂಸ್ಥೆಯಲ್ಲಿ ಅತಿ ಹೆಚ್ಚು ಪಾಲನ್ನು ಕೇಂದ್ರ ಸರ್ಕಾರ ಹೊಂದಿರಲಿದೆ. 16,133 ಕೋಟಿ ರೂಪಾಯಿಗಳ ಬಾಕಿ ಸಾಲದ ಮೊತ್ತವನ್ನು ಈಕ್ವಿಟಿಯನ್ನಾಗಿ ಪರಿವರ್ತಿಸಲಾಗುತ್ತಿದೆ. 

ಬ್ರಿಟನ್ ನ ವೋಡಾಫೋನ್ ಹಾಗೂ ಭಾರತದ ಐಡಿಯಾ ಸೆಲ್ಯುಲರ್ ನ ವಿಲೀನವಾದ ಬಳಿಕ ಈ ಸಂಸ್ಥೆ ವೋಡಫೋನ್ ಐಡಿಯಾ ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿತ್ತು. 

ಮುಖೇಶ್ ಅಂಬಾನಿ ಅವರ ರಿಲಾಯನ್ಸ್ ಜಿಯೋ ಪ್ರವೇಶದಿಂದ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಬಹುದೊಡ್ದ ಬದಲಾವಣೆಯಾಗಿತ್ತು, ಪ್ರತಿಸ್ಪರ್ಧಿಗಳು ಮಾರುಕಟ್ಟೆಯಿಂದ ಹೊರನಡೆಯಬೇಕಾದ ಪರಿಸ್ಥಿತಿ ಬಂದಿತ್ತು. ಪರಿಣಾಮ ಸರ್ಕಾರಕ್ಕೆ ಅಂತಹ ಸಂಸ್ಥೆಗಳು ಸಾಲ, ಬಡ್ಡಿಯ ಬಾಕಿ ಮೊತ್ತವನ್ನೂ ಹಿಂತಿರುಗಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. 

ಕಳೆದ ವರ್ಷದ ಜನವರಿಯಲ್ಲಿ ವೋಡಾಫೋನ್ ಐಡಿಯಾದ ಮಂಡಳಿ ತಾನು ಸರ್ಕಾರಕ್ಕೆ ವಾಪಸ್ ನೀಡಬೇಕಿದ್ದ ಸಾಲದ ಬಾಕಿ ಮೊತ್ತವನ್ನು ಈಕ್ವಿಟಿಯನ್ನಾಗಿ ಪರಿವರ್ತಿಸುವುದಕ್ಕೆ ಅನುಮೋದನೆ ನೀಡಿತ್ತು. ಈಗ ಸರ್ಕಾರ ಅದಕ್ಕೆ ಒಪ್ಪಿಗೆ ಸೂಚಿಸಿದೆ. 

ಬಿಎಸ್ಇ ನಲ್ಲಿ ವೋಡಾಫೋನ್ ಐಡಿಯಾ ಷೇರುಗಳು 6.89 ರೂಪಾಯಿಗಳಿಗೆ ಕೊನೆಗೊಂಡಿದೆ ಈ ಹಿಂದೆ ಅಂತ್ಯಗೊಂಡ ವಹಿವಾಟಿನ ಬೆಲೆಗಿಂತಲೂ ಇದು ಶೇ.1.03 ರಷ್ಟು ಹೆಚ್ಚಳವಾಗಿದೆ. 

ಆದಿತ್ಯ ಬಿರ್ಲಾ ಸಮೂಹದಿಂದ ಈ ಸಂಸ್ಥೆಯನ್ನು ನಡೆಸುವ ಹಾಗೂ ಅಗತ್ಯವಿರುವ ಹೂಡಿಕೆಯನ್ನು ಆಕರ್ಷಿಸುವ ಬದ್ಧತೆ ಸಿಕ್ಕ ನಂತರವೇ ಸರ್ಕಾರ ಬಡ್ಡಿಯ ಬಾಕಿಯನ್ನು ಈಕ್ವಿಟಿಯನ್ನಾಗಿ ಪರಿವರ್ತಿಸಲು ಸರ್ಕಾರ ನಿರ್ಧರಿಸಿದೆ ಎಂದು ಟೆಲಿಕಾಮ್ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com