ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಹಕ! ವಿಡಿಯೋ ವೈರಲ್
ಬ್ಯಾಂಕ್ ಸಿಬ್ಬಂದಿಗೆ ಗ್ರಾಹಕನೊಬ್ಬ ಮನಬಂದಂತೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ. ಬ್ಯಾಂಕ್ ಆಫ್ ಇಂಡಿಯಾ ನಾಡಿಯಾಡ್ ಶಾಖೆಯಲ್ಲಿ ಈ ಘಟನೆ ನಡೆದಿದೆ.
Published: 05th February 2023 06:09 PM | Last Updated: 05th February 2023 06:09 PM | A+A A-

ಬ್ಯಾಂಕ್ ಸಿಬ್ಬಂದಿಗೆ ಥಳಿತದ ಚಿತ್ರ
ನಾಡಿಯಾದ್: ಬ್ಯಾಂಕ್ ಸಿಬ್ಬಂದಿಗೆ ಗ್ರಾಹಕನೊಬ್ಬ ಮನಬಂದಂತೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ. ಬ್ಯಾಂಕ್ ಆಫ್ ಇಂಡಿಯಾ ನಾಡಿಯಾಡ್ ಶಾಖೆಯಲ್ಲಿ ಈ ಘಟನೆ ನಡೆದಿದೆ.
ಕೊನೆಗೆ ಇಬ್ಬರು ಶಂಕಿತರನ್ನು ಪೊಲೀಸರು ಬಂಧಿಸಿದ್ದು, ಎಸ್ ಸಿ-ಎಸ್ ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹಲ್ಲೆಗೊಳಗಾದ ಬ್ಯಾಂಕ್ ಸಿಬ್ಬಂದಿಯನ್ನು ಮನೀಶ್ ಧಂಗರ್ ಎಂದು ಗುರುತಿಸಲಾಗಿದೆ.
ಗ್ರಾಹಕ ಸಮರ್ಥ್ ಬ್ರಹ್ಮಭಟ್ ತನ್ನಗೆ 2-3 ಬಾರಿ ಕಪಾಳಕ್ಕೆ ಹೊಡೆದು, ಒದ್ದಿರುವುದಾಗಿ ಪೊಲೀಸ್ ದೂರಿನಲ್ಲಿ ಮನೀಶ್ ಧಂಗರ್ ಆರೋಪಿಸಿದ್ದಾರೆ. ಇತರ ಬ್ಯಾಂಕ್ ಉದ್ಯೋಗಿಗಳು ಸಮರ್ಥನನ್ನು ತಡೆಯಲು ಪ್ರಯತ್ನಿಸಿದಾಗ, ಆರೋಪಿಯ ಜೊತೆಗಿದ್ದ ಅವನ ಸ್ನೇಹಿತ ಪಾರ್ಥ್ ಕೂಡ ನನಗೆ ಒದ್ದಿರುವುದಾಗಿ ಎಂದು ಧಂಗರ್ ಪೊಲೀಸರಿಗೆ ತಿಳಿಸಿದ್ದಾರೆ.
#WATCH | An employee of the Bank of India, Nadiad branch was thrashed by a customer over the issue of a bank loan on 3rd February. Case registered under SC-ST (Prevention of Atrocities Act) in Nadiad Town Police Station#Gujarat pic.twitter.com/JJbMzA2cOO
— ANI (@ANI) February 5, 2023
ಬ್ಯಾಂಕ್‌ನಿಂದ ಸಾಲ ಪಡೆದಿರುವ ಆರೋಪಿ ಸಮರ್ಥ್ ತನ್ನ ಮನೆ ವಿಮಾ ಪಾಲಿಸಿಯ ಪ್ರತಿಯನ್ನು ಪ್ರಸ್ತುತಪಡಿಸಲು ನಿರಂತರವಾಗಿ ಕೇಳಿದ್ದರಿಂದ ಅಸಮಾಧಾನಗೊಂಡಿದ್ದ, ವಿಮಾ ಪಾಲಿಸಿಯನ್ನು ಸಲ್ಲಿಸುವುದಿಲ್ಲ ಎಂದು ಫೋನ್ ಮೂಲಕ ಬೆದರಿಕೆ ಹಾಕಿದ್ದ ಎಂದು ಧಂಗರ್ ತಿಳಿಸಿದ್ದಾರೆ.