ಪಿಎಂ ಪರೀಕ್ಷಾ ಪೇ ಚರ್ಚಾ: ಐದು ಆವೃತ್ತಿಗೆ 28 ಕೋಟಿ ರೂ. ವೆಚ್ಚ!

ಶಿಕ್ಷಣ ಸಚಿವಾಲಯದ ಪ್ರಕಾರ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮೊದಲ ಐದು ಆವೃತ್ತಿಯ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮಕ್ಕಾಗಿ ರೂ. 28ಕ್ಕಿಂತ ಅಧಿಕ ಹಣವನ್ನು ವೆಚ್ಚ ಮಾಡಲಾಗಿದೆ.
ಪ್ರಧಾನಿ ಮೋದಿ ಪರೀಕ್ಷಾ ಪೇ ಚರ್ಚಾ ಸಾಂದರ್ಭಿಕ ಚಿತ್ರ
ಪ್ರಧಾನಿ ಮೋದಿ ಪರೀಕ್ಷಾ ಪೇ ಚರ್ಚಾ ಸಾಂದರ್ಭಿಕ ಚಿತ್ರ

ನವದೆಹಲಿ: ಶಿಕ್ಷಣ ಸಚಿವಾಲಯದ ಪ್ರಕಾರ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮೊದಲ ಐದು ಆವೃತ್ತಿಯ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮಕ್ಕಾಗಿ ರೂ. 28ಕ್ಕಿಂತ ಅಧಿಕ ಹಣವನ್ನು ವೆಚ್ಚ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರೊಂದಿಗೆ ಪ್ರಧಾನಿ ಮೋದಿ ಪರೀಕ್ಷೆ ಕುರಿತು ಸಂವಾದ ನಡೆಸಿದ್ದರು.

ಆರನೇ ಆವೃತ್ತಿ ದೆಹಲಿಯ ಟಾಲ್ಕಾತೋರಾ ಸ್ಟೇಡಿಯಂಲ್ಲಿ ಜನವರಿ 27 ರಂದು ನಡೆದಿತ್ತು. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವೆ ಅನ್ನಪೂರ್ಣ ದೇವಿ ಲಿಖಿತ ರೂಪದಲ್ಲಿ ಈ ಅಂಕಿ ಅಂಶಗಳನ್ನು ಒದಗಿಸಿದರು. 

2018ರಲ್ಲಿ ಮೊದಲ ಆವೃತ್ತಿಯ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮಕ್ಕೆ ರೂ. 3.67 ಕೋಟಿ, 2019ರಲ್ಲಿ 4.93 ಕೋಟಿ, 2020ರಲ್ಲಿ ರೂ. 5.69 ಕೋಟಿ, 2021ರಲ್ಲಿ ರೂ. 6 ಕೋಟಿ, 2022ರಲ್ಲಿ ರೂ. 8.61 ಕೋಟಿ ವೆಚ್ಚ ಮಾಡಲಾಗಿದೆ.ಈ ವರ್ಷ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಮಾಡಲಾಗಿರುವ ವೆಚ್ಚದ ಕುರಿತು ಯಾವುದೇ ಮಾಹಿತಿ ನೀಡಿಲ್ಲ.

ಪರೀಕ್ಷಾ ಪೇ ಚರ್ಚಾ ವಾರ್ಷಿಕ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಬೋರ್ಡ್ ಪರೀಕ್ಷೆಯಲ್ಲಿ ಹಾಜರಾಗುವ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಈ ವರ್ಷ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದಾಖಲೆಯ 38 ಲಕ್ಷ ವಿದ್ಯಾರ್ಥಿಗಳು ನೋಂದಣಿಯಾಗಿದ್ದರು. ಕಳೆದ ವರ್ಷ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ 15ಲಕ್ಷಕ್ಕಿಂತಲೂ ಹೆಚ್ಚಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com