ಮುಷರಫ್ 'ಶಾಂತಿಯ ನಿಜವಾದ ಶಕ್ತಿ' ಎಂದ ತರೂರ್; ಪಾಕ್ ಧ್ಯಾನದಲ್ಲಿ ಕಾಂಗ್ರೆಸ್ - ಬಿಜೆಪಿ ತರಾಟೆ

ಪಾಕಿಸ್ತಾನ ಮಾಜಿ ಅಧ್ಯಕ್ಷ ಜನರಲ್(ನಿವೃತ್ತ) ಪರ್ವೇಜ್ ಮುಷರಫ್ ಅವರ ನಿಧನಕ್ಕೆ ಭಾನುವಾರ ಸಂತಾಪ ಸೂಚಿಸಿದ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು,"ಒಂದು ಕಾಲದಲ್ಲಿ ಭಾರತದ ಬದ್ಧ ವೈರಿಯಾಗಿದ್ದ ಅವರು...
ಶಶಿ ತರೂರ್
ಶಶಿ ತರೂರ್

ನವದೆಹಲಿ: ಪಾಕಿಸ್ತಾನ ಮಾಜಿ ಅಧ್ಯಕ್ಷ ಜನರಲ್(ನಿವೃತ್ತ) ಪರ್ವೇಜ್ ಮುಷರಫ್ ಅವರ ನಿಧನಕ್ಕೆ ಭಾನುವಾರ ಸಂತಾಪ ಸೂಚಿಸಿದ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು,"ಒಂದು ಕಾಲದಲ್ಲಿ ಭಾರತದ ಬದ್ಧ ವೈರಿಯಾಗಿದ್ದ ಅವರು,  2002 ಮತ್ತು 2007ರ ನಡುವೆ ಶಾಂತಿಯ ನಿಜವಾದ ಶಕ್ತಿಯಾಗಿದ್ದರು" ಎಂದು ಹೇಳಿದ್ದಾರೆ.

ತರೂರ್ ಟ್ವೀಟ್ ಗೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಬಿಜೆಪಿ, ಕಾಂಗ್ರೆಸ್ "ಪಾಕಿಸ್ತಾನದ ಧ್ಯಾನದಲ್ಲಿ ತೊಡಗಿದೆ" ಎಂದು ಟೀಕಿಸಿದೆ.

ಮಾಧ್ಯಮ ವರದಿಗಳ ಪ್ರಕಾರ, ಮುಷರಫ್ ಅವರು ಇಂದು ದುಬೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

"'ಪರ್ವೇಜ್ ಮುಷರಫ್, ಮಾಜಿ ಪಾಕಿಸ್ತಾನ ಅಧ್ಯಕ್ಷ, ಅಪರೂಪದ ಕಾಯಿಲೆಯಿಂದ ನಿಧನರಾಗಿದ್ದಾರೆ': ಒಮ್ಮೆ ಭಾರತದ ಬದ್ಧ ವೈರಿಯಾಗಿದ್ದ ಅವರು, 2002-2007ರ ನಡುವೆ ಶಾಂತಿಯ ನಿಜವಾದ ಶಕ್ತಿಯಾದರು," ಎಂದು ತರೂರ್ ಟ್ವೀಟ್‌ ಮಾಡಿದ್ದಾರೆ.

ತರೂರ್ ಅವರ ಟ್ವೀಟ್‌ಗಳನ್ನು ಟ್ಯಾಗ್ ಮಾಡಿರುವ ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಅವರು, "ಕಾರ್ಗಿಲ್ ವಾಸ್ತುಶಿಲ್ಪಿ, ಸರ್ವಾಧಿಕಾರಿ, ಘೋರ ಅಪರಾಧಗಳ ಆರೋಪಿ, ತಾಲಿಬಾನ್ ಮತ್ತು ಒಸಾಮಾರನ್ನು 'ಸಹೋದರರು' ಮತ್ತು 'ಹೀರೋಗಳು' ಎಂದು ಪರಿಗಣಿಸಿದ ಪರ್ವೇಜ್ ಮುಷರಫ್, ತನ್ನ ದೇಶದ ಸೈನಿಕರ ಶವಗಳನ್ನು ವಾಪಸ್ ಪಡೆಯಲು ನಿರಾಕರಿಸಿದ್ದ ವ್ಯಕ್ತಿಯನ್ನು ಕಾಂಗ್ರೆಸ್ ಶ್ಲಾಘಿಸುತ್ತಿದೆ! ನಿಮಗೆ ಅಚ್ಚರಿಯಾಗುತ್ತಿದೆಯೇ? ಕಾಂಗ್ರೆಸ್ ಪಾಕಿಸ್ತಾನದ ಧ್ಯಾನದಲ್ಲಿ ತೊಡಗಿದೆ!" ಎಂದು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com